ಪ್ರವಾಸಿ ಮಕ್ಕಳಿಂದ ಕೆಂಪೇಗೌಡರ ಪ್ರತಿಮೆ ಉಳಿಸಿ ಪ್ರತಿಭಟನೆ

| Published : Oct 20 2025, 01:02 AM IST

ಸಾರಾಂಶ

ಮಾಗಡಿ: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಇತಿಹಾಸ ತಿಳಿಯಲು ಪ್ರತಿಮೆ ಉಳಿಸಿ ಸಂರಕ್ಷಿಸುವಂತೆ ಶಾಲಾ ಮಕ್ಕಳು ಘೋಷಣೆ ಮೊಳಗಿಸಿ ಪ್ರತಿಮೆ ಸ್ಥಳಾಂತರ ವಿರೋಧಿಸಿದರು.

ಮಾಗಡಿ: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಇತಿಹಾಸ ತಿಳಿಯಲು ಪ್ರತಿಮೆ ಉಳಿಸಿ ಸಂರಕ್ಷಿಸುವಂತೆ ಶಾಲಾ ಮಕ್ಕಳು ಘೋಷಣೆ ಮೊಳಗಿಸಿ ಪ್ರತಿಮೆ ಸ್ಥಳಾಂತರ ವಿರೋಧಿಸಿದರು.

ಪಟ್ಟಣದ ಕೆಂಪೇಗೌಡ ಪ್ರತಿಮೆ ವೀಕ್ಷಣೆ ಹಾಗೂ ಇತಿಹಾಸ ತಿಳಿಯಲು ಪ್ರವಾಸಕ್ಕೆಂದು ಆಗಮಿಸಿದ ವಿವಿಧ ಶಾಲಾ ಮಕ್ಕಳ ಕೆಂಪೇಗೌಡ ಪ್ರತಿಮೆ ಮುಂದೆ ಸ್ಲೋಗನ್ ಬರಹದ ಪಟ ಹಿಡಿದು ನಮ್ಮೆಲ್ಲರಿಗೂ ಆದರ್ಶವಾಗಿರುವ ಕೆಂಪೇಗೌಡ ಪ್ರತಿಮೆ ಸ್ಥಳಾಂತರ ಬೇಡ, ಇತಿಹಾಸದ ತಿಳಿಯಲು ಪ್ರತಿಮೆ ಇಲ್ಲೇ ಉಳಿಯಬೇಕು. ಕೆಂಪೇಗೌಡರ ಪ್ರತಿಮೆಗೆ ನೆರಳಾಗಿರುವ ಮರಗಿಡಗಳನ್ನು ಸಂರಕ್ಷಿಸಬೇಕು. ಪರಿಸರ ಉಳಿಸಿ ಎಂದು ಘೋಷಣೆ ಮೊಳಗಿಸಿದರು.

ಗುರುಕುಲದ ದರ್ಶನ್ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಕೋಟೆ,ಕೊತ್ತಲು, ಗುಡಿ ಗೋಪುರಗಳನ್ನು ಕೆರೆ ಕಟ್ಟೆಗಳನ್ನು ಹಾಗೂ ಸರ್ವಧರ್ಮಯರಿಗೂ ಪೇಟೆಗಳನ್ನು ಕಟ್ಟಿದ ಧರ್ಮಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಳಾಂತರ ಮಾಡುತ್ತಿದ್ದಾರೆ ಎಂಬ ವಿಷಯ ತಿಳಿದು ತುಂಬ ಮನಸ್ಸಿಗೆ ಬೇಸರವಾಯಿತು. ಹೀಗಾಗಿ ಮಕ್ಕಳೊಂದಿಗೆ ಕೆಂಪೇಗೌಡರ ಇತಿಹಾಸ ತಿಳಿಯಲು ಪ್ರತಿಮೆ ಉಳಿಯಲಿ ಎಂದು ಮಕ್ಕಳೊಲ್ಲರೂ ಸೇರಿ ಘೋಷಣೆ ಮೊಳಗಿಸಿದ್ದೇವೆ. ಅವರ ಆಳ್ವಿಕೆ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಅವರ ಪ್ರತಿಮೆ ಸ್ಥಳಾಂತರ ಎಷ್ಟೆರ ಮಟ್ಟಿಗೆ ಸರಿ. ಇದು ನಾಡಿನ ಜನತೆಗೆ ಹಾಗೂ ವಿಶೇಷವಾಗಿ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯದ ಜತೆಗೆ ಅವಮಾನ ಮಾಡಿದಂತಾಗುತ್ತದೆ. ಇದಕ್ಕೆಲ್ಲ ಯಾರೂ ಅವಕಾಶ ಮಾಡಿಕೊಡಬಾರದು ಎಂದು ಮಕ್ಕಳೊಂದಿಗೆ ಕೆಂಪೇಗೌಡ ಪ್ರತಿಮೆ ಉಳಿವಿಗೆ ಘೋಷಣೆ ಕೂಗಿ ಮನದಾಳದ ಮಾತನ್ನಹ ಹೊರಹಾಕಿದ್ದೇವೆ ಎಂದು ತಿಳಿಸಿದರು.

ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಮಾತನಾಡಿ, ನಮ್ಮ ಯೂಟೂಬ್ ಚಾಲನ್ ವೀಕ್ಷಿಸಿರುವ ಶಾಲಾ ಮಕ್ಕಳು ಪ್ರತಿಮೆಗೆ ವೀಕ್ಷಣೆಗೆ ಬಂದಿದ್ದಾರೆ. ಮಕ್ಕಳು ದೇವರ ಸಮಾನ, ನಾಡಪ್ರಭು ಕೆಂಪೇಗೌಡರು ಮಕ್ಕಳ ಹೃದಯದಲ್ಲಿದ್ದಾರೆ. ಅವರು ಪ್ರತಿಮೆ ವೀಕ್ಷಿಸಿ ಸುಂದರವಾದ ಪ್ರತಿಮೆ ಸ್ಥಳಾಂತರ ತಿಳಿದು ಬೇಸರ ವ್ಯಕ್ತಪಡಿಸಿ ಕೆಂಪೇಗೌಡರ ಹೆಸರು ಅಜಾಮರವಾಗಿದೆ. ಅವರು ಶಾಶ್ವತವಾಗಿ ಇಲ್ಲೇ ಇರಬೇಕು. ಪ್ರತಿಮೆಯೂ ಇಲ್ಲೇ ಉಳಿಯಬೇಕು ಘೋಷಣೆ ಕೂಗಿದ್ದಾರೆ. ಇದರಲ್ಲಿ ನಮ್ಮ ಪಾತ್ರವಿಲ್ಲ, ಸ್ವಯಂ ಇಚ್ಚೆಯಿಂದ ಮಕ್ಕಳು ಪ್ರತಿಮೆ ವೀಕ್ಷಣೆಗೆ ಬಂದಿದ್ದರು. ಆದರೂ ಮಕ್ಕಳು ನನಗೆ ಪ್ರತಿಮೆ ಇಲ್ಲೇ ಉಳಿಯಬೇಕೆಂದು ಮನವಿ ಸಲ್ಲಿಸಿದ್ದಾರೆ. ಅವರಿಗೆ ಚಿರಋಣಿಯಾಗಿದ್ದೇನೆ. ಶಾಲಾ ಮಕ್ಕಳು ಪ್ರತಿಭಟನೆಯಲ್ಲಿ ಭಾಗವಹಿಸುವಂತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಕೃಷ್ಣಮೂತರ್ಿ ಮಕ್ಕಳು ದೇವರಿಗೆ ಸಮಾನ ಅವರ ಹೃದಯದಲ್ಲಿ ಕೆಂಪೇಗೌಡರಿದ್ದಾರೆ. ಸರ್ಕಾರಿ, ಶಿಕ್ಷಕರು ಯಾರೂ ಸಹ ಮಕ್ಕಳನ್ನು ಪ್ರಶ್ನಿಸುವಂತಿಲ್ಲ ಎಂದು ಪ್ರತಿಕ್ರಿಯಿಸಿದರು.

ನ್ಯಾಯಾಲಯದಲ್ಲಿ ಪ್ರಕರಣ: ನ್ಯಾಯಾಲಯದ ತೀಪರ್ು ಬಂದ ನಂತರ ನಾನು ಮಾತನಾಡುತ್ತೇನೆ. ಹೈಕೋರ್ಟ್ ನ್ಯಾಯಮೂರ್ತಿ ಗಳು ಅ.23 ಸಮಯ ನಿಗಧಿ ಮಾಡಿದ್ದಾರೆ. ನ್ಯಾಯಮೂರ್ತಿ ಆದೇಶ ನೀಡುವವರೆವಿಗೂ ನಾನು ಏನೇನು ಹೇಳುವುದಿಲ್ಲ, ತೀರ್ಪು ಆದೇಶ ಬಂದ ನಂತರ ಎಲ್ಲವನ್ನು ಮಾಧ್ಯಮಗಳಿಗೆ ತಿಳಿಸುತ್ತೇನೆ ಎಂದು ತಿಳಿಸಿದರು.

ಕೆಂಪೇಗೌಡರ ಕಟ್ಟಾ ಅಭಿಮಾನಿ: ನಾನು ನಾಡಪ್ರಭು ಕೆಂಪೇಗೌಡರ ಕಟ್ಟಾ ಅಭಿಮಾನಿ, ನಾನು ಗೌಡರ ವಂಶದಲ್ಲಿ ಮಾಗಡಿಯಲ್ಲಿ ಹುಟ್ಟಿರುವುದು ನಮ್ಮ ಪೂರ್ವಜನ್ಮದ ಪುಣ್ಯ, ಹೀಗಾಗಿ ಕೆಂಪೇಗೌಡರ ಹೆಸರಿನಲ್ಲಿ ಕಳೆದ 25 ವರ್ಷಗಳಿಂದಲೂ ಜಯಂತಿ ಆಚರಣೆ, ಅನ್ನದಾನ, ಆರೋಗ್ಯ ಶಿಬಿರವನ್ನು ಮಾಡಿಕೊಂಡು ಬಂದಿರುತ್ತೇನೆ. ಹೀಗಾಗಿ ನಾನು ಸ್ವಂತ ಹಣದಲ್ಲಿ ಪುರಸಭೆಅನುಮತಿ ಪಡೆದು ಪ್ರತಿಮೆ ಸ್ಥಾಪಿಸಿದ್ದೇನೆ. ಇಲ್ಲೇ ಉಳಿಯಬೇಕೆಂದು ಹೋರಾಟ ಮಾಡಿದ್ದೇನೆ ಎಂದು ಕೃಷ್ಣಮೂರ್ತಿ ವಿವರಿಸಿದರು.

ಈ ವೇಳೆ ಮಾಡಬಾಳ್ ಸಿ. ಜಯರಾಮ್, ಕೆಂಪೇಗೌಡ, ಮೋಹನ್, ವೆಂಕಟೇಶ್, ಆನಂದ್, ಜಯಣ್ಣ ಬುಡಾನ್ ಸಾಬ್, ನಾಗರಾಜು, ಶಿವಣ್ಣ, ಶಿವಲಿಂಗಯ್ಯ, ಕುಮಾರ್, ಶಂಕರಪ್ಪ, ನಾರಾಯಣ ಹಾಗೂ ವಿವಿಧ ಶಾಲಾ ಶಿಕ್ಷಕ, ಶಿಕ್ಷಕಿಯರು ಇತರರು ಇದ್ದರು.