ನೀಟ್‌ ಅಕ್ರಮ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ

| Published : Jun 23 2024, 02:02 AM IST

ನೀಟ್‌ ಅಕ್ರಮ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನೀಟ್ ಮತ್ತು ಯು.ಜಿ.ಸಿ ನೆಟ್ ಪರೀಕ್ಷೆಯಲ್ಲಾದ ಅಕ್ರಮವನ್ನು ತನಿಖೆಗೆ ಆಗ್ರಹಿಸಿ ಸ್ಟುಡೆಂಟ್‌ ಇಸ್ಲಾಮಿಕ್‌ ಆರ್ಗನೈಜೇಶನ್ ವತಿಯಿಂದ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ನೀಟ್ ಮತ್ತು ಯು.ಜಿ.ಸಿ ನೆಟ್ ಪರೀಕ್ಷೆಯಲ್ಲಾದ ಅಕ್ರಮವನ್ನು ತನಿಖೆಗೆ ಒಳಪಡಿಸಿ, ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಮತ್ತು ಎನ್.ಟಿ.ಎ ನಡೆಸುವ ಕೇಂದ್ರೀಕೃತ ನೀಟ್ ಪರೀಕ್ಷೆ ರದ್ದುಪಡಿಸಿ, ನೀಟ್ ಪರೀಕ್ಷೆ ನಡೆಸಲು ಆಯಾ ರಾಜ್ಯಗಳಿಗೆ ಸ್ವಾಯತ್ತತೆ ನೀಡಬೇಕೆಂದು ಆಗ್ರಹಿಸಿ ನಗರದ ಕಂಠಿ ವೃತ್ತದಲ್ಲಿ¸ ಸ್ಟುಡೆಂಟ್‌ ಇಸ್ಲಾಮಿಕ್‌ ಆರ್ಗನೈಜೇಶನ್ ವತಿಯಿಂದ ಪ್ರತಿಭಟನೆ ನಡೆಸಿ ತಹಸಿಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರಾಧ್ಯಾಪಕ ವಸಂತಕುಮಾರ ಕಡ್ಲಿಮಟ್ಟಿ ಮತ್ತು ಸ್ಟೂಡೆಂಟ್‌ ಇಸ್ಲಾಮಿಕ್ ಆರ್ಗನೈಜೇಶನ್‌ ರಾಜ್ಯ ಕಾರ್ಯದರ್ಶಿ ಮಹಮ್ಮದ ಫೀರ್ ಲಟಗೇರಿ ಮಾತನಾಡಿದರು. ಎಸ್.ಐ.ಓ ಸ್ಥಾನೀಯ ಅಧ್ಯಕ್ಷ ಮುಹ್ಮದ ಆಸೀಫ್‌ ಹುಣಚಗಿ, ಹಬಿಬುಲ್ಲಾಹ ತಾವರಗೇರಿ, ಮುಹ್ಮದ ಅತೀಕ್ ಬಿಳೇಕುದರಿ, ಅಬ್ದುಲ್ ಗಫಾರ ತಹಶೀಲ್ದಾರ್, ಸಂಘಟನೆಯ ಮುಖಂಡರು, ಮತ್ತಿತರು ಉಪಸ್ಥಿತರಿದ್ದರು.