ಭಾರತದಿಂದ ತುಂಡಾದ ಬಾಂಗ್ಲಾದೇಶದಲ್ಲಿ ಲಕ್ಷಾಂತರ ಶಾಂತಿ ಪ್ರಿಯ ಹಿಂದೂಗಳು ನೂರಾರು ವರ್ಷಗಳಿಂದ ವಾಸಿಸುತ್ತಿದ್ದಾರೆ. ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಇಸ್ಲಾಮಿ ಜಿಹಾದಿಗಳು ಅಮಾಯಾಕ ಹಿಂದೂಗಳ ಮೇಲೆ ಕೊಲೆ, ಅತ್ಯಾಚಾರ, ಸೂಲಿಗೆ, ಇತ್ಯಾದಿ ದೌರ್ಜನ್ಯ ಕೃತ್ಯವನ್ನು ಎಸುಗುತ್ತ ಬಂದಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಹತ್ಯೆ ಮತ್ತು ದೌರ್ಜನ್ಯ ಖಂಡಿಸಿ ತಾಲೂಕು ಹಿಂದು ಹಿತರಕ್ಷಣ ಸಮಿತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಅಂಬೇಡ್ಕರ್ ವೃತ್ತದಿಂದ ತಾಲೂಕು ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸಮಿತಿ ಸದಸ್ಯರು ನಂತರ ತಾಲೂಕು ಆಡಳಿತ ಮೂಲಕ ರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.

ಭಾರತದಿಂದ ತುಂಡಾದ ಬಾಂಗ್ಲಾದೇಶದಲ್ಲಿ ಲಕ್ಷಾಂತರ ಶಾಂತಿ ಪ್ರಿಯ ಹಿಂದೂಗಳು ನೂರಾರು ವರ್ಷಗಳಿಂದ ವಾಸಿಸುತ್ತಿದ್ದಾರೆ. ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಇಸ್ಲಾಮಿ ಜಿಹಾದಿಗಳು ಅಮಾಯಾಕ ಹಿಂದೂಗಳ ಮೇಲೆ ಕೊಲೆ, ಅತ್ಯಾಚಾರ, ಸೂಲಿಗೆ, ಇತ್ಯಾದಿ ದೌರ್ಜನ್ಯ ಕೃತ್ಯವನ್ನು ಎಸುಗುತ್ತ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿ.19ರಂದು ಅಮಾಯಕ ಹಿಂದೂ ದೀಪು ಚಂದ್ರ ದಾಸ್ ಎಂಬ ವ್ಯಕ್ತಿಯನ್ನು ಅಮಾನುಷವಾಗಿ ಹಿಂಸಿಸಿ ಜೀವ ಸಹಿತ ಬೆಂಕಿ ಹಚ್ಚಿ ಕೊಲೆ ಮಾಡಿರುವ ಹೇಯ ಭಯೋತ್ಪದಕರ ಕೃತ್ಯವನ್ನು ಖಂಡಿಸುತ್ತೇವೆ. ಜೊತೆಗೆ ಬಾಂಗ್ಲಾ ದೇಶದ ಹಿಂದೂಗಳ ಮೇಲೆ ಪದೇ ಪದೇ ನಡೆಯುತ್ತಿರುವ ಹಿಂದೂಗಳ ಹತ್ಯೆ ಮತ್ತು ದೌರ್ಜನ್ಯವನ್ನು ನಡೆಸುತ್ತಿರುವ ಇಸ್ಲಾಮಿ ಬಾಂಗ್ಲಾ ದೇಶದಲ್ಲಿರುವ ಭಯೋತ್ಪದನೆ ನಿರ್ಮಾಲನೆ ಮಾಡಲು ಕೇಂದ್ರ ಸರ್ಕಾರ ಸೂಕ್ತ ಕ್ರಮ ತೆಗೆದುಕೊಂಡು ಬಾಂಗ್ಲಾ ದೇಶದ ಹಿಂದೂಗಳ ರಕ್ಷಣೆಗೆ ನಿಲ್ಲಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಮುಖ್ಯಸ್ಥ ಚಂದನ್, ವಕೀಲರಾದ ಬಾಲ್‌ರಾಜ್, ಜಯಕುಮಾರ್, ರವೀಶ್, ಬಿಎಂಎಸ್ ವಾಸು, ಚಂದ್ರು, ರವಿ, ರಾಜು, ಶಿವು, ಶಂಕರ್, ಸನತ್, ಪಶ್ಚಿಮವಾಹಿನಿ ಸರಸ್ವತಿ ಸೇರಿದಂತೆ ಸಮಿತಿ ಕಾರ್ಯಕರ್ತರು ಇದ್ದರು.