ನೂತನ ರೇಲ್ವೆ ಮಾರ್ಗಕ್ಕಾಗಿ ಆಗ್ರಹಿಸಿ ಪ್ರತಿಭಟನೆ

| Published : Nov 11 2024, 11:47 PM IST

ನೂತನ ರೇಲ್ವೆ ಮಾರ್ಗಕ್ಕಾಗಿ ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿ-ಧಾರವಾಡ ಹೊಸ ರೇಲ್ವೆ ಮಾರ್ಗ ನಿರ್ಮಾಣಕ್ಕಾಗಿ ಲೋಕಾಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವಂತೆ ಮನವಿ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಲೋಕಾಪುರ

ಲೋಕಪೂರದಿಂದ ಹುಬ್ಬಳ್ಳಿ-ಧಾರವಾಡ ಹೊಸ ರೇಲ್ವೆ ಮಾರ್ಗ ನಿರ್ಮಾಣಕ್ಕಾಗಿ ನ.೧೨ರಂದು ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ನಡೆಯುವ ಪ್ರತಿಭಟನೆ ಅಂಗವಾಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡೆಯುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವಂತೆ ಪ್ರತಿಭಟನೆ ನೇತೃತ್ವ ವಹಿಸಿದ ರಾಜ್ಯ ರೇಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್ ಖಾಜಿ ಮನವಿ ಮಾಡಿದರು.

ಜಿಲ್ಲೆಯ ವಿವಿಧ ಪ್ರಗತಿ ಪರಸಂಘಟಣೆಗಳ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಮಾತನಾಡಿದ ಅವರು, ಲೋಕಪೂರದಿಂದ ಹುಬ್ಬಳ್ಳಿ-ಧಾರವಾಡಕ್ಕೆ ನೂತನ ರೇಲ್ವೆ ಮಾರ್ಗ ಜೋಡಣೆಗಾಗಿ ಹೋರಾಟ ನಡೆಸಲು ಸನ್ನದ್ಧವಾಗಿದೆ, ಇದರಿಂದ ಐತಿಹಾಸಿಕ ಪುಣ್ಯಕ್ಷೇತ್ರಗಳಾದ ಗೊಡಚಿ ವೀರಭದ್ರೇಶ್ವರ, ಸವದತ್ತಿ ಯಲ್ಲಮ್ಮ, ರಾಮದುರ್ಗದ ಶಬರಿಕೊಳ್ಳ ಜೊತೆಯಲ್ಲಿ ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಸಂಚರಿಸಲು ಪುಣ್ಯಕ್ಷೇತ್ರಗಳ ದರ್ಶನ ಪಡೆಯಲು ಸಹಾಯವಾಗಲಿದೆ. ಹೆಚ್ಚೆಚ್ಚು ಔದ್ಯೋಗಿಕ ಕೈಗಾರಿಕಾ ಕ್ರಾಂತಿಯಾಗಲಿದೆ. ವಾಣಿಜ್ಯ ನಗರಿ ಹುಬ್ಬಳ್ಳಿ ಧಾರವಾಡಕ್ಕೆ ದಿನನಿತ್ಯದ ಸಂಚರಾದಿಂದ ವಾಣಿಜ್ಯ ಉದ್ಯಮ ಬಲಗೊಳ್ಳಲಿದೆ. ವಿದ್ಯಾಪೀಠ ಧಾರವಾಡದಲ್ಲಿ ವ್ಯಾಸಂಗಕ್ಕೆ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಕೇವಲ ಎರಡು ತಾಸಿನ ಅವಧಿಯೊಳಗೆ ವಿದ್ಯಾರ್ಥಿಗಳು ಆಯಾ ಶಿಕ್ಷಣ ಸಂಸ್ಥೆಗಳಿಗೆ ತೆರಳಿ ವಿದ್ಯಾಭ್ಯಾಸ ಪೂರ್ಣಗೊಳಿಸಬಹುದು. ಈ ಹೊಸ ರೇಲ್ವೆ ಮಾರ್ಗ ನಿರ್ಮಾಣದಿಂದ ಬಾರಿ ಅನೂಕುಲ ಇದ್ದು ಪ್ರತಿಯೊಬ್ಬರು ಪಕ್ಷಾತಿತವಾಗಿ ಬೆಂಬಲಿಸಬೇಕು ಎಂದು ಕರೆ ಕೊಟ್ಟರು.

ಈಗಾಗಲೇ ಬಾಗಲಕೋಟೆ-ಕುಡುಚಿ ಮಧ್ಯೆ ರೇಲ್ವೆ ಮಾರ್ಗ ಪ್ರಾರಂಭಕ್ಕಾಗಿ ಸಾರ್ವಜನಿಕರಲ್ಲಿ ಯೋಜನೆ ಅರಿವು ಮೂಡಿಸುವುದರ ಜೊತೆಯಲ್ಲಿ ಜನಪ್ರತಿನಿಧಿಗಳ ಕಣ್ಣು ತೆರೆಸಿದ ಪರಿಣಾಮ, ಇಂದು ಬಾಗಲಕೋಟೆ-ಕುಡುಚಿ ಮಧ್ಯೆ ರೇಲ್ವೆ ಮಾರ್ಗ ಪ್ರಾರಂಭವಾಗಿ ಅದರಿಂದ ಬಾಗಲಕೋಟೆ ಮುಧೋಳ ಲೋಕಪುರ ಜಮಖಂಡಿ ರಬಕವಿ ಬನಹಟ್ಟಿ ರಾಯಭಾಗ ಈ ಭಾಗದ ಜನರಿಗೆ ಹೆಚ್ಚೆಚ್ಚು ಔದ್ಯೋಗಿಕ, ಸಾಮಾಜಿಕ ವೈದ್ಯಕೀಯ ಸವಲತ್ತುಗಳಿಗೆ, ಸರಕು ಸರಂಜಾಮುಗಳನ್ನು ಸಾಗಿಸುವುದ್ದಕ್ಕಾಗಿ ಏನೆಲ್ಲಾ ಯಾವೆಲ್ಲಾ ಉಪಯೋಗಗಳು ಆಗಲಿವೆ ಎಂಬುದನ್ನು ಮನಗಾಣಿಸಿ, ಸರ್ಕಾರವನ್ನು ಮಣಿಸಿ ಹೋರಾಡಿ ಈಗ ಮಾರ್ಗದ ಕಾರ್ಯ ಪ್ರಾರಂಭವಾಗಿ ಕೆಲವೇ ದಿನಗಳಲ್ಲಿ ಮುಕ್ತಾಯಗೊಂಡು ಸಾರ್ವಜನಿಕರ ಸೇವೆಗೆ ಲಭ್ಯಗವಾಗಿದೆ ಎಂದರು.

ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ ಮುಂಖಡ ನಿಲೇಶ ಬನ್ನೂರ ಮಾತನಾಡಿ, ಕುತುಬುದ್ದೀನ್‌ ಖಾಜಿ ಮತ್ತು ಸಮಿತಿ ಪದಾಧಿಕಾರಿಗಳು ಮತ್ತೊಂದು ಅದ್ಭುತ, ಅಮೋಘ, ಸಂಪೂರ್ಣ ಜನಪರವಾದ ಹೋರಾಟಕ್ಕೆ ಅಣಿಯಾಗುತ್ತಿದ್ದು, ಈ ಹೋರಾಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನ ಸೆಳುವಲ್ಲಿ ಯಶ್ವಸಿ ಆಗಿದ್ದಾರೆ. ಈಗಾಗಲೇ ಸಭೆಗಳ ಮೇಲೆ ಸಭೆಗಳು ನಡೆದು, ಈ ಭಾಗದ ಮಠಾಧೀಶರು, ಸೂಫಿ ಸಂತರು, ಕನ್ನಡಪರ ಸಂಘಟನೆಗಳು, ರೈತಾಪಿ ಹಾಗೂ ಶ್ರಮಿಕ ವರ್ಗದವರು ಅಷ್ಟೇ ಏಕೆ ಪಕ್ಷ ಭೇದ ಮರೆತು ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು ಬೆಂಬಲ ವ್ಯಕ್ತ ಪಡಿಸಿದ್ದಾರೆ. ಉತ್ತರ ಕರ್ನಾಟಕ ಪ್ರತ್ಯೇಕ ಬೇಡಿಕೆ ಇದ್ದು ಲೋಕಾಪುರ ಧಾರವಾಡ ರೇಲ್ವೆ ಮಾರ್ಗ ಕಾರ್ಯರೂಪಕ್ಕೆ ಬಂದರೆ ಅಖಂಡ ಉತ್ತರ ಕರ್ನಾಟಕ ಅಭಿವೃದ್ಧಿ ಆಗಲಿದೆ ಎಂದು ಹೇಳಿದರು.

ಈ ವೇಳೆ ಗುರುರಾಜ ಉದಪುಡಿ, ರಫೀಕ ಬೈರಕದಾರ, ಮೈನುದ್ದೀನ ಖಾಜಿ, ಲೋಕಣ್ಣ ಉಳ್ಳಾಗಡ್ಡಿ, ಮಹಾಲಿಂಗಪ್ಪ ಹುಂಡೇಕರ, ಅಬ್ದುಲರೆಹಮಾನ ತೋರಗಲ್ಲ, ಕುಮಾರ ಕಾಳಮ್ಮನವರ, ಸುಲ್ತಾನ ಕಲಾದಗಿ, ಸಿದ್ದು ಖಿಲಾರಿ, ದುರ್ಗಪ್ಪ ಭಜಂತ್ರಿ, ಇಸ್ಮಾಯಿಲ ಅತ್ತಾರ, ಮೆಹಬೂಬ ಕೌಜಲಗಿ ಇದ್ದರು.