ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಮ್ಯಾನುವಲ್ ಸ್ಕ್ಯಾವೆಂಜರ್ ಜಾಗೃತಿ ಸಮಿತಿ ಸಭೆಯನ್ನು ಸದ್ಯದಲ್ಲೇ ಕರೆಯದಿದ್ದರೆ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಫಾಯಿ ಕರ್ಮಚಾರಿ ಮೇಲುಸ್ತುವಾರಿ ಸಮಿತಿ ರಾಜ್ಯ ಸದಸ್ಯ ಡಿ.ಆರ್.ರಾಜು ಎಚ್ಚರಿಸಿದರು. ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಜಿಲ್ಲಾ ಮಟ್ಟದ ಮ್ಯಾನುಯೆಲ್ ಸ್ಕ್ಯಾವೆಂಜಿಂಗ್ ನಿಷೇಧ ಮತ್ತು ಪುನರ್ವಸತಿ ಕಾಯ್ದೆ ಅನುಷ್ಠಾನ ಜಿಲ್ಲಾ ಜಾಗೃತಿ ಸಮಿತಿ ಸಭೆಯ ಮುಂದೂಡಿಕೆ ವಿರೋಧಿಸಿ ಜಿಲ್ಲಾಡಳಿತ ಭವನದ ಮಂಭಾಗದಲ್ಲಿ ಪ್ರತಿಭಟನೆಗೆ ಮುಂದಾದಾಗ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ಮಲ್ಲಿಕಾರ್ಜುನಯ್ಯ ಭೇಟಿ ನೀಡಿ ಕಾರಣಾಂತರಗಳಿಂದ ಇಂದಿನ ಸಭೆಯನ್ನು ಮುಂದೂಡಲಾಗಿದೆ. ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಒಂದೆರಡು ದಿನಗಳಲ್ಲಿ ಸಭೆ ಕರೆಯುವುದಾಗಿ ಭರವಸೆ ನೀಡಿದರು. ಮುಂದೂಡಿರುವ ಇಂದಿನ ಸಭೆಯನ್ನು ವಾರದೊಳಗೆ ಕರೆದು ಜಿಲ್ಲಾಧಿಕಾರಿ ಕಾರ್ಯಾಲಯ, ಜಿಲ್ಲಾ ನಗರ ಅಭಿವೃದ್ದಿ ಕೋಶ, ನಗರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಖಾಲಿ ಇರುವ ಹುದ್ದೆಗೆ ಲೋಡರ್ಸ್ ಮತ್ತು ಕ್ಲೀನರ್‌ಗಳನ್ನು ವಿಶೇಷವಾಗಿ ನೇಮಕಾತಿ ಮೂಲಕ ನೇಮಕ ಮಾಡಲು ಫೆ.೭ ರಂದು ಅರ್ಜಿ ಆಹ್ವಾನಿಸಲಾಗಿದ್ದು, ಸರ್ಕಾರದ ಆದೇಶದನ್ವಯ ಶೀಘ್ರವಾಗಿ ನೇಮಕ ಮಾಡಬೇಕು. ನಗರದ ೯ನೇ ವಾರ್ಡ್ ಹಾಗೂ ಕೊಳ್ಳೇಗಾಲದ ಪೌರಕಾರ್ಮಿಕರ ಕಾಲೋನಿಯಲ್ಲಿ ವಾಸಕ್ಕೆ ಮನೆ ಇಲ್ಲದೆ ಮನೆ ನಿರ್ಮಾಣ ಮಾಡಿಕೊಡಬೇಕು. ಕೊಳ್ಳೇಗಾಲ ನಗರಸಭೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವರನ್ನು ಜೇಷ್ಠತೆಯ ಆಧಾರದ ಮೇಲೆ ನಾಲ್ಕು ಮಂದಿ ಮೇಸ್ತ್ರೀ ನೇಮಕ ಮಾಡಬೇಕು. ಜಿಲ್ಲೆಯ ಗ್ರಾಪಂ ಪೌರಕಾರ್ಮಿಕರಿಗೆ ಸರ್ಕಾರಿ ಜಾಗಗಳನ್ನು ಗುರುತಿಸಿ ಮನೆ ನಿರ್ಮಿಸಿಕೊಡಬೇಕು. ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲದಿದ್ದರೆ ಪ್ರತಿಭಟನೆ ಮಾಡಲಾಗುವುದು ಎಂದು ರಾಜು ಎಚ್ಚರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಆರ್ಮುಗಂ, ಪ್ರಧಾನ ಕಾರ್ಯದರ್ಶಿ ವೈ.ಕೆ.ಮೋಳೆ ಪಳನಿ, ಉಪಾಧ್ಯಕ್ಷ ಕೆ ಎನ್ ಪುರ ಕುಮಾರ್ , ಪ್ರಧಾನ ಕಾರ್ಯದರ್ಶಿ. ಆರ್ ನಾಗರಾಜು ನಗರ ಅಧ್ಯಕ್ಷ. ಸಿ ಕೆ ಮಹೇಶ್, ಮೇಗಲಹುಂಡಿ ಮಹಾದೇವ ಚಾಮರಾಜನಗರ ತಾಲೂಕ ಅಧ್ಯಕ್ಷ ಬಳಚವಾಡಿ ರಾಜು ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಸಿ .ಪಿ .ಷಣ್ಮುಗಂ, ಹನೂರು ತಾಲೂಕ ಅಧ್ಯಕ್ಷ ಪಿ ಮಹೇಶ್,ಮಾಂಬಳ್ಳಿ ಸುರೇಶ ಹಾಜರಿದ್ದರು.