ಸಾರಾಂಶ
ಹಿಟ್ ಅಂಡ್ ರನ್ ಕಾನೂನು ವಿರೋಧಿಸಿ, ಸರ್ಕಾರವು ಈ ನಿಯಮಗಳನ್ನು ತಿದ್ದುಪಡಿ ಮಾಡಿ ಭಾರತದ ಎಲ್ಲಾ ಚಾಲಕರಿಗೆ ನ್ಯಾಯ ಒದಗಿಸಬೇಕೆಂದು ಟಿಪ್ಪರ್ ಚಾಲಕರ ಸಂಘ, ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಸೇರಿ ಇತರೆ ಸಂಘಟನೆಗಳು ಪ್ರತಿಭಟಿಸಿದವು.
ಕನ್ನಡಪ್ರಭ ವಾರ್ತೆ ಶಹಾಪುರ
ಹಿಟ್ ಅಂಡ್ ರನ್ ಕಾನೂನು ವಿರೋಧಿಸಿ ಸಿದ್ಧಾರ್ಥ ಟಿಪ್ಪರ್ ಚಾಲಕರ ಸಂಘ ಜಿಲ್ಲಾ ಸಮಿತಿ ಯಾದಗಿರಿ, ಶಹಾಪುರ ತಾಲೂಕು ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ, ಟ್ಯಾಕ್ಸಿ ಡ್ರೈವರ್‌ಗಳ ಸಂಘ, ಆಟೋ ಚಾಲಕರ ಸಂಘದ ವತಿಯಿಂದ ನಗರದ ಬಸವೇಶ್ವರ ವೃತ್ತದಿಂದ ಹೊಸ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗ್ರೇಡ್-2 ಸೇತು ಮಾಧವ ಕುಲಕರ್ಣಿ ಅವರ ಮೂಲಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಗುಂಡಪ್ಪ ತುಂಬಿಗಿ, ಚಾಲಕ ವಿರೋಧಿ ಕಾಯ್ದೆಯನ್ನು ತಕ್ಷಣ ಸರ್ಕಾರ ಹಿಂಪಡೆಯಬೇಕು. ಇಲ್ಲದಿದ್ದರೆ ಅನಿರ್ದಿಷ್ಟ ಮುಷ್ಕರ ಮುಂದುವರಿಯುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಟಿಪ್ಪರ್ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ರೆಡ್ಡಿ ದೋರನಹಳ್ಳಿ ಮಾತನಾಡಿ, ಸರ್ಕಾರವು ಈ ನಿಯಮಗಳನ್ನು ತಿದ್ದುಪಡಿ ಮಾಡಿ ಭಾರತದ ಎಲ್ಲಾ ಚಾಲಕರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.ತಾಲೂಕು ಕಾರ್ಯದರ್ಶಿ ಶಿವರಾಜ ಜಯಶೆಟ್ಟಿ, ಜಿಲ್ಲಾ ಗೌರವಾಧ್ಯಕ್ಷ ಶಿವಕುಮಾರ್, ಜಿಲ್ಲಾ ಕಾರ್ಯದರ್ಶಿ ಶಿವಪ್ಪ ಹೊಸಕೇರಾ, ಇಬ್ರಾಹಿಂ ಹೋತಪೇಟ್, ಮೊಹ್ಮದ್ ಜಾಹಿರ್ ಪಾಶಾ, ಹಣಮಂತ ಹತ್ತಿಗೂಡೂರು, ಸುಖಪ್ಪ ಬೇವಿನಹಳ್ಳಿ, ಮಹ್ಮದ್ ಖಲೀಲ್, ಮೊಹ್ಮದ್ ಹಮಿಮುದ್ದೀನ್, ಶರಣಪ್ಪ ಪೂಜಾರಿ, ರಾಜು ಅಬ್ದುಲ್ ಅಜೀಮ್, ಭೀಮಣ್ಣ ವಿಭೂತಿಹಳ್ಳಿ, ಯಲ್ಲಪ್ಪ, ರವಿ ಸಿಂಗನಹಳ್ಳಿ, ಚಂದಪ್ಪ ಗೋಗಿ, ಭೀಮರಾಯ ಇತರರಿದ್ದರು.