ನಿವೇಶನ ಇಲ್ಲದವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆತಿಪಟೂರು

ನಿವೇಶನ ಇಲ್ಲದವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ನಾಗತೀಹಳ್ಳಿ ಕೃರ್ಷಮೂರ್ತಿ ಮಾತನಾಡಿ, ತುಂಬಾ ಜನರು ನಿವೇಶನ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ವಿದ್ಯಾಭಾಸಕ್ಕೂ ಕಷ್ಟವಾಗಿದೆ. ಇಂಥವರಿಗೆ ಕಡುಬಡವರಿಗೆ ನಿವೇಶನ ಕೊಡಿ. ದಲಿತ ಅಲ್ಪಸಂಖ್ಯಾತ ಹಿಂದುಳಿದ ವರ್ಗದವರಿದ್ದು ನಿವೇಶನ ಕೊಡಿ ಎಂದು ಒತ್ತಾಯಿಸಿದರು. ಕರ್ನಾಟಕ ಸರ್ಕಾರ ೩೦ ವರ್ಷಗಳ ಹಿಂದೆ ಮಡೆನೂರು ಗ್ರಾಮದ ಸರ್ವೆ ನಂಬರ್ ೨೨೦ ರಲ್ಲಿ ೯ ಎಕರೆಯಲ್ಲಿ ನಿವೇಶನದ ಅನುಮತಿ ನೀಡಿದ್ದರು. ಅದನ್ನು ಕಾರ್ಯಗತಗೊಳಿಸುವಲ್ಲಿ ಜಿಲ್ಲಾಡಳಿತ ತಾಲೂಕ ಆಡಳಿತ ಮತ್ತು ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗಳು ವಿಫಲವಾಗಿವೆ ಎಂದು ವಿಷಾದ ವ್ಯಕ್ತಪಡಿಸಿದವರು. ಮತ್ತು ಅನೇಕ ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದು ಬಗರು ಹುಕುಂ ಸಾಗುವಳಿದಾರರಿಗೆ ಭೂಮಿಯನ್ನು ಸಕ್ರಮ ಮಾಡಿಕೊಡಿ ಎಂದು ತಿಳಿಸಿದರು. ನಿವೇಶನವನ್ನು ನೀಡುವುದು ಇನ್ನೂ ತಡವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿ ಆ ಮನವಿ ಪತ್ರವನ್ನು ತಾಲೂಕು ಆಡಳಿತಕ್ಕೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾನೂನು ಸಲಹೆಗಾರರ ವೆಂಕಟೇಶ್ ತಾಲೂಕು ಅಧ್ಯಕ್ಷರು ಮಂಜುನಾಥ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಪರ್ವೇಜ್ ಮಹಿಳಾ ಘಟಕದ ನಂದಿನಿ, ಮಹಿಳಾ ಘಟಕದ ತಾಲೂಕು ಸಂಚಾಲಕಿ ಹೊನ್ನವಳ್ಳಿ ಲಕ್ಷ್ಮೀದೇವಮ್ಮ, ಕರೀಕೆರೆ ರಾಜಣ್ಣ, ಸುರೇಶ್, ಗಂಗನ ಘಟ್ಟ ರಾಜಣ್ಣ ಅರಸೀಕೆರೆ ಭಾಸ್ಕರ್ ಅಲ್ಲಪ್ಪ ಕಳ್ಳಶೆಟ್ಟಿಹಳ್ಳಿ ಮತ್ತು ನೂರಾರು ದಲಿತ ಬಂಧುಗಳು ಮತ್ತು ಅಲ್ಪಸಂಖ್ಯಾತ ಬಂಧುಗಳು ಭಾಗವಹಿಸಿದ್ದರು.