ಸಾರಾಂಶ
- ರಸ್ತೆ ತಡೆ ಸ್ಥಳಕ್ಕೆ ಸಾರಿಗೆ ಅಧಿಕಾರಿಗಳ ಭೇಟಿ । ಬಸ್ ನಿಲುಗಡೆಗೆ ಆದೇಶ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ಸುಣಿಗೆರೆ ಗ್ರಾಮದಲ್ಲಿ ಸರ್ಕಾರಿ ಬಸ್‌ಗಳು, ಖಾಸಗಿ ಬಸ್‌ಗಳು ಕಡ್ಡಾಯವಾಗಿ ನಿಲುಗಡೆ ಮಾಡಬೇಕು ಎಂದು ಆಗ್ರಹಿಸಿ ಗ್ರಾಮದ ನಾಗರೀಕರು ಬುಧವಾರ ಬೆಳಗ್ಗೆ 8 ಗಂಟೆಯಿಂದ ರಸ್ತೆ ತಡೆ ನಡೆಸಿದರು.ಈ ಮಾರ್ಗ ರಾಷ್ಟ್ರೀಯ ಹೆದ್ದಾರಿ-13 ಆಗಿದೆ. ಚಿತ್ರದುರ್ಗದಿಂದ ಚನ್ನಗಿರಿ ಮಾರ್ಗವಾಗಿ ಶಿವಮೊಗ್ಗಕ್ಕೆ ಸಂಚರಿಸುವ ಮಾರ್ಗ ಮಧ್ಯ ಹಲವಾರು ಬಸ್‌ಗಳು ಸಂಚರಿಸುತ್ತಿವೆ. ಚನ್ನಗಿರಿ ಪಟ್ಟಣದಿಂದ 6 ಕಿ.ಮೀ. ದೂರದಲ್ಲಿರುವ ಸುಣಿಗೆರೆ ಗ್ರಾಮದಲ್ಲಿ ಹೆಚ್ಚಿನ ಭಾಗ ಕೃಷಿ ಕಾರ್ಮಿಕರೇ ಇದ್ದಾರೆ. ಗ್ರಾಮದಿಂದ ಅನೇಕ ವಿದ್ಯಾರ್ಥಿಗಳು, ವೃದ್ಧರು, ಕಾರ್ಮಿಕರು ಬೇರೆ ಬೇರೆ ಊರುಗಳಿಗೆ ಸಂಚರಿಸುತ್ತಾರೆ. ಆದರೆ, ಅವರಿಗೆ ಸೂಕ್ತವಾದ ಬಸ್‌ಗಳ ಸೌಲಭ್ಯವೇ ಇಲ್ಲದಂತಾಗಿದೆ. ಬಸ್ಸುಗಳ ನಿಲುಗಡೆ ನೀಡದೇ ಸಂಚರಿಸುತ್ತಿರುವುದರಿಂದ ಕಂಗಾಲಾಗಿದ್ದಾರೆ ಎಂದು ಗ್ರಾಮಸ್ಥರು ದೂರಿದರು.
ಪ್ರತಿಭಟನೆ ವೇಳೆಲಾರಿ, ಕಾರು, ದ್ವಿಚಕ್ರ ವಾಹನಗಳಿಗೆ ಮಾತ್ರವೇ ಓಡಾಡುವ ಮುಷ್ಕರನಿರತ ಗ್ರಾಮಸ್ಥರು ಅವಕಾಶ ನೀಡಿದರು. ಬಸ್‌ಗಳಿಗೆ ಮಾತ್ರ ತಡೆಯೊಡ್ಡಿ, ರಸ್ತೆ ತಡೆ ನಡೆಇದರು. ಸ್ಥಳಕ್ಕೆ ಚನ್ನಗಿರಿ ಪೊಲೀಸರು ಧಾವಿಸಿ ಕೆ.ಎಸ್.ಆರ್.ಟಿ.ಯ ಅಧಿಕಾರಿಗಳೊಂದಿಗೆ ದೂರವಾಣಿ ಕರೆ ಮಾಡಿ, ಪರಿಸ್ಥಿತಿ ಬಗ್ಗೆ ತಿಳಿಸಿದರು. ಆಗ ದಾವಣಗೆರೆಯ ನಿಲ್ದಾಣ ಅಧಿಕಾರಿ ಸಿದ್ದೇಶ್ ಮುಷ್ಕರನಿರತರ ಸ್ಥಳಕ್ಕೆ ಬಂದು ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದರು.
ಸುಣಿಗೆರೆ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳಲ್ಲಿ ನಿಲುಗಡೆಗೆ ಅವಕಾಶಗಳಿರುವ ಸರ್ಕಾರಿ ಬಸ್‌ಗಳು ಗ್ರಾಮದಲ್ಲಿ ನಿಲುಗಡೆ ಮಾಡುವಂತೆ ಸಂಬಂಧಿಸಿದ ಚಾಲಕರಿಗೆ ಸೂಚನೆ ನೀಡಲಾಗುವುದು. ಜೊತೆಗೆ ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಬಸ್ ನಿಲುಗಡೆಗೆ ಆದೇಶ ಸಹ ಮಾಡಿರುವ ಪ್ರತಿಯನ್ನು ಮುಷ್ಕರನಿರತರಿಗೆ ನೀಡಲಾಯಿತು. ಬಳಿಕ ಗ್ರಾಮಸ್ಥರು ರಸ್ತೆ ತಡೆ ಹಿಂಪಡೆದು, ಬಸ್‌ಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಪ್ರತಿಭಟನೆ ನೇತೃತ್ವವನ್ನು ಗ್ರಾಮದ ಮೋಹನ್, ಮಲ್ಲಿಕಪ್ಪ, ಸುನೀಲ್, ಉಮೇಶ್, ತಿಮ್ಮೇಶ್ ವಹಿಸಿದ್ದರು.
- - --21ಕೆಸಿಎನ್‌ಜಿ2.ಜೆಪಿಜಿ:
ಚನ್ನಗಿರಿ ತಾಲೂಕಿನ ಸುಣಿಗೆರೆ ಗ್ರಾಮದಲ್ಲಿ ಬಸ್‌ಗಳನ್ನು ನಿಲುಗಡೆ ಮಾಡಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಬಸ್‌ಗಳ ಸಂಚಾರಕ್ಕೆ ತಡೆಯೊಡ್ಡಿ ರಸ್ತೆ ತಡೆ ನಡೆಸಿದರು.