ವಿಶೇಷಚೇತನ ಪ್ರತಿಭೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ

| Published : Sep 22 2024, 01:55 AM IST

ವಿಶೇಷಚೇತನ ಪ್ರತಿಭೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಶೇಷಚೇತನರು ತಮ್ಮ ಸ್ವಸಾಮರ್ಥ್ಯ ಮೂಲಕ ಎಲ್ಲಾ ಕ್ಷೇತ್ರದಲ್ಲಿ ಮುಂದೆ ಬಂದಿದ್ದು, ಅವರನ್ನು ನೋಡುವ ದೃಷ್ಟಿ ಬದಲಾಗಬೇಕು

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ವಿಶೇಷಚೇತನರು ಅಂಗವಿಕಲತೆ ಬಗ್ಗೆ ಅಗೌರವ ತಾಳದೇ, ಅನುಕಂಪ ತೋರಿಸದೇ ಸ್ವಪ್ರತಿಭೆ ಹೊಂದಿದವರಿಗೆ ಮೂಲಭೂತ ಸೌಲಭ್ಯ ತೋರುವ ಕೆಲಸ ಮಾಡಿ ಅವರು ನಮ್ಮಂತೆ ಮನುಷ್ಯರೆಂದು ತೋರಿಸಬೇಕು ಎಂದು ಹಿರಿಯ ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಸಲಹೆ ನೀಡಿದರು.

ವಿಶೇಷಚೇತನರ ಸಮಾವೇಶದ ಪ್ರಶಸ್ತಿ ಪ್ರದಾನ ಸನ್ಮಾನ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ, ವಿಶೇಷಚೇತನರು ತಮ್ಮ ಸ್ವಸಾಮರ್ಥ್ಯ ಮೂಲಕ ಎಲ್ಲಾ ಕ್ಷೇತ್ರದಲ್ಲಿ ಮುಂದೆ ಬಂದಿದ್ದು, ಅವರನ್ನು ನೋಡುವ ದೃಷ್ಟಿ ಬದಲಾಗಬೇಕು ಎಂದರು. ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿ ಮಹಾದೇವ ಮುಂಗಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂತಹ ಸಮಾವೇಶ ಮಾಡುವುದು ಒಳ್ಳೆಯ ಕಾರ್ಯವೆಂದರು. ಪತ್ರಕರ್ತ ಬಸವರಾಜ ಕೌಟೆ ಮಾತನಾಡಿ, ನಾವು ವಿಶೇಷಚೇತನರು ಎಂದು ಹಾಗೇ ಕೂಡಬಾರದು ನಮ್ಮ ಸಾಮರ್ಥ್ಯ ತೋರಿಸಬೇಕೆಂದರು.ನೇತೃತ್ವ ವಹಿಸಿದ ಮಹಾಲಿಂಗದೇವರು ವಿಶೇಷಚೇತನರನ್ನು ಕೀಳಾಗಿ ಕಾಣಬಾರದು. ಅವರಲ್ಲಿ ಎಲ್ಲಾ ಅರ್ಹತೆ ಇದೆ, ಓದಿ ಶಿಕ್ಷಣ ಪಡೆದು ಮುಂದೆ ಬರಲು ಕರೆ ನೀಡಿದರು. ಆಹಾರ ಶಿರಸ್ತೇದಾರ ನಿಂಗಯ್ಯ ಹಿರೇಮಠ ಇದ್ದರು, ಅಂಗವಿಕಲರ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಪ್ಪ ಸಂಗಾವಿ ಅಧ್ಯಕ್ಷತೆ ವಹಿಸಿದ್ದರು. ಪೂಜ್ಯ ಪಂಚಾಕ್ಷರಿ ಸ್ವಾಮೀಜಿ ಆಶೀರ್ವಚನ ನೀಡಿ, ವಿಕಲಚೇತನ ಎಂಬ ಅಸಹಕಾರ ಬೇಡ ಸಮಾಜದಲ್ಲಿ ಅನೇಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು ಕಂಡರೆ ಸ್ಫೂರ್ತಿ, ಇಂತಹ ಕೆಲಸ ನಿರಂತರ ಮಾಡಬೇಕೆಂದು ಕರೆಕೊಟ್ಟರು.

ಶಿವಯೋಗಿ ರತ್ನ ಪ್ರಶಸ್ತಿ ಪುರಸ್ಕೃತರು:

ಸಂತೋಷ ಧಾಯಗೊಂಡ (ಶಿಕ್ಷಣ), ಲಾಲಮಹಮದ್ ಕಲಮೂಡ (ಆಡಳಿತ), ಶಿವಕುಮಾರ ಪಾಟೀಲ (ಸಂಯೋಜಕರು), ಶಿವಕುಮಾರ ಬಿರಾದಾರ (ಅಧಿಕಾರಿ), ಮನೋಜಕುಮಾರ ಕಾಂಬಳೆ (ಪರಿಸರ), ಸುನೀಲ ಮಲಗೆ (ಸಮಾಜ) ಕ್ಷೇತ್ರದ ಸಾಧಕರಿಗೆ ಶಿವಯೋಗಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುರೇಶ ಕಾನೇಕರ ಸ್ವಾಗತಿಸಿದರು. ನಿತ್ಯಾನಂದ ಮಂಠಾಳಕರ ನಿರೂಪಿಸಿದರೆ ಸೂರ್ಯಕಾಂತ ಭೋಸ್ಲೆ ವಂದಿಸಿದರು.