ಸಾರಾಂಶ
ಅಮಾಯಕ ಪ್ರವಾಸಿಗರನ್ನು ನಿರ್ದಯವಾಗಿ ಹತ್ಯೆ ಮಾಡಿದ ಉಗ್ರರಿಗೆ ತಕ್ಕ ಶಿಕ್ಷೆ ವಿಧಿಸಬೇಕು
ಕನ್ನಡಪ್ರಭ ವಾರ್ತೆ ಮೈಸೂರು
ಜಮ್ಮು- ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ಭಾರತೀಯರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಮೈಸೂರು ಬ್ಯೂಟಿಷಿಯನ್ ವೆಲ್ ಫೇರ್ ಅಸೋಸಿಯೇಷನ್ ಪದಾಧಿಕಾರಿಗಳು ಮತ್ತು ಸದಸ್ಯರು ನಗರದ ರಾಮಸ್ವಾಮಿ ವೃತ್ತದಲ್ಲಿ ಕಪ್ಪು ಬಟ್ಟೆ ಧರಿಸಿ ಸೋಮವಾರ ಪ್ರತಿಭಟಿಸಿದರು.ಅಮಾಯಕ ಪ್ರವಾಸಿಗರನ್ನು ನಿರ್ದಯವಾಗಿ ಹತ್ಯೆ ಮಾಡಿದ ಉಗ್ರರಿಗೆ ತಕ್ಕ ಶಿಕ್ಷೆ ವಿಧಿಸಬೇಕು. ಆ ಮೂಲಕ ಭಾರತೀಯರಿಗೆ ನ್ಯಾಯ ಒದಗಿಸಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಅವರು ಒತ್ತಾಯಿಸಿದರು. ಈ ವೇಳೆ ನಿವೃತ್ತ ಯೋದರಾದ ಶ್ರೀನಿವಾಸ್, ನಂಜುಂಡಸ್ವಾಮಿ, ಪೊನ್ನಪ್ಪ, ಬಿದ್ದಪ್ಪ ಅವರು ಪ್ರತಿಭಟನೆಯಲ್ಲಿ ಮಾತನಾಡಿ, ಉಗ್ರರ ಕೃತ್ಯವನ್ನು ಖಂಡಿಸಿದರು. ಸಂಘದ ಅಧ್ಯಕ್ಷೆ ವೇದಾ ರೈ, ಪದಾಧಿಕಾರಿಗಳಾದ ಪ್ರತಿಭಾ ಶೆಟ್ಟಿ, ಸಪ್ನಾ, ಮಾಲಿನಿ ಪಾಲಾಕ್ಷ, ಮಂಜುಳಾ, ನಸ್ರೀನ್, ರಾಜೇಶ್ವರಿ, ಪದ್ಮಿನಿ, ವೀಣಾ, ಜ್ಯೋತಿ ಶೆಟ್ಟಿ, ಶಾರದಾ, ರಿತಿ ಮೊದಲಾದವರು ಇದ್ದರು.