ಕ.ವಿ.ಪ್ರ.ನಿ.ನಿ ನೌಕರರ ಸಂಘದ ನೇತೃತ್ವ। ವಿವಿಧ ಸಂಘಟನೆ ಭಾಗಿ

ಕನ್ನಡಪ್ರಭ ವಾರ್ತೆ, ತರೀಕೆರೆ

ರಾಜ್ಯದ ಸುಮಾರು 19 ಜಿಲ್ಲೆಗಳಲ್ಲಿ ಪರವಾನಗಿ ಕೋರಿ ಖಾಸಗಿ ಟಾಟಾ ಪವರ್ ಕಂಪನಿ ಸಲ್ಲಿಸಿರುವ ಅರ್ಜಿಯನ್ನು ವಿದ್ಯುತ್ ನಿಯಂತ್ರಣ ಆಯೋಗ ತಿರಸ್ಕರಿಸಬೇಕೆಂದು ಒತ್ತಾಯಿಸಿ ಕ.ವಿ.ಪ್ರ.ನಿ.ನಿ ನೌಕರರ ಸಂಘದ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು, ಭಾರತೀಯ ಕಿಸಾನ್ ಸಂಘ, ನಿವೃತ್ತ ನೌಕರರ ಸಂಘಟನೆ ಸದಸ್ಯರು, ಸಾರ್ವಜನಿರು ಮತ್ತು ಮೆಸ್ಕಾಂ ನೌಕರರು ಆಗ್ರಹಿಸಿದರು.

ತರೀಕೆರೆ ಮೆಸ್ಕಾಂ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟಣಾ ಸಭೆಯಲ್ಲಿ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ಮಂಜುನಾಥ್ ಮಾತನಾಡಿ, ರಾಜ್ಯದ ಸುಮಾರು 19 ಜಿಲ್ಲೆಗಳಲ್ಲಿ ವಿದ್ಯುತ್ ವಿತರಿಸಲು ಖಾಸಗಿ ಕಂಪನಿ ಟಾಟಾ ಪವರ್ಸ್ ಅರ್ಜಿ ಸಲ್ಲಿಸಿದ್ದು ಜೂನ್‌ 23 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಗ್ರಾಹಕರು, ರೈತರು ಮತ್ತು ಎಲ್ಲಾ ನಾಗರಿಕರು ಆಕ್ಷೇಪಣೆ ಸಲ್ಲಿಸುವಂತೆ ಕೋರಿದರು.

ಕ.ವಿ.ಪ್ರ.ನಿ.ನಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗಿರೀಶ್ ಮಾತನಾಡಿ ಸಾರ್ವಜನಿಕ ಸಂಸ್ಥೆಗಳು ಸಾಮಾಜಿಕ ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಖಾಸಗಿಯವರಿಗೆ ನೀಡಿದರೆ ಲಾಭದ ಕಡೆ ಮಾತ್ರ ಗಮನ ಹರಿಸಿ ಸಾಮಾಜಿಕ ಕಾರ್ಯಕ್ರಮ ಮರೆಯುತ್ತಾರೆ ಎಂದು ತಿಳಿಸಿದರು.


ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿಯಾವುಲ್ಲ, ಕನ್ನಡಶ್ರೀ ಎಸ್ ಭಗವಾನ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಶಿವಣ್ಣ, ಸಾಮಾಜಿಕ ಹೋರಾಟಗಾರ ಗೋಪಿಕುಮಾರ್ ಟಿ. ಜೆ. ಎಂ ನರೇಂದ್ರ ಮುಂತಾದವರು ಮಾತನಾಡಿ ಸರ್ಕಾರಿ ಕಂಪನಿಗಳನ್ನು ಉಳಿಸಿಕೊಳುವುದು ಸರ್ಕಾರದ ಜವಾಬ್ದಾರಿ. ಈ ಸಂಬಂಧ ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ, ರೈತರು, ಮೆಸ್ಕಾಂ ನೌಕರರು ಮತ್ತು ಗುತ್ತಿಗೆದಾರರ ಒಡಗೂಡಿ ಖಾಸಗೀಕರಣದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಮೆಸ್ಕಾಂ ಮತ್ತು ಕ.ವಿ.ಪ್ರ.ನಿ.ನಿ ಅಧಿಕಾರಿಗಳು ಮತ್ತು ನೌಕರರು, ವಿವಿಧ ಕನ್ನಡಪರ ಮತ್ತು ರೈತಪರ ಸಂಘಟನೆ ಸದಸ್ಯರು, ಗುತ್ತಿಗೆದಾರರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

--

21ಕೆಟಿಆರ್.ಕೆ.25ಃ ತರೀಕೆರೆಯಲ್ಲಿ ಮೆಸ್ಕಾಂ ಅವರಣದಲ್ಲಿ ಪ್ರತಿಭಟನಾ ಸಭೆ ಏರ್ಪಡಿಸಲಾಗಿತ್ತು.