ಸಾರಾಂಶ
ಜಮಖಂಡಿ ನಗರದ ವಿಜಯಪುರ ಬೈಪಾಸ್ ರಸ್ತೆ (ಕೆನಾಲ್ ರಸ್ತೆ) ಪಕ್ಕಲ್ಲಿದ್ದ ಗಾದೆ ತಯಾರಿಸುವ ಕಾರ್ಖಾನೆಯಲ್ಲಿ ಮಂಗಳವಾರ ಅಗ್ನಿ ಅವಘಡ ಸಂಭವಿಸಿದ್ದು, ಗಾದೆಗಳ ತಯಾರಿಕೆಗೆ ಬಳಸುವ ಸ್ಪಂಜ್, ಹತ್ತಿ, ಯಂತ್ರಗಳು, ಗಾದೆಗಳು ಬೆಂಕಿಗೆ ಆಹುತಿಯಾಗಿವೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದ ವಿಜಯಪುರ ಬೈಪಾಸ್ ರಸ್ತೆ (ಕೆನಾಲ್ ರಸ್ತೆ) ಪಕ್ಕಲ್ಲಿದ್ದ ಗಾದೆ ತಯಾರಿಸುವ ಕಾರ್ಖಾನೆಯಲ್ಲಿ ಮಂಗಳವಾರ ಅಗ್ನಿ ಅವಘಡ ಸಂಭವಿಸಿದ್ದು, ಗಾದೆಗಳ ತಯಾರಿಕೆಗೆ ಬಳಸುವ ಸ್ಪಂಜ್, ಹತ್ತಿ, ಯಂತ್ರಗಳು, ಗಾದೆಗಳು ಬೆಂಕಿಗೆ ಆಹುತಿಯಾಗಿವೆ.ನಜೀರ್ ಹಾಗೂ ಅಯೂಬ್ ವಾಲಿಕಾರ ಕಂಗನೊಳ್ಳಿ ಎಂಬುವರಿಗೆ ಸೇರಿದ ರಿಯಲ್‌ಫ್ರೋಮ್ ಆ್ಯಂಡ್ ಮೆಟ್ರಿಸ್ ಹೆಸರಿನ ಗಾದೆ ತಯಾರಿಕೆ ಕಾರ್ಖಾನೆಯಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ವಾಹನಗಳ ಸಹಾಯದಿಂದ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ನಡೆಯದಂತೆ ತಡೆಯಲಾಗಿದೆ. ಪಕ್ಕದಲ್ಲಿದ್ದ ಕಬ್ಬಿನ ಗದ್ದೆ ಹಾಗೂ ಗುಜರಿಗೆ ಸಂಗ್ರಹಿಸಿದ್ದ ಗೋದಾಮು ಅದೃಷ್ಟವಶಾತ್ ಸುರಕ್ಷಿತವಾಗಿವೆ. ಘಟನಾ ಸ್ಥಳಕ್ಕೆ ಮಾಜಿ ಶಾಸಕ ಆನಂದ ನ್ಯಾಮಗೌಡ, ನಗರಸಭೆ ಅಧ್ಯಕ್ಷ ಪರಮಾನಂದ ಗೌರೋಜಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅನ್ವರ್ ಮೋಮಿನ್ ಸೇರಿದಂತೆ ಹಲವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.