ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ನಗರಸಭೆಯಿಂದ ಮೇಲ್ದರ್ಜೇಗೇರಿ ಮಹಾನಗರ ಪಾಲಿಕೆಯಾದ ಬಳಿಕ ಯಾವುದೇ ಅಭಿವೃದ್ಧಿ ಮಾಡುವಲ್ಲಿ ಪಾಲಿಕೆ ಸೋತಿದೆ. ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು, ಆಯುಕ್ತರನ್ನು ವರ್ಗಾಯಿಸಬೇಕು, ಅಧ್ಯಕ್ಷರ ರಾಜೀನಾಮೆ ನೀಡುವುದು ಸೇರಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ವಿವಿಧ ಹಂತದಲ್ಲಿ ಹೋರಾಟಗಳನ್ನು ರೂಪಿಸಲಾಗಿದೆ ಎಂದು ನಗರ ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್.ಮಹಾವೀರ ಎಚ್ಚರಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಯಾದ ನಂತರ ಅಭಿವೃದ್ಧಿ ವಿಚಾರದಲ್ಲಿ ಇನ್ನು ಹಿನ್ನಡೆಯಾಗಿದಷ್ಟೇ ಅಲ್ಲದೇ ಭ್ರಷ್ಟಾಚಾರ, ಅವ್ಯವಹಾರ, ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಸಂಪೂರ್ಣ ವಿಫಲಗೊಂಡಿದೆ.
ತೀವ್ರ ವಿರೋಧದ ನಡುವೆಯೂ ಮಾವಿನಕೆರೆ ಸಮೀಪದಲ್ಲಿ ತರಕಾರಿ ವ್ಯಾಪಾರಕ್ಕೆ ಅವಕಾಶ ನೀಡಿದ್ದು, ಇದರಿಂದ ಪಾಲಿಕೆಗೆ ಕೋಟಿ ರು. ತೆರಿಗೆನಷ್ಟ ಉಂಟಾಗಿದೆ. ಈ ಕುರಿತು ಹಲವು ಸಲ ಮನವಿ ಸಲ್ಲಿಸಿ ಪ್ರತಿಭಟನೆಗಳನ್ನು ನಡೆಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ, ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡು ಒಂಬತ್ತು ತಿಂಗಳು ಗತಿಸುತ್ತಿದ್ದರು ಸುಧಾರಣೆ ಮಾಡದ ಆಯುಕ್ತರು ಕನಿಷ್ಠ ಪಕ್ಷ ಜನರ, ಸಂಘಟನೆಗಳ ಆಹವಾಲು ಸ್ವೀಕರಿಸಲು ಸಹ ಸಿದ್ಧವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪಾಲಿಕೆಯ ಭ್ರಷ್ಟಾಚಾರ, ಅಕ್ರಮಗಳು ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದನೆ ಸಿಗದೇ ಇರುವುದನ್ನು ಗಂಭೀರವಾಗಿ ಪರಿಗಣಿಸದ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಈ ಎಲ್ಲ ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಟಗಳನ್ನು ನಡೆಸಲಾಗುತ್ತಿದೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಜಲ್ದಾರ ಅವರು ಮಾವಿನಕೆರೆ ಬಳಿ ಅನಧಿಕೃತವಾಗಿ ತರಕಾರಿ ವ್ಯಾಪಾರದ ಕಿಂಗ್‌ಪಿನ್ ಆಗಿದ್ದು, ರೈತರು, ವ್ಯಾಪಾರಿಗಳಿಂದ ಅಕ್ರಮವಾಗಿ ಹಣವಸೂಲಿ ಮಾಡುತ್ತಿದ್ದಾರೆ ಎಂದು ದೂರಿದ ಅವರು, ಸಾಮಾನ್ಯಸಭೆಯಲ್ಲಿ ಅನಧಿಕೃತ ಮಾರುಕಟ್ಟೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.ಹತ್ತು ದಿನಗಳಲ್ಲಿ ಅನಧಿಕೃತ ಕಾಯಿಪಲ್ಲೆ ಮಾರುಕಟ್ಟೆಯನ್ನು ಸ್ಥಳಾಂತರಿಸಲು ಒತ್ತಾಯಿಸಿ ಬರುವ ನ.1 ರಂದು ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕಲಾಗುತ್ತಿದೆ. ಪಾಲಿಕೆ ಕಾರ್ಯಾಲಯದಲ್ಲಿ ಜನರ ಭೇಟಿಗೆ ಅವಕಾಶ ಮಾಡಿಕೊಡಬೇಕು ಹಾಗೂ ಅಭಿವೃದ್ಧಿಪರವಾಗಿಲ್ಲದ ಆಯುಕ್ತರನ್ನು ವರ್ಗಾವಣೆಗೆ ಆಗ್ರಹಿಸಿ ಹಳೆ ಡಿಸಿ ಕಚೇರಿ ಮುಂದೆ ನ.3 ರಂದು ಧರಣಿಯನ್ನು ನಡೆಸುತ್ತಿದ್ದು ಇದರೊಟ್ಟಿಗೆ ಮಹಾಪೌರರು ರಾಜೀನಾಮೆ ಕೊಡಬೇಕು ಎಂದು ಹೋರಾಟದ ಮುಖಾಂತರ ಆಗ್ರಹಿಸಲಾಗುವುದು. ಇದರೊಟ್ಟಿಗೆ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿರುವ ರವೀಂದ್ರ ಜಲ್ದಾರ ವಿರುದ್ಧವು ಕಾನೂನು ಕ್ರಮ ಜರುಗಿಸಬೇಕು ಎಂದು ಡಿಸಿ ಹಾಗೂ ಎಸ್ಪಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಪ್ರಭು ನಾಯಕ, ಪದಾಧಿಕಾರಿಗಳಾದ ಕೆ.ವಿ.ಖಾಜಪ್ಪ, ಬಸವರಾಜ, ಉದಯ ಕುಮಾರ, ರಿಜ್ವಾನ, ತಿಮ್ಮಾರೆಡ್ಡಿ ಇತರರು ಇದ್ದರು.;Resize=(128,128))
;Resize=(128,128))
;Resize=(128,128))