ಸಾರಾಂಶ
ಬ್ಯಾಡಗಿ: ಬಿಸಿಯೂಟ ತಯಾರಕರಿಗೆ ಸೇವಾ ಭದ್ರತೆ ಹಾಗೂ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸುವಂತೆ ಆಗ್ರಹಿಸಿ ತಾಲೂಕು ಬಿಸಿಯೂಟ ತಯಾರಕರು ಮತ್ತು ಸಹಾಯಕಿಯರ ಸಂಘದ ಕಾರ್ಯಕರ್ತರು ತಹಸೀಲ್ದಾರ್ ಕಾರ್ಯಾಲಯ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಇದಕ್ಕೂ ಮುನ್ನ ತಾಲೂಕಿನಿಂದ ಆಗಮಿಸಿದ ಸುಮಾರು 500 ಹೆಚ್ಚು ಕಾರ್ಯಕರ್ತರು ಕೆಲಕಾಲ ಪ್ರತಿಭಟನೆ ನಡೆಸಿ ಸರ್ಕಾರದ ನೀತಿಯನ್ನು ಖಂಡಿಸಿ ಘೋಷಣೆ ಕೂಗಿದರು,ದಿನಗೂಲಿ ಕೂಡ ಸಿಗುತ್ತಿಲ್ಲ: ಈ ವೇಳೆ ಮಾತನಾಡಿದ ಅಧ್ಯಕ್ಷೆ ಸರೋಜ ಹಿರೇಮಠ, ತಾಲೂಕು ಬಿಸಿಯೂಟ ತಯಾರಕರು ಹಾಗೂ ಸಹಾಯಕಿಯರ ಸಂಘದ 2 ದಶಕಗಳ ಕಾಲ ನಾವು ಶಿಕ್ಷಣ ಇಲಾಖೆ ಮೂಲಕ ಸರ್ಕಾರ ಅನುಷ್ಠಾನಗೊಳಿಸಿದ ಅಕ್ಷರ ದಾಸೋಹ ಯೋಜನೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದು, ದಿನಗೂಲಿ ಕೂಡ ನಮಗೆ ಸಿಗದಷ್ಟು ವೇತನ ನಮಗೆ ನೀಡಲಾಗುತ್ತಿದೆ, ದಿನಸಿ ವಸ್ತುಗಳ ಏರಿಕೆಯಿಂದ ಜೀವನ ನಿರ್ವಹಣೆ ಅಸಾಧ್ಯವಾಗಿದೆ ಎಂದರು.
ಕನಿಷ್ಠ ವೇತನ ಹೆಚ್ಚಿಸಿ: ಕಳೆದ 2024 ಸಾಲಿನಲ್ಲಿ ಏಪ್ರಿಲ್ ಮತ್ತು ಮೇ ತಿಂಗಳ ರಜೆಯಲ್ಲಿ ಕಾರ್ಯಕರ್ತರು ಕೆಲಸ ನಿರ್ವ ಹಿಸಿದ್ದು, 2 ತಿಂಗಳ ವೇತನ ನೀಡಬೇಕು 2025-26ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಪರಿಶೀಲಿಸಿ ಕನಿಷ್ಠ ವೇತನ ಹೆಚ್ಚಿಸಲು ಆದೇಶ ಹೊರಡಿಸುವಂತೆ ಆಗ್ರಹಿಸಿದರು.ಸಿಬ್ಬಂದಿಗಳೆಂದು ಪರಿಗಣಿಸಿ:ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಡಿ.ದರ್ಜೆ ನೌಕರರಿಲ್ಲದ ಕಾರಣ ಬಿಸಿಯೂಟ ತಯಾರಕರು ಹಾಗೂ ಸಹಾಯಕಿಯರನ್ನು ಕೈತೋಟ ಸೇರಿದಂತೆ ಇತರೆ ಶಾಲಾ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದು, ಶಿಕ್ಷಣ ಇಲಾಖೆ ಸದರಿ ಕಾರ್ಯಕರ್ತೆಯರನ್ನು ಸಿಬ್ಬಂದಿಗಳೆಂದು ನೇಮಿಸಿಕೊಳ್ಳುವ ಮೂಲಕ ಸರ್ಕಾರ ನ್ಯಾಯ ಒದಗಿಸಲು ಮುಂದಾಗಲಿ.
ಪ್ರಯಾಗರಾಜ ಹೈಕೋರ್ಟ್ ಆದೇಶ ಅನ್ವಯಿಸಲಿ: ಉತ್ತರಪ್ರದೇಶದ ಪ್ರಯಾಗರಾಜ ಹೈಕೋರ್ಟ್ ಅಲ್ಲಿಯ ಸರ್ಕಾರಕ್ಕೆ ಕೆಲ ನಿರ್ದೇಶನಗಳನ್ನು ಸೂಚಿಸಿದ್ದು, ಸದರಿ ಸೌಲಭ್ಯಗಳು ರಾಜ್ಯದಲ್ಲಿಯೂ ಅನ್ವಯಿಸುವಂತೆ ನೋಡಿಕೊಳ್ಳಬೇಕು, ಅಡುಗೆ ನಿರ್ವಹಣೆ ಸಂದರ್ಭದಲ್ಲಿ ಸಿಲೆಂಡರ್ ಇತ್ಯಾದಿ ಮಾರಣಾಂತಿಕ ಕಾರಣಕ್ಕೆ ಬಲಿಯಾದ ಕುಟುಂಬಗಳಿಗೆ ರು. 5 ಲಕ್ಷ ಹಾಗೂ ಗಾಯಗೊಂಡವರಿಗೆ ರು. 2 ಲಕ್ಷ ವಿತರಿಸಲು ಹೊಸದಾಗಿ ಆದೇಶ ನೀಡಬೇಕು ಒಂದು ವೇಳೆ ನಮ್ಮ ಬೇಡಿಕೆಗಳು ಈಡೇರದಿದ್ದಲ್ಲಿ ಬರುವ ದಿನಗಳಲ್ಲಿ ದೊಡ್ಡಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.ಬಳಿಕ ಶಿರಸ್ತೇದಾರ ಮಂಜುಳಾ ನಾಯಕ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಎಐಟಿಯುಸಿ ಸಂಘಟನೆ ರಾಜ್ಯಾಧ್ಯಕ್ಷ ಹೊನ್ನಪ್ಪ ಮರಿಯಮ್ಮನವರ, ಪದಾಧಿಕಾರಿಗಳಾದ ವಿನಾಯಕ ಕುರುಬರ, ಜಿ.ಡಿ.ಪೂಜಾರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹುಲ್ಲಾಳ, ಎಂ.ಶಾಂತಮ್ಮ ಬಿ.ಎಸ್.ಶೋಭಾ ಇತರರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))