ಪ್ರತಿಭಟನೆ, ವಾಗ್ವಾದ: ಶೋಭಾಯಾತ್ರೆಗೆ ಧ್ವನಿವರ್ಧಕಗಳಿಗೆ ಅನುಮತಿ

| Published : Sep 13 2025, 02:04 AM IST

ಪ್ರತಿಭಟನೆ, ವಾಗ್ವಾದ: ಶೋಭಾಯಾತ್ರೆಗೆ ಧ್ವನಿವರ್ಧಕಗಳಿಗೆ ಅನುಮತಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾಗಣಪತಿ ಶೋಭಾಯಾತ್ರೆಯಲ್ಲಿ ಡಿಜೆಗೆ ಅನುಮತಿ ನೀಡುವಂತೆ ಆಗ್ರಹಿಸಿ ಹಿಂದೂ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಭದ್ರಾವತಿಯಿಂದ ಚಿತ್ರದುರ್ಗ ನಗರಕ್ಕೆ ಆಗಮಿಸಿದ ಡಿಜೆ ವಾಹನವನ್ನು ಪೊಲೀಸರು ತಡೆದ ಹಿನ್ನೆಲೆ ನೂರಾರು ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ಸಂಜೆ ಜರುಗಿತು.

ನಗರದ ಗ್ರಾಮಾಂತರ ಪೊಲೀಸ್ ಠಾಣೆ ಬಳಿಯ ಸರ್ವಿಸ್ ರಸ್ತೆ ಬಳಿ ಡಿಜೆ ವಾಹನವನ್ನು ತಡೆದಿದ್ದಕ್ಕೆ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರು ಹಾಗೂ ಮುಖಂಡರಾದ ಪ್ರಭಂಜನ್, ಡಾ.ಸಿದ್ದಾರ್ಥ, ಕೇಶವ್, ಉಮೇಶ್ ಕಾರಜೋಳ ಹಾಗೂ ಮತ್ತಿತರರ ನಡುವೆ ವಾಗ್ವಾದ ನಡೆಯಿತು.

ಸ್ಥಳಕ್ಕೆ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜೊತೆಗೆ ಮಾತುಕತೆ ನಡೆಸಿದ ಪರಿಣಾಮ ಅಂತಿಮವಾಗಿ ಒಂದು ವಾಹನದಲ್ಲಿ ನಾಲ್ಕು ಧ್ವನಿವರ್ಧಕಗಳಂತೆ ಒಟ್ಟು 16 ಬಾಕ್ಸ್‌ಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಶೋಭಾಯಾತ್ರೆಯಲ್ಲಿ ಯಾವುದೇ ತರಹದ ಚಲನಚಿತ್ರ ನಟರ ಭಾವಚಿತ್ರ ಇರುವ ಧ್ವಜಗಳನ್ನು ಶೋಭಯಾತ್ರೆಯಲ್ಲಿ ನಿಷೇಸಲಾಗಿದೆ ಎಂದು ಹಿಂದೂ ಮಹಾ ಗಣಪತಿ ಮಹೋತ್ಸವ ಸಮಿತಿ ತಿಳಿಸಿದೆ.