ಸಾರಾಂಶ
ಮುದ್ದೇಬಿಹಾಳ: ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಕೃತ್ಯ ಖಂಡಿಸಿ ಪಟ್ಟಣದ ಜಂಗಮ ಸಮಾಜದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಆರೋಪಿ ಫಯಾಜ್‌ನನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ ಪಟ್ಟಣದ ಹಳೆಯ ಕಾಯಿಪಲ್ಲೆ ಖಾಸ್ಗತೇಶ್ವರ ಮಠದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದವು. ಅಲ್ಲಿಂದ ಮಿನಿ ವಿಧಾನಸೌಧಕ್ಕೆ ತೆರಳಿ ತಹಸೀಲ್ದಾರ್ ಬಸವರಾಜ ನಾಗರಾಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.ಈ ವೇಳೆ ದಲಿತ ಮುಖಂಡ ಹರೀಷ ನಾಟಿಕಾರ ಹಾಗೂ ಜಂಗಮ ಸಮಾಜದ ಮುಖಂಡ ದಾನಯ್ಯ ಹಿರೇಮಠ, ವೈ.ಎಚ್ ವಿಜಯಕರ ಕಾಮರಾಜ ಬಿರಾದಾರ ಮಾತನಾಡಿ, ನೇಹಾ ಹಿರೇಮಠ ಅವರ ಕೋಲೆ ಮಾಡಿರುವುದು ಮಾನವಕುಲವೇ ತಲೆ ತಗ್ಗಿಸುವಂತಾಗಿದೆ. ದೇಶದಲ್ಲಿ ಮಹಿಳೆಯರಿಗೆ ಭದ್ರತೆಯಿಲ್ಲದಂತಾಗಿದೆ. ಮಹಿಳೆಯರಿಗೆ ಸೂಕ್ತ ರಕ್ಷಣೆ ಒದಗಿಸುವಂತಾಗಬೇಕು. ಈ ಘಟನೆಗೆ ಕಾರಣನಾದ ಆರೋಪಿ ಫಯಾಜ್‌ನನ್ನು ಗಲ್ಲಿಗೇರಿಸುವ ಮೂಲಕ ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಕಾನೂನು ಬಿಗಿಗೊಳಿಸುವಂತೆ ಆಗ್ರಹವನ್ನು ಮಾಡಿದರು.ಈ ವೇಳೆ ಜಂಗಮ ಸಮಾಜದ ಅಧ್ಯಕ್ಷ ಸಿದ್ದಯ್ಯ ಕಲ್ಯಾಣಮಠ, ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಬಿ.ನಾವದಗಿ, ದಿ.ಕರ್ನಾಟಕ ಕೋ ಅಪ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್, ವಿಜಯ ಮಹಾಂತೇಶ ಸಾಲಿಮಠ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ಸಿದ್ದರಾಜ ಹೊಳಿ, ಮಹೆಬೂಬ್ ಗೊಳಸಂಗಿ, ಸಂಗಯ್ಯ ಶಾಸ್ತ್ರಿಗಳು, ಎಚ್.ಆರ್.ಬಾಗವಾನ, ಬಸವರಾಜ ಸಿದ್ದಾಪುರ, ವೈ.ಎಚ್.ವಿಜಯಕರ, ಸಂಗಪ್ಪ ಮೇಲಿನಮನಿ, ಸದಾಶಿವ ಮಠ, ಶಿವಾನಂದ ಹಿರೇಮಠ, ಹುಸೇನ ಮುಲ್ಲಾ, ಮಹಾಂತೇಶ ಬೂದಿಹಾಳಮಠ, ಮುತ್ತಯ್ಯಾ ಹಿರೇಮಠ ಸೇರಿದಂತೆ ಹಲವರು ಇದ್ದರು.
;Resize=(128,128))
;Resize=(128,128))