ನೊಂದ ಅಮಾಯಕ ಮಹಿಳೆಯರು ದೂರು ನೀಡಲು ಕಚೇರಿಗೆ ಬಂದರೆ ಅವರಿಗೆ ಬ್ಲ್ಯಾಕ್ ಮೇಲ್ ಮಾಡಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ ಡಿಜಿಪಿ ರಾಮಚಂದ್ರ ರಾವ್ ಅವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿದೆ. ಆದರೆ ರಾಮಚಂದ್ರ ರಾವ್ ಅವರನ್ನು ಕೆಲಸದಿಂದ ಕೂಡಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಲಾಯಿತು.

ಗದಗ: ಡಿಜಿಪಿ ರಾಮಚಂದ್ರ ರಾವ್‌ ಅವರನ್ನು ವಜಾಗೊಳಿಸುವಂತೆ ಹಾಗೂ ಶಿಡ್ಲಘಟ್ಟದ ರಾಜೀವ್‌ ಗೌಡನನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಹಾಗೂ ನಗರ ಮಹಿಳಾ ಮಂಡಳ ಮೋರ್ಚಾ ವತಿಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ನೊಂದ ಅಮಾಯಕ ಮಹಿಳೆಯರು ದೂರು ನೀಡಲು ಕಚೇರಿಗೆ ಬಂದರೆ ಅವರಿಗೆ ಬ್ಲ್ಯಾಕ್ ಮೇಲ್ ಮಾಡಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ ಡಿಜಿಪಿ ರಾಮಚಂದ್ರ ರಾವ್ ಅವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿದೆ. ಆದರೆ ರಾಮಚಂದ್ರ ರಾವ್ ಅವರನ್ನು ಕೆಲಸದಿಂದ ಕೂಡಲೇ ವಜಾಗೊಳಿಸಬೇಕು.

ಹಾಗೆಯೇ ಶಿಡ್ಲಘಟ್ಟ ನಗರಸಭೆಯ ಆಯುಕ್ತರಾದ ಅಮೃತಾಗೌಡ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ನಗರಸಭೆ ಕಚೇರಿಗೆ ಬೆಂಕಿ ಹಾಕುತ್ತೇನೆ ಎಂದು ಹೇಳಿ ಕೊಲೆ ಬೆದರಿಕೆ ಹಾಕಿದ ರಾಜೀವಗೌಡನ ಮೇಲೆ ಎಫ್ಐಆರ್ ಆಗಿ 8 ದಿನಗಳಾದರೂ ಬಂಧಿಸಿಲ್ಲ. ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಿರ್ಮಲಾ ಕೊಳ್ಳಿ, ಜಿಲ್ಲಾ ಉಪಾಧ್ಯಕ್ಷೆ ಜಯಶ್ರೀ ಉಗಲಾಟದ, ಅಶೋಕ ಕುಡತಿನಿ, ಶ್ರೀಪತಿ ಉಡುಪಿ, ಅಶೋಕ ಸಂಕಣ್ಣವರ, ಪದ್ಮಿನಿ ಮುತ್ತಲದಿನ್ನಿ, ವಿಜಯಲಕ್ಷ್ಮೀ ಮಾನ್ವಿ, ಸ್ವಾತಿ ಅಕ್ಕಿ, ಕವಿತಾ ಬಂಗಾರಿ, ರೇಖಾ ಬಂಗಾರಶೆಟ್ಟರ, ಮಂಜುನಾಥ ಶಾಂತಗೇರಿ, ಸಿದ್ರಾಮೇಶ ಹಿರೇಮಠ, ಅಶ್ವಿನಿ ಜಗತಾಪ, ವಂದನಾ ವರ್ಣೇಕರ್, ಜಯಶ್ರೀ ಅಣ್ಣಿಗೇರಿ, ಲಕ್ಷ್ಮೀ ಕಾಕಿ, ಮಾಧುಸಾ ಮೇರವಾಡೆ, ರಾಚಯ್ಯ ಹೊಸಮಠ, ದೇವೆಂದ್ರಪ್ಪ ಹೂಗಾರ, ವಿರುಪಾಕ್ಷಪ್ಪ ಐಲಿ, ಪ್ರೀತಿ ಶಿವಪ್ಪನಮಠ, ರೇಖಾ ಗೌಳಿ, ರವಿ ಮಾನ್ವಿ, ವಿನೋದ ಹಂಸನೂರ ಹಾಗೂ ಹಲವರು ಇದ್ದರು.ಇಂದು ಉಚಿತ ಆರೋಗ್ಯ ತಪಾಸಣೆ

ಗದಗ: ತಾಲೂಕಿನ ಕಿರಿಟಗೇರಿ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆ ಜ. 24ರಂದು ನಡೆಯಲಿದೆ. ಹುಬ್ಬಳ್ಳಿಯ ಡಾ. ವಿ.ಜಿ. ನಾಡಗೌಡರ, ಡಾ. ಎಸ್.ಜಿ. ನಾಡಗೌಡರ ನೇತ್ರತ್ವದ ವೈದ್ಯರ ತಂಡ ಆರೋಗ್ಯ ತಪಾಸಣೆ ನಡೆಸಲಿದೆ.ಶಿಬಿರವನ್ನು ಶಾಸಕ ಸಿ.ಸಿ. ಪಾಟೀಲ ಉದ್ಘಾಟಿಸುವರು. ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷ ಟಿಪ್ಪುಸುಲ್ತಾನ ನದಾಫ, ಉಪಾಧ್ಯಕ್ಷೆ ನೀಲವ್ವ ಕಡಿಯವರ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಸಂಘಟಕರಾದ ನಂಜನಗೂಡು ರಾಘವೇಂದ್ರಸ್ವಾಮಿ ಮಠದ ಗೌರವ ವಿಭಾಗೀಯ ವ್ಯವಸ್ಥಾಪಕ ಎ.ಸಿ. ಗೋಪಾಲ, ಶ್ರೀನಿವಾಸ ಹುಬ್ಬಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.