ಲಿಕ್ಕರ್‌ ಶಾಪ್‌ ಎದುರು ಪ್ರತಿಭಟನೆ

| Published : Sep 18 2024, 01:46 AM IST / Updated: Sep 18 2024, 01:47 AM IST

ಸಾರಾಂಶ

ಶಿರಾ ತಾಲೂಕು ಕಳ್ಳಂಬೆಳ್ಳ ಹೋಬಳಿಯ ಯಲದಬಾಗಿ ಗ್ರಾಮದಲ್ಲಿ ಎಂ.ಎಸ್.ಐ.ಎಲ್ ಲಿಕ್ಕರ್ ಶಾಪ್ ಎದುರು ಮಹಿಳೆಯರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿರಾ ಮದ್ಯಸೇವನೆ ಮಾಡಿ ತಿಪ್ಪನಹಳ್ಳಿ ಗ್ರಾಮದ ಹನುಮಂತರಾಯಪ್ಪ (48) ಎಂಬ ವ್ಯಕ್ತಿ ಎಂಎಸ್ಐಎಲ್ ಅಂಗಡಿ ಬಳಿಯೇ ಮೃತಪಟ್ಟ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮಹಿಳೆಯರು ಶ್ರೀ ಶಕ್ತಿ ಸಂಘದವರು ಮಂಗಳವಾರ ಪ್ರತಿಭಟನೆ ನಡೆಸಿದರು.

ಎಂಎಸ್ಐಎಲ್‌ ಅಂಗಡಿ ಬಳಿ ಜಮಾಯಿಸಿದ ಮಹಿಳೆಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಗ್ರಾಮಸ್ಥ ರಂಗನಾಥ್, ಯಲದಬಾಗಿ ಗ್ರಾಮದಲ್ಲಿ ಲಿಕ್ಕರ್ ಶಾಪ್ ತೆರೆದಿರುವುದರಿಂದ ಅಕ್ಕಪಕ್ಕದ ಗ್ರಾಮಗಳಲ್ಲಿ ಹಲವರು ಮದ್ಯಸೇವನೆಗೆ ದಾಸರಾಗಿದ್ದಾರೆ. ದಿನ ನಿತ್ಯ ಮದ್ಯ ಸೇವನೆ ಮಾಡಿ ಮನೆಯಲ್ಲಿ ಹೆಂಡತಿಯರ ಜೊತೆ ಗಲಾಟೆ ಮಾಡುತ್ತಾರೆ. ಮದ್ಯ ಸೇವನೆ ಮಾಡಿ ಹಲವರ ಆರೋಗ್ಯ ಹದಗೆಟ್ಟಿದೆ. ಎಂ.ಎಸ್.ಐ.ಎಲ್ ಲಿಕ್ಕರ್ ಶಾಪ್ ಅಕ್ಕಪಕ್ಕ ಶಾಲೆಗಳಿದ್ದು, ದಿನ ನಿತ್ಯ ಶಾಲೆಗೆ ಹೋಗುವ ಹೆಣ್ಣು ಮಕ್ಕಳಿಗೆ ತುಂಬಾ ತೊಂದರೆಯಾಗಿದೆ. ಲಿಕ್ಕರ್ ಶಾಪ್ ತೆರೆವುಗೊಳಿಸಿ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಗ್ರಾಮದ ಲಕ್ಷ್ಮೀ, ಮಂಜುಳ, ಸಣ್ಣತಾಯಮ್ಮ, ನರಸಮ್ಮ, ದೊಡ್ಡತಾಯಮ್ಮ, ಕೆಂಪಕ್ಕ, ಸವಿತ, ಗಂಗಮ್ಮ, ಮಂಜಮ್ಮ, ಸಾಕಮ್ಮ, ಜಯಮ್ಮ, ಸಿದ್ದಗಂಗಮ್ಮ, ರಂಗತಾಯಿ, ಮಿನಾಕ್ಷಿ, ಪುಟ್ಟಮ್ಮ, ರಾಜೇಶ್ವರಿ, ಕಾಮಕ್ಷಮ್ಮ, ಪ್ರಮೀಳ, ಶಾರದಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು. ಸ್ಥ ಳಕ್ಕೆ ಅಬಕಾರಿ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಯಾದ ಅರುಣ್ ಕುಮಾರ್ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.17ಶಿರಾ7: ಶಿರಾ ತಾಲೂಕು ಕಳ್ಳಂಬೆಳ್ಳ ಹೋಬಳಿಯ ಯಲದಬಾಗಿ ಗ್ರಾಮದಲ್ಲಿ ಎಂ.ಎಸ್.ಐ.ಎಲ್ ಲಿಕ್ಕರ್ ಶಾಪ್ ಎದುರು ಮಹಿಳೆಯರು ಪ್ರತಿಭಟನೆ ನಡೆಸಿದರು.