ಬಾಂಗ್ಲಾದಲ್ಲಿ ಹಿಂದೂಗಳಿಗೆ ರಕ್ಷಣೆ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

| Published : Dec 08 2024, 01:15 AM IST

ಬಾಂಗ್ಲಾದಲ್ಲಿ ಹಿಂದೂಗಳಿಗೆ ರಕ್ಷಣೆ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಕೊಲೆ ಹಾಗೂ ದೌರ್ಜನ್ಯ ಖಂಡಿಸಿ ಶನಿವಾರ ಸಂಜೆ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಕೊಲೆ ಹಾಗೂ ದೌರ್ಜನ್ಯ ಖಂಡಿಸಿ ಶನಿವಾರ ಸಂಜೆ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ, ಬಿಜೆಪಿ ಹಿರಿಯ ಮುಖಂಡರಾದ ಬಸವಲಿಂಗಪ್ಪ ಭೂತೆ ಹಾಗೂ ಬಿಜೆಪಿ ತಾಲೂಕಾದ್ಯಕ್ಷ ಮಾರುತಿ ಗಾವರಾಳ ಮಾತನಾಡಿ, ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ, ದೌರ್ಜನ್ಯಗಳಂತಹ ಘಟನೆಗಳು ನಡೆಯುತ್ತಿದ್ದರೂ ಅಲ್ಲಿನ ಸರ್ಕಾರ ಯಾವ ಕ್ರಮಕ್ಕೊ ಮುಂದಾಗುತ್ತಿರುವುದು ಖಂಡನೀಯ. ಹಿಂದೂಗಳು ಮನುಷ್ಯರಲ್ವೆ?, ಭಾರತದಲ್ಲಿ ಇರುವಂತಹ ಮುಸ್ಲಿಂರಿಗೆ ರಕ್ಷಣೆ, ಅನುಕೂಲ ಕಲ್ಪಿಸಿದಂತೆ ಅಲ್ಲಿನ ಹಿಂದೂಗಳಿಗೂ ಬಾಂಗ್ಲಾ ಸರ್ಕಾರ ಸುವವ್ಯಸ್ಥೆ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯಕ್ಕೆ ಕಡಿವಾಣ ಹಾಕುವ ಮೂಲಕ ವಿಶ್ವಸಂಸ್ಥೆ ಮಧ್ಯಪ್ರವೇಶಿಸಿ ನೊಂದ ಹಿಂದೂಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಯುವ ಮೋರ್ಚಾ ತಾಲೂಕಾಧ್ಯಕ್ಷ ಕಲ್ಲೇಶ ಕರಮುಡಿ ಹಾಗೂ ಪಪಂ ಮಾಜಿ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಹಾಗೂ ಒಬಿಸಿ ಮೋರ್ಚಾ ತಾಲೂಕಾಧ್ಯಕ್ಷ ಶ್ರೀನಿವಾಸ ತಿಮ್ಮಾಪೂರ ಮಾತನಾಡಿದರು.

ಪ್ರತಿಭಟನೆಯಲ್ಲಿ ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಸುರೇಶಗೌಡ ಶಿವನಗೌಡ್ರ, ಶಿವಕುಮಾರ ನಾಗಲಾಪೂರಮಠ, ಪಪಂ ಸದಸ್ಯರಾದ ವಸಂತ ಭಾವಿಮನಿ, ಬಸವಲಿಂಗಪ್ಪ ಕೊತ್ತಲ, ಅಶೋಕ ಅರಕೇರಿ, ಕಳಕಪ್ಪ ತಳವಾರ, ದಾನನಗೌಡ ತೊಂಡಿಹಾಳ, ನಾಗರತ್ನ ಸೋಮನಗೌಡ್ರ, ಸಿದ್ದರಾಮೇಶ ಬೇಲೇರಿ, ಶಿವಾನಂದ ಬಣಕಾರ, ಶಂಕ್ರಪ್ಪ ಭಾವಿಮನಿ, ಈರಪ್ಪ ಬಣಕಾರ, ಸಂತೋಷಿಯಾ ಜೋಶಿ, ಪಾರ್ವತಿ ಅನಸಿ, ಬಸವರಾಜ ಹಾಳಕೇರಿ, ಸುನೀಲ ಶಿಂಧೆ, ಕೃಷ್ಣಪ್ಪ ಬಡಿಗೇರ, ಅರುಣ ಉಪ್ಪಾರ, ಪ್ರಾಣೇಶ ಬತ್ತಿ, ಮಂಜುನಾಥ ತರಲಕಟ್ಟಿ, ಕರಿಬಸಯ್ಯ ಬಿನ್ನಾಳ, ಶ್ರೀಕಾಂತ ಬಣಕಾರ, ಬಸವರಾಜ ಭಾವಿಮನಿ, ಪಂಪಾಪತಿ ವಣಗೇರಿ, ಮಲ್ಲಪ್ಪ ಸುರಕೋಡ್, ಯಲ್ಲಪ್ಪ ಎಮ್ಮಿಗುಡ್ಡದ, ಬಾಪುಗೌಡ ಪಾಟೀಲ ಮತ್ತಿತರರು ಇದ್ದರು.