ರೇಣುಕಾಸ್ವಾಮಿ ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ

| Published : Jun 17 2024, 01:36 AM IST

ರೇಣುಕಾಸ್ವಾಮಿ ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನಟ ದರ್ಶನ್ ಹಾಗೂ ಸಹವರ್ತಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಶಿರಸ್ತೆದಾರ ಸಯ್ಯದ್ ಅಕ್ತರ್ ಅಲಿಗೆ ಮನವಿ

ಮಸ್ಕಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಚಿತ್ರ ನಟ ದರ್ಶನ್ ಮತ್ತು ಎಲ್ಲಾ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ, ಮಸ್ಕಿತಾಲೂಕು ಜಂಗಮ ಸೇವಾ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದರು.

ಮಸ್ಕಿ ಪಟ್ಟಣದ ಬಸವ ವೃತ್ತದಿಂದ ಮೆರವಣಿಗೆ ತಹಸೀಲ್ದಾರ್ ಕಚೇರಿಗೆ ತಲುಪಿತು. ನಂತರ ಈ ಸಂದರ್ಭ ಜಂಗಮ ಸಮಾಜದ ಮುಖಂಡರು ಮಾತನಾಡಿ, ಚಿತ್ರನಟ ದರ್ಶನ್ ನಾಯಕ ನಟನಾಗಿ ಖಳನಾಯಕನಂತೆ ವರ್ತನೆ ಮಾಡಿ ಅಮಾಯಕ ಯುವಕ ರೇಣುಕಾಸ್ವಾಮಿ ಕೊಲೆ ಮಾಡಿಸಿದ್ದಾರೆ. ನಟ ದರ್ಶನ್ ಹಾಗೂ ಸಹವರ್ತಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಶಿರಸ್ತೆದಾರ ಸಯ್ಯದ್ ಅಕ್ತರ್ ಅಲಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಸಮಿತಿ ಅಧ್ಯಕ್ಷ ಕರಿಬಸಯ್ಯ ಸ್ವಾಮಿ, ಪದಾಧಿಕಾರಿಗಳಾದ ಘನ ಮಠದಯ್ಯಸಾಲಿ ಮಠ, ಸಿದ್ದ ಲಿಂಗಯ್ಯ ಗಚ್ಚಿನಮಠ, ಡಾ. ಪಂಚಾಕ್ಷರಯ್ಯ, ಎನ್. ಶಿವಕುಮಾರ, ಜಗದೀಶ ತಾತ ಹಾಲಾಪೂರ, ಬಸವರಾಜ ಸ್ವಾಮಿಹಸ್ಮಕಲ್, ಆದಯ್ಯ ಸ್ವಾಮಿ ಕ್ಯಾತ್ನಟ್ಟಿಚಂದ್ರಶೇಖರ ಉದ್ದಾಳ ಇತರ ಮುಖಂಡರು ಇದ್ದರು.