ಜಸ್ಟಿಸ್ ಎಚ್.ಎನ್. ನಾಗಮೋಹನದಾಸ ಆಯೋಗದ ವರದಿಯ ಪ್ರಕಾರ ೨೫-೦೮-೨೦೨೫ರ ಆದೇಶದಂತೆ ೫೬,೪೩೨ ಹುದ್ದೆಗಳನ್ನು ತುಂಬುವಾಗ ಒಳಮೀಸಲಾತಿ ಜಾರಿ ಮಾಡುವಂತೆ ಆಗ್ರಹಿಸಿ ಮಾದಿಗ ಮತ್ತು ಉಪಜಾತಿಗಳ ಒಕ್ಕೂಟಗಳ ಘಟಕ ಲೋಕಾಪುರ ವತಿಯಿಂದ ಲೋಕಾಪುರ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗೆ ಸೊಮವಾರ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಲೋಕಾಪುರ

ಜಸ್ಟಿಸ್ ಎಚ್.ಎನ್. ನಾಗಮೋಹನದಾಸ ಆಯೋಗದ ವರದಿಯ ಪ್ರಕಾರ ೨೫-೦೮-೨೦೨೫ರ ಆದೇಶದಂತೆ ೫೬,೪೩೨ ಹುದ್ದೆಗಳನ್ನು ತುಂಬುವಾಗ ಒಳಮೀಸಲಾತಿ ಜಾರಿ ಮಾಡುವಂತೆ ಆಗ್ರಹಿಸಿ ಮಾದಿಗ ಮತ್ತು ಉಪಜಾತಿಗಳ ಒಕ್ಕೂಟಗಳ ಘಟಕ ಲೋಕಾಪುರ ವತಿಯಿಂದ ಲೋಕಾಪುರ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗೆ ಸೊಮವಾರ ಮನವಿ ಸಲ್ಲಿಸಲಾಯಿತು.

ಮಾದಿಗ ಸಮಾಜದ ಮುಖಂಡ ವೈ.ಸಿ.ಕಾಂಬಳೆ ಮಾತನಾಡಿ, ಪರಿಶಿಷ್ಟ ಜಾತಿ ಜನಾಂಗಕ್ಕೆ ಒಳಮೀಸಲಾತಿ ಜಾರಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಕೊಟ್ಟು ಸರ್ವೋಚ್ಚ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ. ಸರಕಾರ ಪರಿಶಿಷ್ಟ ಜಾತಿ ಒಳಮೀಸಲಾತಿಗಾಗಿ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಆಯೋಗ ವರದಿ ನೀಡಿ ೧೨-೧೧-೨೦೨೪ರಂದು ಸಚಿವ ಅಂಗೀಕರಿಸಿ ಸಂಪುಟ ನಿರ್ಣಯ ಕೈಗೊಂಡಿತು. ೩೫-೪೦ ವರ್ಷದಿಂದ ನಿರಂತರ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿತು ಎಂದು ನಿಟ್ಟುಸಿ ಬಿಡುವಾಗಲೇ ಈಚೆಗೆ ಯಾವುದೋ ನೆಪ ನೀಡಿ ಒಳಮೀಸಲಾತಿ ರದ್ದು ಮಾಡಿ ಹಳೆ ಮೀಸಲಾತಿಯಂತೆ ರಾಜ್ಯ ಸರಕಾರ ೫೬,೪೩೨ ಹುದ್ದೆ ತುಂಬಲು ಆದೇಶ ಹೊರಡಿಸಿರುವುದು ಮಾದಿಗರ ಮರಣ ಶಾಸನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಾಜದ ಯುವ ಮುಖಂಡ ಕುಮಾರ ಕಾಳಮ್ಮನವರ ಮಾತನಾಡಿ, ಸಾಮಾಜಿಕ ನ್ಯಾಯ ಸಮಸಮಾಜ ನಿರ್ಮಾಣಕ್ಕಾಗಿ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಪ್ರಕಾರ ವಂಚಿತ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಿದರು.

ಸಮಾಜದ ಯುವ ಮುಖಂಡ ಸುರೇಶ ಹುಗ್ಗಿ ಮಾತನಾಡಿ, ಖಾಲಿ ಇರುವ ಹುದ್ದೆಗಳನ್ನು ತುಂಬುವ ನೆಪ ಮಾಡಿ ಯಾರದೋ ಒತ್ತಡಕ್ಕೆ ಮಣಿದು ಒಳಮೀಸಲಾತಿ ಜಾರಿಮಾಡದೇ ೫೬೪೩೨ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡಲು ಜಂಟಿ ಸದನದಲ್ಲಿ ಸರಕಾರ ಅಂಗೀಕಾರ ಮಾಡಿರುವುದು ಸಮುದಾಯಕ್ಕೆ ಮಾಡಿದ ಮಹಾದ್ರೋಹ ಎಂದು ದೂರಿದರು.

ವೈ.ಸಿ. ಕಾಂಬಳೆ, ಮಹೇಶ ಹುಗ್ಗಿ, ದುರ್ಗಪ್ಪ ಪರಸನ್ನವರ, ಮಂಜುನಾಥ ಕಾಂಬಳೆ, ಸುರೇಶ ಹುಗ್ಗಿ, ದುರಗಪ್ಪ ಕಾಳಮ್ಮನವರ, ಯಶವಂತ ಚಿಕ್ಕೂರ, ನಾಗರಾಜ ಜೀರಗಾಳ, ಸುರೇಶ ಪೂಜಾರಿ, ಕುಮಾರ ಕಾಳಮ್ಮನವರ, ರಂಗನಾಥ ಚಿಪ್ಪಲಕಟ್ಟಿ, ಯಮನಪ್ಪ ಜಾಲಿಕಟ್ಟಿ, ಶ್ರೀಕಾಂತ ಮಲ್ಲಾಪುರ, ಅರುಣ ಮುಧೋಳ, ವಸಂತ ದೊಡಮನಿ, ವಿಠ್ಠಲ ಭಂಟನೂರ, ರಾಮಚಂದ್ರ ಅರಳಿಕಟ್ಟಿ, ಲಕ್ಷö್ಮಣ ಹೆಬ್ಬಾಳ, ಪರಶುರಾಮ ಪರಸನ್ನವರ, ಅರ್ಜುನ ಕಾಂಬಳೆ, ಯಲ್ಲಪ್ಪ ತಿಮ್ಮಾಪುರ, ಹಣಮಂತ ಚವಡಾಪುರ, ರಮೇಶ ಪರಸಪ್ಪಗೋಳ, ಮೋಹನ ರೊಡ್ಡಪ್ಪನವರ, ರವಿ ರೊಡ್ಡಪ್ಪನವರ, ಗೋವಿಂದಪ್ಪ ಹುಗ್ಗಿ, ಆನಂದ ಹುಗ್ಗಿ, ದುರಗಪ್ಪ ತಿಮ್ಮಾಪುರ, ದುರಗಪ್ಪ ಜಾಲಿಕಟ್ಟಿ, ಮಹೇಶ ಕಾಂಬಳೆ, ಭೀಮಪ್ಪ ಹುಗ್ಗಿ, ವಿಠ್ಠಲ ಹುಗ್ಗಿ, ಯಮನಪ್ಪ ಕಾಳಮ್ಮನವರ, ಶಿವಪ್ಪ ರೊಡ್ಡಪ್ಪನವರ, ಮರಗಪ್ಪ ಜುನ್ನಪ್ಪನವರ, ಮರಗಪ್ಪ ಮುದಕವಿ, ಮತ್ತು ಮಾದಿಗ ಮತ್ತು ಉಪಜಾತಿಗಳ ಒಕ್ಕೂಟಗಳ ಸರ್ವಸದಸ್ಯರು, ಹಿರಿಯರು, ಯುವಕರು ಇದ್ದರು.