ರಸ್ತೆ ದುರಸ್ತಿಗಾಗಿ ಆಗ್ರಹಿಸಿ ಪ್ರತಿಭಟನೆ

| Published : Oct 11 2024, 11:59 PM IST / Updated: Oct 12 2024, 12:00 AM IST

ರಸ್ತೆ ದುರಸ್ತಿಗಾಗಿ ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಖಾನೆಯ ಸಿಎಸ್‌ಆರ್ ನಿಧಿಯಿಂದ ಹದಗೆಟ್ಟ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ ಗಿಣಿಗೇರಾ ಗಂಗಾವತಿ ಸರ್ಕಲ್‌ನಲ್ಲಿ ನಾಗರಿಕ ಹೋರಾಟ ಸಮಿತಿ ಮತ್ತು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಾಗರಿಕ ಹೋರಾಟ ಸಮಿತಿ, ಎಸ್‌ಯುಸಿಐ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕಾರ್ಖಾನೆಯ ಸಿಎಸ್‌ಆರ್ ನಿಧಿಯಿಂದ ಹದಗೆಟ್ಟ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ ಗಿಣಿಗೇರಾ ಗಂಗಾವತಿ ಸರ್ಕಲ್‌ನಲ್ಲಿ ನಾಗರಿಕ ಹೋರಾಟ ಸಮಿತಿ ಮತ್ತು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಗಿಣಿಗೇರಿಯಿಂದ ಗಬ್ಬೂರು, ಕೂಕನಪಳ್ಳಿವರೆಗೆ ರಸ್ತೆ ಡಾಂಬರಿಕರಣ, ಸಾರ್ವಜನಿಕ ಆಸ್ಪತ್ರೆ ಉನ್ನತಿಕರಣ ಮಾಡಲು ಕಾರ್ಖಾನೆಗಳ ಕಂಪನಿಯವರು ಸಿಎಸ್ಆರ್ ನಿಧಿ ಬಳಕೆ ಮಾಡುವಂತೆ ಆಗ್ರಹಿಸಲಾಯಿತು.

ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷದ ಮುಖಂಡ ಶರಣು ಗಡ್ಡಿ ಮಾತನಾಡಿ, ಗಿಣಿಗೇರಾ ಗ್ರಾಮ ದಿನೇ ದಿನೇ ಜನನೀಬಿಡ ಪ್ರದೇಶವಾಗುತ್ತಿದ್ದು, ವಲಸೆ ಕಾರ್ಮಿಕರು ಬೀಡಾಗುತ್ತಿದೆ. ಗ್ರಾಮದ ಸುತ್ತ ಬೃಹತ್ ಕೈಗಾರಿಕೆಗಳು ಹೊರಸೂಸುವ ಹಾನಿಕಾರಕ ಹೊಗೆ, ಧೂಳು, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೆಮ್ಮು, ನೆಗಡಿ, ಅಸ್ತಮಾ, ಟಿಬಿ, ಕ್ಯಾನ್ಸರ್, ಉಸಿರಾಟದ ತೊಂದರೆಗಳು ಮುಂತಾದ ಮಾರಣಾಂತಿಕ ಕಾಯಿಲೆಗಳು ಜನರನ್ನು ಆತಂಕಗೊಳಿಸಿವೆ. ಇಂಥ ಸಮಸ್ಯೆಗಳು ಒಂದಡೆಯಾದರೆ ಗಿಣಿಗೇರಾ ಮಾರ್ಗವಾಗಿ ಗಬ್ಬೂರು ಮೂಲಕ ಕೂಕನಪಳ್ಳಿ ಹೋಗುವ ರಸ್ತೆ ಸಂಪೂರ್ಣವಾಗಿ ಹದೆಗೆಟ್ಟಿದೆ. ಈ ಕುರಿತು ಹಲವಾರು ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಗಿಣಿಗೇರಿಯಿಂದ ವಿವಿಧ ಹಳ್ಳಿಗಳಿಗೆ ಹೋಗುವ ಇಂತ ಮುಖ್ಯ ರಸ್ತೆ ಈ ರೀತಿ ಗುಂಡಿಗಳು ಇರುವುದರಿಂದ ಜನರ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾಗರಿಕ ಹೋರಾಟ ಸಮಿತಿ ಮುಖಂಡ ಮಂಗಳೇಶ ರಾತೋಡ್ ಮಾತನಾಡಿ, ಮುಖ್ಯ ರಸ್ತೆ ಬದಿಯಲ್ಲಿ ಗಿಡ ನೆಡಬೇಕೆಂದು ಹಲವಾರು ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಮರ್ಪಕವಾಗಿ ಬೀದಿ ದೀಪ ಹಾಕಬೇಕು. ಆಸ್ಪತ್ರೆ, ಶಿಕ್ಷಣ, ಸ್ವಚ್ಛತೆ ನೈರ್ಮಲ್ಯ, ಶುದ್ಧ ಕುಡಿಯುವ ನೀರು, ಇತರ ಬೇಡಿಕೆಗಳಿಗೆ ಸಿಎಸ್ಆರ್ ನಿಧಿಯನ್ನು ಗಿಣಿಗೇರಾ ಗ್ರಾಮದ ಅಭಿವೃದ್ಧಿ ಸಮರ್ಪಕವಾಗಿ ಬಳಕೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಪ್ರತಿಭಟನೆಯಲ್ಲಿ ಗಿಣಿಗೇರಾ ನಾಗರಿಕ ಹೋರಾಟ ಸಮಿತಿ ಮತ್ತು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷದ ಮುಖಂಡರಾದ ಮೌನೇಶ್, ಸುರೇಶ ಕಲಾಲ್, ದ್ಯಾಮಣ್ಣ ಡೊಳ್ಳಿನ, ಹನುಮಂತ ಕಟೀಗಿ, ರಾಘವೇಂದ್ರ, ಮಲ್ಲಿಕಾರ್ಜುನ ಲಕ್ಷ್ಮಣ ಗೋಡೆಕಾರ್, ವಿಷ್ಣು, ರವಿ, ಅನುರಾಧ, ಚಿಕ್ಕಪ್ಪ ಉಪ್ಪಾರ, ನರಸಪ್ಪ ಗುಳದಲ್ಲಿ, ಜಂಬಣ್ಣ ಉಪ್ಪಾರ, ಎಸ್.ಬಿ. ಅಪ್ಪಣ್ಣ ಗೌಡ ಮುಂತಾದವರು ಭಾಗವಹಿಸಿದ್ದರು.