ಸಾರಾಂಶ
ನರಸಿಂಹರಾಜಪುರ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಲು ಯುಎಚ್.ಐಡಿ ಸಂಖ್ಯೆ ಜೊತೆಗೆ ಮನೆಯವರು ಹೆಸರು ಮತ್ತು ಮೊಬೈಲ್ ಸಂಖ್ಯೆ ಇರುವ ಮನೆ ಪಟ್ಟಿ ಒದಗಿಸಬೇಕು ಎಂದು ಗಣತಿದಾರರು ಹಾಗೂ ಮೇಲ್ವಿಚಾರಕರು ತಹಸೀಲ್ದಾರ್ ಗೆ ಮನವಿ ಪತ್ರ ಅರ್ಪಿಸಿದರು.
- ಗಣತಿದಾರರಿಂದ ತಹಸೀಲ್ದಾರ್ ಗೆ ಮನವಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಲು ಯುಎಚ್.ಐಡಿ ಸಂಖ್ಯೆ ಜೊತೆಗೆ ಮನೆಯವರು ಹೆಸರು ಮತ್ತು ಮೊಬೈಲ್ ಸಂಖ್ಯೆ ಇರುವ ಮನೆ ಪಟ್ಟಿ ಒದಗಿಸಬೇಕು ಎಂದು ಗಣತಿದಾರರು ಹಾಗೂ ಮೇಲ್ವಿಚಾರಕರು ತಹಸೀಲ್ದಾರ್ ಗೆ ಮನವಿ ಪತ್ರ ಅರ್ಪಿಸಿದರು.
ಮನವಿಯಲ್ಲಿ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಲು ಕೆಇಬಿ ಯ ಆರ್.ಆರ್ ನಂಬರ್ ಮೇಲೆ ಯು.ಎಚ್.ಐ.ಡಿ ನಂಬರ್ ಮೇಲೆ ಗಣತಿದಾರರನ್ನು ನೇಮಕ ಮಾಡಲಾಗಿದೆ. ಆದರೆ, ಮನೆ ಸದಸ್ಯರ ಹೆಸರು, ವಿಳಾಸ ಇಲ್ಲದೆ ಕೇವಲ ಯು.ಎಚ್.ಐ.ಡಿ ಸಂಖ್ಯೆ ಆಧಾರದಲ್ಲಿ ಮನೆ ಹುಡುಕುವುದು ಕಷ್ಟವಾಗಿದೆ. ಆದ್ದರಿಂದ ಯು.ಎಚ್.ಐ.ಡಿ. ಸಂಖ್ಯೆ ಜೊತೆಗೆ ಮನೆಯವರ ಹೆಸರು, ಮೊಬೈಲ್ ಸಂಖ್ಯೆ ಇರುವ ಮನೆ ಪಟ್ಟಿ ನೀಡಬೇಕು. ಮನೆ ಪಟ್ಟಿ ಇಲ್ಲದೆ ಇರುವುದರಿಂದ ಮನೆ ಹುಡುಕು ವುದರಲ್ಲೇ ಶಿಕ್ಷಕರ ಸಮಯ ಹಾಳಾಗುತ್ತಿದೆ.ಗ್ರಾಮೀಣ ಭಾಗದಲ್ಲಿ ಇಂಟರ್ ನೆಟ್ ಇಲ್ಲದೆ ಗಣತಿ ಕಾರ್ಯ ನಡೆಸಲು ತೊಂದರೆ ಯಾಗುತ್ತಿದೆ. ಇದರ ಜೊತೆಗೆ ಮೊಬೈಲ್ ಆ್ಯಪ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ದಿನಕ್ಕೆ 2 ಮನೆ ಪೂರ್ಣಗೊಳಿಸುವುದು ಕಷ್ಟವಾಗುತ್ತಿದೆ. ನೆಟ್ ವರ್ಕ್ ಇರುವ ಜಾಗಕ್ಕೆ ಜನರನ್ನು ಕರೆ ತರಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.ಮನವಿಯನ್ನು ಶಿರಸ್ತಾರ್ ವೇಣುಗೋಪಾಲ್ ಅವರಿಗೆ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಂಜುಂಡಪ್ಪ, ಬಡ್ತಿ ಮುಖ್ಯ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಅಶೋಕ್, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಸುಭಾಷ್, ನಾಗೇಶ್, ಪ್ರಕಾಶ್, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಬೋಗೇಶಪ್ಪ, ಮಂಗಳ ಗೌರಮ್ಮ, ಮಂಜಪ್ಪ, ಆರ್.ನಾಗರಾಜ್, ಇಸಿಓ ರಂಗಪ್ಪ, ಹಿಂದುಳಿದ ಕಲ್ಯಾಣ ಇಲಾಖೆಯ ಅಧಿಕಾರಿ ಧರ್ಮರಾಜ್, ಗಣತಿದಾರರು, ಗಣತಿ ಮೇಲ್ವೀಚಾರಕರು ಇದ್ದರು.