ಸಾರಾಂಶ
ಕಲ್ಕತ್ತಾದ ಸ್ನಾತಕೋತರ ಪದವಿ ವೈದ್ಯ ವಿದ್ಯಾರ್ಥಿನಿಯ ಮೇಲೆ ನಡೆದ ಬಲತ್ಕಾರ ಮತ್ತು ಕೊಲೆಯ ಘೋರ ಕೃತ್ಯ ಖಂಡಿಸಿ ಎಎಫ್ಐ (ಆಯುಶ್ ಫೆಡರೇಷನ್ ಆಫ್ ಇಂಡಿಯಾ), ಎಎಂಐ (ಇಂಡಿಯನ್ ಮೆಡಿಕಲ್ ಅಸೋಶಿಯೇಷನ್), ನಗರದ ಬಿಎಲ್‌ಡಿಇ ಆಯುರ್ವೇದಿಕ ಕಾಲೇಜು, ನಾಗೂರ ಆಯುರ್ವೇದಿಕ ಕಾಲೇಜು, ಕರ್ಪುರಮಠ ಆಯುರ್ವೇದಿಕ ಕಾಲೇಜುಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ವಿಜಯಪುರ
ಕಲ್ಕತ್ತಾದ ಸ್ನಾತಕೋತರ ಪದವಿ ವೈದ್ಯ ವಿದ್ಯಾರ್ಥಿನಿಯ ಮೇಲೆ ನಡೆದ ಬಲತ್ಕಾರ ಮತ್ತು ಕೊಲೆಯ ಘೋರ ಕೃತ್ಯ ಖಂಡಿಸಿ ಎಎಫ್ಐ (ಆಯುಶ್ ಫೆಡರೇಷನ್ ಆಫ್ ಇಂಡಿಯಾ), ಎಎಂಐ (ಇಂಡಿಯನ್ ಮೆಡಿಕಲ್ ಅಸೋಶಿಯೇಷನ್), ನಗರದ ಬಿಎಲ್‌ಡಿಇ ಆಯುರ್ವೇದಿಕ ಕಾಲೇಜು, ನಾಗೂರ ಆಯುರ್ವೇದಿಕ ಕಾಲೇಜು, ಕರ್ಪುರಮಠ ಆಯುರ್ವೇದಿಕ ಕಾಲೇಜುಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಸಂಘಟನೆಗಳ ವೈದ್ಯರು, ಆಯುರ್ವೇದ ಕಾಲೇಜುಗಳ ವೈದ್ಯರು, ಸಿಬ್ಬಂದಿ, ವಿದ್ಯಾರ್ಥಿಗಳು ಪ್ರತಿಭಟನಾ ರ್‍ಯಾಲಿ ನಡೆಸಿದರು.ಸಿದ್ಧೇಶ್ವರ ದೇವಸ್ಥಾನದ ಎದುರು ಅಗಲಿದ ವೈದ್ಯ ವಿದ್ಯಾರ್ಥಿನಿಗೆ ಶ್ರದ್ಧಾಂಜಲಿ ಹಾಗೂ ದುಃಖಿತ ಕುಟುಂಬಕ್ಕೆ ದುಃಖವನ್ನು ಬರೆಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಲಾಯಿತು.ಈ ವೇಳೆ ಎಎಫ್ಐ ಜಿಲ್ಲಾಧ್ಯಕ್ಷ ಡಾ.ಅರವಿಂದ ಡಾನಕಶಿರೂರ, ಕಾರ್ಯದರ್ಶಿ ಡಾ.ರಾಜೇಂದ್ರ ಸಂಕನ್ನವರ, ಸಂಘಟನಾ ಕಾರ್ಯದರ್ಶಿ ಡಾ.ವಾಸುದೇವ ಢಗೆ, ಡಾ.ಮಲ್ಲು ಭೂತನಾಳ, ಡಾ.ಮಹೇಶ ಪರಮಶೆಟ್ಟಿ ಸೇರಿದಂತೆ ನೂರಾರು ವೈದ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.