ಪಾಂಡವಪುರ ತಾಲೂಕಿನ ಬನಘಟ್ಟದ ಗ್ರಾಮದ ಬಳಿ ಶ್ರೀರಂಗಪಟ್ಟಣ- ಜೇವರ್ಗಿ ಮುಖ್ಯರಸ್ತೆಗೆ ನಿರ್ಮಾಣ ಮಾಡಿರುವ ಸೇತುವೆ ಉದ್ಘಾಟಿಸಿ ಅಥವಾ ರಸ್ತೆಯನ್ನು ಅಗಲೀಕರಣ ಮಾಡಿ ಸಾರ್ವಜನಿಕರಿಗೆ ಓಡಾಡಕ್ಕೆ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿ ಸೋಮವಾರ ಸ್ಥಳೀಯರಿಂದ ಪ್ರತಿಭಟನೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಬನಘಟ್ಟದ ಗ್ರಾಮದ ಬಳಿ ಶ್ರೀರಂಗಪಟ್ಟಣ- ಜೇವರ್ಗಿ ಮುಖ್ತರಸ್ತೆಗೆ ನಿರ್ಮಾಣ ಮಾಡಿರುವ ಸೇತುವೆ ಉದ್ಘಾಟಿಸಿ ಅಥವಾ ರಸ್ತೆಯನ್ನು ಅಗಲೀಕರಣ ಮಾಡಿ ಸಾರ್ವಜನಿಕರಿಗೆ ಓಡಾಡಕ್ಕೆ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿ ಸೋಮವಾರ ಸ್ಥಳೀಯರು ಪ್ರತಿಭಟನೆ ನಡೆಸಿದರು.ಮುಖಂಡ ಎಚ್.ಎನ್.ಮಂಜುನಾಥ್ ನೇತೃತ್ವದಲ್ಲಿ ಗ್ರಾಮದ ಶ್ರೀರಂಗಪಟ್ಟಣ- ಜೇವರ್ಗಿ ರಸ್ತೆ ತಡೆದು ಕೆಲಕಾಲ ಪ್ರತಿಭಟನೆ ನಡೆಸಿ ಪೊಲೀಸರ ಮನವಿ ಮೇರೆಗೆ ರಸ್ತೆ ಪಕ್ಕದಲ್ಲಿ ಪ್ರತಿಭಟನಾ ಧರಣಿ ನಡೆಸಿದ ಪ್ರತಿಭಟನಾಕಾರರು ಸ್ಥಳಕ್ಕೆ ಬಂದ ರಾಷ್ಟ್ರೀಯ ಹೆದ್ದಾರೆ ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ರಸ್ತೆಗೆ ಸೇತುವೆ ನಿರ್ಮಿಸಿ 10 ವರ್ಷಗಳು ಕಳೆದರೂ ಸಹ ಸೇತುವೆಯಲ್ಲಿ ತಾಂತ್ರಿಕ ಸಮಸ್ಯೆ ಇದೆ ಎಂಬ ಕಾರಣ ಹೇಳಿ ಅಧಿಕಾರಿಗಳು ಸೇತುವೆ ಉದ್ಘಾಟಿಸಿಲ್ಲ. ಇದರಿಂದ ವಾಹನ ಸವಾರರಿಗೆ ಅನಾನೂಕೂಲವಾಗುತ್ತಿದೆ. ರಸ್ತೆ ನಿರ್ಮಾಣ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಉಬ್ಬು ತಗ್ಗುಗಳು ಇರುವುದರಿಂದ ಅಪಘಾತ ಹೆಚ್ಚಾಗುತ್ತಿವೆ. ಸೇತುವೆ ಉದ್ಘಾಟನೆಯಾಗುವವರೆಗೂ ಈ ಹಿಂದೆ ಇದ್ದ ತಯಾಸ್ಥಿತಿಯಲ್ಲಿ ರಸ್ತೆ ನಿರ್ಮಾಣ ಮಾಡಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಸ್ಥಳಕ್ಕೆ ಆಗಮಿಸಿದ ಎಇಇ ಉಜ್ಜನ್‌ಕೊಪ್ಪ, ಎಇ ಚೇತನ್ ಅವರನ್ನು ತರಾಟೆ ತೆಗೆದುಕೊಂಡ ಪ್ರತಿಭಟನಾಕಾರರು, ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳಕ್ಕೆ ಕರೆಯಿಸಿ ಇಲ್ಲಿನ ಸಮಸ್ಯೆಗಳ ಬಗ್ಗೆ ತಿಳಿಸಬೇಕು. ಜತೆಗೆ ತಾತ್ಕಾಲಿಕವಾಗಿ ರಸ್ತೆಯಲ್ಲಿ ಇರುವ ಉಬ್ಬುತಗ್ಗುಗಳನ್ನು ಸರಿಪಡಿಸಿ ಎಂದು ಆಗ್ರಹಿಸಿದರು.
ಮಧ್ಯ ಪ್ರವೇಶಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ಶರತ್ ಅವರು, ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಇತ್ಯರ್ಥಪಡಿಸುವ ಕೆಲಸ ಮಾಡಿ ಎಂದರು. ಬಳಿಕ ಎಇಇ ಉಜ್ಜೀನ್‌ಕೊಪ್ಪ, ದೂರವಾಣಿ ಮೂಲಕ ಕರೆ ಮಾಡಿ ಚರ್ಚಿಸಿ ಜ.28ಕ್ಕೆ ಇಇ ಅವರನ್ನು ಸ್ಥಳಕ್ಕೆ ಕರೆಯಿಸಿ ಸಮಸ್ಯೆ ಬಗೆರಿಸವುದಾಗಿ ಭರವಸೆ ನೀಡಿದರು. ಆ ಬಳಿಕ ಪ್ರತಿಭಟನೆ ವಾಪಸ್ ಪಡೆದರು.ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್, ಬಾಲಗಂಗಾಧರ್, ಹೊಸೂರು ರಮೇಶ್, ಸ್ವಾಮೀಗೌಡ, ಕುಮಾರಸ್ವಾಮಿ, ಗುಡ್ಡಪ್ಪ, ನಾಗೇಶ್, ಶ್ರೀನಿವಾಸ್, ಅಶೋಕ್, ನವೀನ್, ಸುನೀಲ್ ಸೇರಿದಂತೆ ಹಲವರು ಇದ್ದರು.