ವಾರದೊಳಗೆ ಸ್ತ್ರೀರೋಗ ತಜ್ಞರ ನೇಮಕಸದಿದ್ದರೆ ಪ್ರತಿಭಟನೆ

| Published : Nov 06 2025, 02:30 AM IST

ವಾರದೊಳಗೆ ಸ್ತ್ರೀರೋಗ ತಜ್ಞರ ನೇಮಕಸದಿದ್ದರೆ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೂಡಲೇ ತಜ್ಞರ ನೇಮಕಗೊಕಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬುಧವಾರ ತಾಲೂಕು ಆರೋಗ್ಯಾಧಿಕಾರಿ (ಟಿಎಚ್‌ಒ) ಡಾ. ಅರುಣ್ ಕುಮಾರ್ ಗೆ ಮನವಿ ಸಲ್ಲಿಸಿದರು.

ಕಂಪ್ಲಿ: ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ತ್ರೀರೋಗ ತಜ್ಞ ವೈದ್ಯರಿಲ್ಲದ ಕಾರಣ ಗರ್ಭಿಣಿಯರು ಮತ್ತು ಮಹಿಳೆಯರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಕೂಡಲೇ ತಜ್ಞರ ನೇಮಕಗೊಕಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬುಧವಾರ ತಹಸೀಲ್ದಾರ್ ಜೂಗಲ ಮಂಜು ನಾಯಕ ಹಾಗೂ ತಾಲೂಕು ಆರೋಗ್ಯಾಧಿಕಾರಿ (ಟಿಎಚ್‌ಒ) ಡಾ. ಅರುಣ್ ಕುಮಾರ್ ಗೆ ಮನವಿ ಸಲ್ಲಿಸಿದರು.

ಜನಶಕ್ತಿ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ವಸಂತರಾಜ ಕಹಳೆ ಮಾತನಾಡಿ, ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ವರದಾನವಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರಿಲ್ಲದ ಕಾರಣ ಹೆರಿಗೆಗಾಗಿ ಮಹಿಳೆಯರನ್ನು ಗಂಗಾವತಿ ಸೇರಿದಂತೆ ಬೇರೆ ಪಟ್ಟಣಗಳಿಗೆ ಕಳುಹಿಸುವ ದುಸ್ಥಿತಿ ಉಲ್ಬಣವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರು ಸಾಮಾನ್ಯವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗದವರು. ಅವರಿಗೆ ದೂರದ ಆಸ್ಪತ್ರೆಗೆ ತೆರಳುವುದು ಖರ್ಚು ಮತ್ತು ತೊಂದರೆಯನ್ನುಂಟು ಮಾಡುತ್ತಿದೆ. ವಾರದೊಳಗೆ ಖಾಯಂ ಸ್ತ್ರೀರೋಗ ತಜ್ಞರನ್ನು ನೇಮಿಸಿ ಇಲ್ಲದಿದ್ದರೆ ಈ ಮುಂಚೆ ಇದ್ದ ಅಧಿಕಾರಿಯನ್ನೇ ಮರಳಿ ನಿಯೋಜನೆಗೊಳಿಸಬೇಕು. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸಿ ಬೇಡಿಕೆ ಈಡೇರಿಕೆಗೆ ವಿಳಂಬ ತೋರಿದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ರಸ್ತೆ ತಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಆಸ್ಪತ್ರೆಯಲ್ಲಿ ಎಂ.ಆರ್.ಐ., ಆಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮುಂತಾದ ಆಧುನಿಕ ವೈದ್ಯಕೀಯ ಪರಿಕರಗಳನ್ನು ಅಳವಡಿಸಿ, ಹೆಚ್ಚಿನ ಸೌಲಭ್ಯ ಒದಗಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕರಿಯಪ್ಪ ಗುಡಿಮನಿ, ರವಿ ಮಣ್ಣೂರು, ಕೆ. ಲಕ್ಷ್ಮಣ, ಪಿ. ಯುಗಂಧರನಾಯ್ಡು, ಟಿ.ಎಚ್.ಎಂ. ರಾಜಕುಮಾರ್, ಸಣಾಪುರ ಮರಿಸ್ವಾಮಿ, ರಾಜಾಭಕ್ಷಿ, ಪೇಂಟರ್ ನೀಲಪ್ಪ, ಹಗೆದಾಳ್ ವೀರೇಶ್, ಮಹೇಶ್ ಮೆಟ್ರಿ, ಬಸವರಾಜ, ಸಿ.ರಾಮು, ದನಕಾಯೋ ಬಸವರಾಜ, ಸಣ್ಣೆಪ್ಪ ತಳವಾರ್ ಸೇರಿ ಕಂಪ್ಲಿ ಅಭಿವೃದ್ಧಿಗಾಗಿ ಯುವಜನರ ವೇದಿಕೆ, ಟ್ರೇಡ್ ಯೂನಿಯನ್ ಕೋ-ಆರ್ಡಿನೇಷನ್ ಸೆಂಟರ್, ಕರ್ನಾಟಕ ರಾಜ್ಯ ಡಾ. ಭೀಮ್‌ ರಾವ್ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿಕಾರರ ಸಂಘ, ಡಿಎಸ್‌ಎಸ್ (ಬುದ್ಧ, ಬಸವ, ಅಂಬೇಡ್ಕರ್), ಕರ್ನಾಟಕ ಜನಶಕ್ತಿ, ರಾಷ್ಟ್ರೀಯ ಕಿಸಾನ್ ಜಾಗೃತಿ ವಿಕಾಸ ಸಂಘಟನೆಗಳ ಕಾರ್ಯಕರ್ತರಿದ್ದರು.