ಕನ್ನಡಪ್ರಭ ವಾರ್ತೆ ಶಿರಾ ತಾಲೂಕಿನ ಗೌಡಗೆರೆ ಹೋಬಳಿ ತಾವರೆಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾರನಗೆರೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿದ್ದು, ನೀರಿನ ಘಟಕವನ್ನು ತಕ್ಷಣ ರಿಪೇರಿ ಮಾಡಿಸಿಕೊಡಬೇಕೆಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡ ನಟರಾಜ್ ಗೌಡ ಅವರು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಲಕ್ಷಾಂತರು ರುಪಾಯಿ ವೆಚ್ಚ ಮಾಡಿ ನಿರ್ಮಿಸುತ್ತಾರೆ. ಆದರೆ ನಿರ್ಮಿಸಿದ ಕೆಲವೇ ತಿಂಗಳುಗಳಲ್ಲಿ ಘಟಕಗಳು ಕಿಟ್ಟು ಹೋಗುತ್ತಿವೆ. ಮಾರನಗೆರೆಯಲ್ಲಿ ಶುದ್ಧ ನೀರಿನ ಘಟಕ ಕೆಟ್ಟುನಿಂತು ಸುಮಾರು ೮ ತಿಂಗಳಾಗಿದೆ. ರಿಪೇರಿ ಮಾಡಿಸುವಂತೆ ಗ್ರಾಮ ಪಂಚಾಯಿತಿ ಪಿಡಿಒ ಅವರಿಗೆ ಕೇಳಿದರೆ ಅದು ಗುತ್ತಿಗೆದಾರರ ವ್ಯಾಪ್ತಿಯಲ್ಲಿದ್ದು, ಅವರನ್ನೇ ಕೇಳಿ ಎಂದು ಹೇಳುತ್ತಿದ್ದಾರೆ. ಗುತ್ತಿಗೆದಾರರಿಗೆ ಕರೆ ಮಾಡಿದರೆ ಅವರು ಕರೆ ಸ್ವೀಕರಿಸುತ್ತಿಲ್ಲ. ಶುದ್ಧ ಕುಡಿಯುವ ನೀರಿಗೆ ಗ್ರಾಮದಲ್ಲಿ ಹಾಹಾಕಾರ ಉಂಟಾಗಿದೆ. ಗ್ರಾಮದಲ್ಲಿ ವೃದ್ಧರು ಇದ್ದು ಅವರಿಗೆ ಬೇರೆ ಕಡೆ ನೀರನ್ನು ತರಲು ಕಷ್ಟವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಿಪೇರಿ ಮಾಡಿಸಿಕೊಡಬೇಕೆಂದು ಒತ್ತಾಯಿಸಿದರು. ಗ್ರಾಮದ ನಿವಾಸಿ ಸಾಕಮ್ಮ ಮಾತನಾಡಿ ಮಾರನಗೆರೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿರುವುದರಿಂದ ನೀರನ್ನು ತರಲು ಬೇರೆ ಗ್ರಾಮಗಳಿಗೆ ಹೋಗಬೇಕು. ಹೆಣ್ಣು ಮಕ್ಕಳು ಬೇರೆ ಊರಿಗೆ ಹೋಗಿ ನೀರು ತರಲು ಸಾಧ್ಯವಾಗುವುದಿಲ್ಲ. ದ್ವಿಚಕ್ರ ವಾಹನ ಇರುವವರು ವಾಹನಗಳಲ್ಲಿ ತರುತ್ತಾರೆ. ಆದ್ದರಿಂದ ನಮ್ಮ ಸಮಸ್ಯೆಯನ್ನು ಅಧಿಕಾರಿಗಳು ಬಂದು ಶೀಘ್ರ ಸರಿಪಡಿಸಬೇಕೆಂದು ಒತ್ತಾಯಿಸಿದರು. ಗ್ರಾಮದಲ್ಲಿ ನೀರಿನ ಸಮಸ್ಯೆ ಕುರಿತು ಪಂಚಾಯಿತಿಗೆ ಹೇಳಿದರೆ ಅವರು ಬೇರೆಯವರ ಮೇಲೆ ಹಾಕಿ ಕೈ ತೊಳೆದಕೊಂಡಿದ್ದಾರೆ. ಬೇಸಿಗೆಯಲ್ಲಿ ಜನ ಜಾನುವಾರುಗಳಿಗೆ ಸಹ ನೀರಿಲ್ಲ. ಊರಿನಲ್ಲಿ ಇರುವ ಘಟಕ ನಿರ್ಮಾಣ ಮಾಡಿದ್ದೇ ತಡ ಅದು ಸಹ ಕೆಟ್ಟು ಹೋಗಿದೆ. ಕಾಟಾಚಾರಕ್ಕೆ ಘಟಕ ನಿರ್ಮಾಣ ಮಾಡಿರುವ ಅಧಿಕಾರಿಗಳು ಅದರಲ್ಲೂ ಹಣ ಲಪಟಾಯಿಸಿ ಜನರಿಗೆ ತೊಂದರೆ ನೀಡುತ್ತಿದ್ದಾರೆ. ಉತ್ತಮ ಗುಣಮಟ್ಟದ ಯಂತ್ರಗಳನ್ನು ಅಳವಡಿಸಿದ್ದರೆ ಘಟಕಗಳು ಉತ್ತಮವಾಗಿ ಇರುತ್ತಿದ್ದವು ಆದರೆ ಕಳಪೆ ಕಾಮಗಾರಿ ಮಾಡಿ ಬಿಲ್ ಪಡೆದು ಜನರಿಗೆ ಮೋಸ ಮಾಡಲಾಗಿದೆ. ಸಂಬಂಧಿಸಿದವರು ತಮಗೆ ಸಂಬಂಧವಿಲ್ಲವೆಂಬಂತೆ ಓಡಾಡುತ್ತಿದ್ದು ಎರಡು ದಿನಗಳಲ್ಲಿ ಘಟಕ ಸರಿಪಡಿಸದರೆ ಇದ್ದರೆ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಆಕ್ರೋಶ ವ್ಯ,ಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ರಂಗನಾಥ್, ಜಯಣ್ಣ, ರಾಮಣ್ಣ, ನರಸಿಂಹಮೂರ್ತಿ, ರೇಖಾ, ಸಿದ್ದಗಂಗಮ್ಮ, ವಿಶ್ವನಾಥ್, ಸಾಕಮ್ಮ, ಕವಿತಾ, ಶೃತಿ, ಮಮತಾ ಸೇರಿದಂತೆ ಹಲವರು ಭಾಗವಹಿಸಿದ್ದರು.ಕುಡಿಯುವ ನೀರಿನ ಘಟಕ ಸರಿಪಡಿಸುವಂತೆ ಪ್ರತಿಭಟನೆ
ತಾಲೂಕಿನ ಗೌಡಗೆರೆ ಹೋಬಳಿ ತಾವರೆಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾರನಗೆರೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿದ್ದು, ನೀರಿನ ಘಟಕವನ್ನು ತಕ್ಷಣ ರಿಪೇರಿ ಮಾಡಿಸಿಕೊಡಬೇಕೆಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.