ತೀವ್ರ ಮಳೆ ಅಭಾವ ಮುಂಗಾರು ಹಾಗೂ ಹಿಂಗಾರು ಋತುವಿನಲ್ಲಿ ನಿರೀಕ್ಷಿತ ಪ್ರಮಾಣಕ್ಕಿಂತ ಅತ್ಯಂತ ಕಡಿಮೆ ಮಳೆಯಾಗಿದ್ದು, ಶೇಕಡಾವಾರು ತೀವ್ರ ಅಭಾವ ಎದುರಾಗಿದೆ. ನೀರಿಲ್ಲದೆ ಬಿತ್ತನೆ ಮಾಡಿದ ಬೆಳೆಗಳು ಪೂರ್ಣವಾಗಿ ಒಣಗಿಹೋಗಿದ್ದು, ರೈತರು ಹೂಡಿದ ಬಂಡವಾಳ ಸಂಪೂರ್ಣ ನಷ್ಟವಾಗಿದೆ. ಅಂತರ್ಜಲ ಕುಸಿತದಿಂದ ತಾಲೂಕಿನಾದ್ಯಂತ ಬೋರ್‌ವೆಲ್‌ಗಳು ಬಟಾಬಯಲಾಗಿದ್ದು, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ತೀವ್ರ ಅಭಾವ ಸೃಷ್ಟಿಯಾಗಿದೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತಾಲೂಕನ್ನು ತಕ್ಷಣವೇ ಅಧಿಕೃತವಾಗಿ ‘ಬರಪೀಡಿತ ತಾಲೂಕು’ಗಳ ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಬೇಕು.

ಕನ್ನಡಪ್ರಭ ವಾರ್ತೆ ಆಲೂರು

ಸ್ಥಳೀಯ ಶಾಸಕರು ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಕೂಡಲೇ ಕೃಷಿ ಸಾಲಮನ್ನಾ ಮಾಡಿ. ಬರಗಾಲ ಘೋಷಣೆ ಮಾಡಿ. ರಾಜ್ಯದಲ್ಲಿ ಮಳೆಯ ಅಭಾವದಿಂದಾಗಿ ಎದುರಾಗಿರುವ ತೀವ್ರ ಬೆಳೆ ಹಾನಿ ಹಾಗೂ ಕೃಷಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಆಲೂರು ತಾಲೂಕನ್ನು ತಕ್ಷಣವೇ ‘ಬರಪೀಡಿತ ತಾಲೂಕು’ ಎಂದು ಘೋಷಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಕಣಗಾಲ್ ಮೂರ್ತಿ ನೇತೃತ್ವದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿತು.

ತೀವ್ರ ಮಳೆ ಅಭಾವ ಮುಂಗಾರು ಹಾಗೂ ಹಿಂಗಾರು ಋತುವಿನಲ್ಲಿ ನಿರೀಕ್ಷಿತ ಪ್ರಮಾಣಕ್ಕಿಂತ ಅತ್ಯಂತ ಕಡಿಮೆ ಮಳೆಯಾಗಿದ್ದು, ಶೇಕಡಾವಾರು ತೀವ್ರ ಅಭಾವ ಎದುರಾಗಿದೆ. ನೀರಿಲ್ಲದೆ ಬಿತ್ತನೆ ಮಾಡಿದ ಬೆಳೆಗಳು ಪೂರ್ಣವಾಗಿ ಒಣಗಿಹೋಗಿದ್ದು, ರೈತರು ಹೂಡಿದ ಬಂಡವಾಳ ಸಂಪೂರ್ಣ ನಷ್ಟವಾಗಿದೆ. ಅಂತರ್ಜಲ ಕುಸಿತದಿಂದ ತಾಲೂಕಿನಾದ್ಯಂತ ಬೋರ್‌ವೆಲ್‌ಗಳು ಬಟಾಬಯಲಾಗಿದ್ದು, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ತೀವ್ರ ಅಭಾವ ಸೃಷ್ಟಿಯಾಗಿದೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತಾಲೂಕನ್ನು ತಕ್ಷಣವೇ ಅಧಿಕೃತವಾಗಿ ‘ಬರಪೀಡಿತ ತಾಲೂಕು’ಗಳ ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಬೇಕು.

ಸರ್ಕಾರ ಬೆಳೆ ನಷ್ಟ ಪರಿಹಾರ ನೀಡಲಿ ನಷ್ಟಕ್ಕೊಳಗಾದ ಪ್ರತಿಯೊಬ್ಬ ರೈತನಿಗೆ ಎಕರೆಗೆ ಸೂಕ್ತ ಪ್ರಮಾಣದ ವೈಜ್ಞಾನಿಕ ಪರಿಹಾರ ಧನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡುಬೇಕು. ಸಾಲ ಮನ್ನಾ ಹಾಗೂ ವಸೂಲಾತಿ ತಡೆದು ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಕೃಷಿ ಸಾಲದ ಬಡ್ಡಿ ಮನ್ನಾ ಮಾಡುವುದು ಹಾಗೂ ಸಾಲ ವಸೂಲಾತಿ ಪ್ರಕ್ರಿಯೆಯನ್ನು ತಕ್ಷಣವೇ ತಡೆಹಿಡಿಯಬೇಕು, ಈ ನಮ್ಮ ಮನವಿಯನ್ನು ಸ್ಥಳೀಯ ತಹಸೀಲ್ದಾರ್‌ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ರವಾನಿಸಿ, ಸರ್ಕಾರ ವೈಜ್ಞಾನಿಕ ಜಂಟಿ ಸಮೀಕ್ಷೆ ನಡೆಸಿ ಶೀಘ್ರವೇ ಸ್ಪಂದಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆಯಂತಹ ಮತ್ತು ತೀವ್ರ ಸ್ವರೂಪದ ಅನಿರ್ದಿಷ್ಟಾವಧಿ ಹೋರಾಟ ಕೈಗೊಳ್ಳುವುದಾಗಿ ರೈತ ಸಂಘದ ನಾಯಕರು ಎಚ್ಚರಿಸಿದ್ದಾರೆ.