ಗದಗ ವಿಧಾನಸಭಾ ಕ್ಷೇತ್ರದಿಂದ ಆ. 19ರಂದು ಬೆಳಗ್ಗೆ 10.30ರಿಂದ ಸಂಜೆ 6ರ ವರೆಗೆ ಪ್ರತಿಭಟನೆ ನಡೆಯಲಿದೆ.

ಗದಗ: ಜಿಲ್ಲಾ ಬಿಜೆಪಿ ವತಿಯಿಂದ ಮತಕ್ಷೇತ್ರವಾರು ಆ. 19ರಿಂದ ಆ. 22ರ ವರೆಗೆ ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಹಗರಣದಲ್ಲಿ ಆರೋಪಿ ಆಗಿರುವ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ತಿಳಿಸಿದರು.

ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗದಗ ವಿಧಾನಸಭಾ ಕ್ಷೇತ್ರದಿಂದ ಆ. 19ರಂದು ಬೆಳಗ್ಗೆ 10.30ರಿಂದ ಸಂಜೆ 6ರ ವರೆಗೆ, ಶಿರಹಟ್ಟಿ ವಿಧಾನಸಭಾ ಕ್ಷೇತ್ರದಿಂದ ಆ. 20ರಂದು ಬೆಳಗ್ಗೆ 10.30ರಿಂದ ಸಂಜೆ 6ರ ವರೆಗೆ, ನರಗುಂದ ವಿಧಾನಸಭಾ ಕ್ಷೇತ್ರದಿಂದ ಆ. 21ರಂದು ಬೆಳಗ್ಗೆ 10.30ರಿಂದ ಸಂಜೆ 6ರ ವರೆಗೆ, ರೋಣ ವಿಧಾನಸಭಾ ಕ್ಷೇತ್ರದಿಂದ ಆ. 22ರಂದು ಬೆಳಗ್ಗೆ 10.30ರಿಂದ ಸಂಜೆ 6ರ ವರೆಗೆ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ನಡೆಯುವ 4 ದಿನದ ಪ್ರತಿಭಟನೆಯಲ್ಲಿ ಪಕ್ಷದ ಚುನಾಯಿತ ಪ್ರತಿನಿಧಿಗಳು, ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.

ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಆರ್.ಕೆ. ಚವಾಣ, ಫಕ್ಕಿರೇಶ ರಟ್ಟಿಹಳ್ಳಿ, ಅನೀಲ ಅಬ್ಬಿಗೇರಿ, ಬೂದಪ್ಪ ಹಳ್ಳಿ, ಶಿವಪ್ಪ ಬಿಡನಾಳ ಸೇರಿದಂತೆ ಇತರರು ಇದ್ದರು.ಇಂದು ಪ್ರಣವ ಧ್ವಜಾರೋಹಣ

ನರಗುಂದ: ಪಟ್ಟಣದ ಪುಣ್ಯಾರಣ್ಯ ಪತ್ರಿವನ ಮಠದ ಶಂಭುಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಆ. 18ರಂದು ಬೆಳಗ್ಗೆ 8 ಗಂಟೆಗೆ ಮಠದ ಆವರಣದಲ್ಲಿ ಪ್ರಣವ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ.ಸಾನಿಧ್ಯವನ್ನು ನವಲಗುಂದ ಪಂಚಗೃಹ ಹಿರೇಮಠದ ಇಮ್ಮಡಿ ಸಿದ್ಧೇಶ್ವರ ಶಿವಾಚಾರ್ಯ ಶ್ರೀಗಳು, ಕಿತ್ತಲಿಯ ಸಿದ್ಧರಾಮೇಶ್ವರ ಮಠದ ಸಿದ್ಧರಾಮ ಶ್ರೀಗಳು, ಪತ್ರೀವನ ಮಠದ ಗುರು ಸಿದ್ದವೀರ ಶಿವಯೋಗಿ ಶಿವಾಚಾರ್ಯ ಶ್ರೀಗಳು, ಧಾರವಾಡ ಕೆಲಗೇರಿ ಶಿವಾನಂದ ಮಠದ ಚಂದ್ರಶೇಖರ ಶ್ರೀಗಳು ವಹಿಸುವರು.ಆತಿಥಿಗಳಾಗಿ ಬನಹಟ್ಟಿ ಹಿರೇಮಠದ ಬಸಯ್ಯಶಾಸ್ತ್ರೀಗಳು, ಶ್ರೀನಿವಾಸ ಇನಾಮದಾರ, ಬಸಪ್ಪ ಹೂಗಾರ, ವಿಜಯಲಕ್ಷ್ಮೀ ಕಮ್ಮಾರ, ವಿನಾಯಕ ಎಂ.ಕೆ., ಪದ್ಮಿನಿ ಎಂ.ಕೆ., ಸುಜಾತ ಸಾಲಿಮಠ, ಶಂಭುಲಿಂಗಪ್ಪ ಪತ್ತಾರ, ಚಿದಂಬರ ದಿಕ್ಷೀತ, ರವಿ ಸೊಂಡೂರ, ಸೋಮಲಿಂಗಯ್ಯ ಹಿರೇಮಠ, ಈಶ್ವರಯ್ಯ ಮಠಪತಿ, ಪ್ರೊ. ಆರ್.ಬಿ. ಚಿನವಾಲರ, ಮುಖ್ಯೋಪಾಧ್ಯಾಯ ಬಿ.ಎಂ. ಬೀರನೂರ, ಕುಮಾರಗೌಡ ಗುರಪ್ಪಗೌಡ್ರ, ಪ್ರಶಾಂತ ಅಳಗವಾಡಿ, ಶಂಕ್ರಪ್ಪ ಹೂಗಾರ, ಸಂತೋಷ ಶಾಸ್ತ್ರೀಗಳು, ಚರಂತಯ್ಯ ಹಿರೇಮಠ, ಭಾಗವಹಿಸಲಿದ್ದಾರೆಂದು ಶ್ರೀಮಠದ ಸದ್ಬಕ್ತರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.