ಸಾರಾಂಶ
ಶೇಂಗಾ ಬೆಳೆ ಹಾನಿಗೆ ಪರಿಹಾರ ನೀಡಿ
ಕನ್ನಡಪ್ರಭ ವಾರ್ತೆ ಪಾವಗಡ
ಕಾಡು ಪ್ರಾಣಿಗಳ ದಾಳಿಯಿಂದ ಶೇಂಗಾ ಹಾನಿಯಾಗಿದ್ದು, ರೈತನಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ದೊಡ್ಡಹಟ್ಟಿ ಪೂಜಾರಪ್ಪ ಒತ್ತಾಯಿಸಿದರು.ತಾಲೂಕಿನ ಕಸಬಾ ವ್ಯಾಪ್ತಿಯ ಗುಂಡ್ಲಹಳ್ಳಿ ಗ್ರಾಮದ ಸರ್ವೇ ನಂ.105ರಲ್ಲಿ 5 ಎಕರೆ ಜಮೀನಿದ್ದು, ವ್ಯವಸಾಯದ ಸಲುವಾಗಿ ಎಕರೆಗೆ 40 ಸಾವಿರ ಖರ್ಚು ಮಾಡಿ ಮೂರು ಕ್ವಿಂಟಾಲ್ ಶೇಂಗಾ ಬೀಜ ಬಿತ್ತನೆ ಮಾಡಲಾಗಿತ್ತು. ಬೆಳೆ ಫಸಲಿಗೆ ಬರುವ ಹಂತದಲ್ಲಿತ್ತು. ಮೂರು ಎಕರೆ ಜಮೀನಿನಲ್ಲಿ ಆ.10ರಂದು ರಾತ್ರಿ ನಾಲ್ಕೈದು ಕಾಡುಹಂದಿಗಳ ಗುಂಪು ಜಮೀನಿಗೆ ಲಗ್ಗೆಯಿಟ್ಟು ನೆಲೆಗಡಲೆ ಕಿತ್ತೆಸೆದು ಹಾನಿ ಮಾಡಿವೆ. ಇದಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದರು.ರೈತ ಮುಖಂಡರಾದ ಸದಾಶಿವಪ್ಪ, ಈರಣ್ಣ, ಹನುಮಂತಪ್ಪ ಡಂಡೋಪಾಳ್ಯದ ರಾಮಾಂಜಿನಪ್ಪ, ಕರಿಯಪ್ಪ ರಾಮಾಂಜಿನೇಯ, ನರಸಿಂಹಪ್ಪ, ಜಿ.ಹನುಮಂತರಾಯ, ನಾಗರಾಜಪ್ಪ ಇದ್ದರು.