10ರಿಂದ ಬಿಸಿಯೂಟ ತಯಾರಕರಿಂದ ಧರಣಿ

| Published : Oct 07 2023, 02:16 AM IST

ಸಾರಾಂಶ

10ರಿಂದ ಬಿಸಿಯೂಟ ತಯಾರಕರಿಂದ ಧರಣಿ
ಕನ್ನಡಪ್ರಭ ವಾರ್ತೆ, ಅಜ್ಜಂಪುರ ಬಿಸಿಯೂಟ ತಯಾರಕರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅ.10ರಿಂದ ಬೆಂಗಳೂರಿನ ಫ್ರೀಡಂ ಪಾಕ್‌ ನಲ್ಲಿ ಅನಿರ್ಧಿಷ್ಟಾವದಿ ಧರಣಿ ನಡೆಸಲಾಗುವುದು ಎಂದು ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯ ಸಮಿತಿ ಸದಸ್ಯೆ ಲತಾ ತಿಳಿಸಿದರು. ಎ ಐ ಟಿ ಯು ಸಿ ಸಂಯೋಜಿತ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯ ಸಮಿತಿ ನೇತೃತ್ವದಲ್ಲಿ ನಡೆಯುವ ಈ ಧರಣಿಯಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಬಿಸಿಯೂಟ ತಯಾರಕರಿಗೆ ಮಾಸಿಕ ವೇತನ 6 ಸಾವಿರ ನೀಡುವುದಾಗಿ 6ನೇ ಗ್ಯಾರಂಟಿ ಯಾಗಿ ಭರವಸೆ ನೀಡಿತ್ತು ಇನ್ನೂ ಅದನ್ನು ಈಡೆರಿಸಿಲ್ಲ ಎಂದು ಹೇಳಿದರು. ಕಳೆದ ಸಾಲಿನ ಬಜೆಟ್‌ ನಲ್ಲಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಒಂದು ಸಾವಿರ ರು. ಹೆಚ್ಚಳ ಮಾಡಿತ್ತು. ಆ ವೇತನ ಕೂಡಲೇ ಜಾರಿಗೊಳಿಸಬೇಕು. ಎಸ್ ಡಿಎಮ್ ಸಿ ಅಧ್ಯಕ್ಷರು ಮತ್ತು ಮುಖ್ಯೋಪಾಧ್ಯಾಯರು ಬ್ಯಾಂಕ್ ಜಂಟಿ ಖಾತೆ ಮಾಡಿಸುವ ಆದೇಶ ಕೂಡಲೇ ರದ್ದು ಗೊಳಿಸಿ ಮೊದಲಿನಂತೆ ಮುಖ್ಯ ಉಪಾಧ್ಯಾಯರು ಮತ್ತು ಅಡುಗೆಯವರ ಜಂಟಿ ಖಾತೆ ಮುಂದುವರೆಸಬೇಕು. ನಿವೃತ್ತಿಯಾದ ಬಿಸಿಯೂಟ ತಯಾರಕರಿಗೆ 2 ಲಕ್ಷ ಇಡುಗಂಟು ಕೊಡಬೇಕು ಮತ್ತು ಅಡುಗೆ ಮಾಡುವ ವೇಳೆ ಅನಾಹುತವಾಗಿ ಮೃತಪಟ್ಟ ಅಡುಗೆಯವರಿಗೆ 25ಲಕ್ಷ ಪರಿಹಾರ ಕೊಡಬೇಕು. ಎಂಬುದು ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಫ್ರೀಡಂ ಪಾರ್ಕ್ ನಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸಿ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು. ಅದರಿಂದ ಎಲ್ಲಾ ಬಿಸಿಯೂಟ ತಯಾರಕರು ಆಧಾರ್ ಕಾರ್ಡ್ ನೊಂದಿಗೆ ಅ.9 ರ ಸಂಜೆ ತಮ್ಮ ಊರುಗಳಿಂದ ಬಸ್ ಅಥವಾ ರೈಲಿನ ಮೂಲಕ ಬೆಂಗಳೂರಿಗೆ ಆಗಮಿಸಬೇಕಾಗಿ ಸಂಘಟನೆ ರಾಜ್ಯ ಸಮಿತಿ ಸದಸ್ಯರಾದ ಲತಾ ತಿಳಿಸಿದ್ದಾರೆ. ರತ್ನ. ವೇದಾವತಿ ಮಂಜುಳಾ ಲಲಿತಾ ಸುನಂದಾ ಸುಧಾ ಪದಾಧಿಕಾರಿಗಳು ಇದ್ದರು.