ಪ್ರವಾಹದಿಂದ ಬೆಳೆಹಾನಿ ಮಾಡಿಕೊಂಡ ರೈತರಿಗೆ ಪರಿಹಾರ ನೀಡಿ-ಡಾ. ಸಂಗಮೇಶ ಕೊಳ್ಳಿ

| Published : Jul 02 2025, 12:20 AM IST

ಪ್ರವಾಹದಿಂದ ಬೆಳೆಹಾನಿ ಮಾಡಿಕೊಂಡ ರೈತರಿಗೆ ಪರಿಹಾರ ನೀಡಿ-ಡಾ. ಸಂಗಮೇಶ ಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಮೃಗಶಿರಾ ಮಳೆ ವಾಡಿಕೆಗಿಂತ ಹೆಚ್ಚು ಸುರಿದು ಬೆಣ್ಣೆಹಳ್ಳಕ್ಕೆ ಪ್ರವಾಹ ಬಂದು ನೂರಾರು ರೈತರ ಬೆಳೆ ಹಾನಿ ಮಾಡಿದೆ. ಈ ರೈತರಿಗೆ ಸರ್ಕಾರ ಬೇಗ ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡಬೇಕೆಂದು ರಾಜ್ಯ ಕಾಂಗ್ರೆಸ್ ಮಾಧ್ಯಮ ವಕ್ತಾರ ಡಾ. ಸಂಗಮೇಶ ಕೊಳ್ಳಿಯವರ ಹೇಳಿದರು.

ನರಗುಂದ: ಮೃಗಶಿರಾ ಮಳೆ ವಾಡಿಕೆಗಿಂತ ಹೆಚ್ಚು ಸುರಿದು ಬೆಣ್ಣೆಹಳ್ಳಕ್ಕೆ ಪ್ರವಾಹ ಬಂದು ನೂರಾರು ರೈತರ ಬೆಳೆ ಹಾನಿ ಮಾಡಿದೆ. ಈ ರೈತರಿಗೆ ಸರ್ಕಾರ ಬೇಗ ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡಬೇಕೆಂದು ರಾಜ್ಯ ಕಾಂಗ್ರೆಸ್ ಮಾಧ್ಯಮ ವಕ್ತಾರ ಡಾ. ಸಂಗಮೇಶ ಕೊಳ್ಳಿಯವರ ಹೇಳಿದರು.

ಅವರು ಮಂಗಳವಾರ ಪಟ್ಟಣದ ಮಲಪ್ರಭಾ ಆಯಿಲ್ ಮಿಲ್‌ ತಮ್ಮ ಕಾರ್ಯಾಲಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ತಾಲೂಕಿನ ರೈತರು ಮುಂಗಾರು ಹಂಗಾಮಿನಲ್ಲಿ ಹೆಸರು, ಗೋವಿನ ಜೋಳ, ಬಿ.ಟಿ. ಹತ್ತಿ, ತೊಗರಿ, ಈರಳ್ಳಿ, ಮೆಣಸಿನಕಾಯಿ ಸೇರಿದಂತೆ ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಜೂ.11ರಂದು ಬೆಣ್ಣೆಹಳ್ಳದ ಮೇಲ್ಭಾಗ ಮತ್ತು ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದು ಬೆಣ್ಣೆ ಹಳ್ಳಕ್ಕೆ ಅಬ್ಬರದ ಪ್ರವಾಹ ಬಂದು ಈ ಹಳ್ಳಕ್ಕೆ ಹೊಂದಿಕೊಂಡಿರುವ ತಾಲೂಕಿನ ಮೂಗನೂರ, ಬನಹಟ್ಟಿ, ಸುರಕೋಡ, ಹದಲಿ, ಖಾನಾಪುರ, ಗಂಗಾಪುರ, ರಡ್ಡೇರ ನಾಗನೂರ, ರೋಣ ತಾಲೂಕಿನ ಮಾಳವಾಡ, ಬೋಪಳಪೂರ ಸೇರಿದಂತೆ ಮುಂತಾದ ಗ್ರಾಮಗಳ ರೈತರ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಮಾಡಿದೆ. ಈ ಪ್ರವಾಹ ಅಬ್ಬರಕ್ಕೆ ಬೆಳೆ ಹಾನಿ ಮಾಡಿಕೊಂಡ ರೈತರಿಗೆ ಸರ್ಕಾರ ಬೇಗ ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿಕೊಂಡರು.

ಗೊಬ್ಬರ ಪೂರೈಕೆ ಮಾಡಿ: ತಾಲೂಕಿನ ರೈತರು ಸದ್ಯ ಮುಂಗಾರು ಹಂಗಾಮಿನ ಬೆಳೆಗಳನ್ನು ಬಿತ್ತನೆ ಮಾಡುತ್ತಿದ್ದಾರೆ. ಆದ್ದರಿಂದ ಕೃಷಿ ಇಲಾಖೆ ಅಧಿಕಾರಿಗಳು ಡಿಎಪಿ ಗೊಬ್ಬರ ಪೂರೈಕೆ ಮಾಡಲು ಮುಂದಾಗಬೇಕು. ಈ ಡಿಎಪಿ ಗೊಬ್ಬರ ಜೊತೆ ಜಿಂಕ ಕಡ್ಡಾಯ ಮಾಡಬಾರದು ಎಂದು ಹೇಳಿದರು.

ಕಳೆದ 2 ವರ್ಷದಿಂದ ನರಗುಂದ ವಿಧಾನಸಭೆ ಮತಕ್ಷೇತ್ರದ ಶಾಸಕ ಸಿ.ಸಿ. ಪಾಟೀಲರು ಅಭಿವೃದ್ಧಿ ಕಡೆ ಗಮನ ಹರಿಸುತ್ತಿಲ್ಲವೆಂದು ಆರೋಪಿಸಿದರು.

ತಾಲೂಕಿನ ವಿವಿಧ ಹಳ್ಳಗಳಿಗೆ ಪ್ರವಾಹ ಬಂದು ಸಣ್ಣ ಹಳ್ಳಗಳಿಂದ ಬೆಳೆ ಹಾನಿ ಮಾಡಿಕೊಂಡ ರೈತರ ಜಮೀನುಗಳನ್ನು ಕೂಡ ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸರ್ವೇ ಮಾಡಿ ಈ ಮಾಹಿತಿ ಕೂಡ ಸರ್ಕಾರಕ್ಕೆ ಕಳಿಸಿ ಈ ರೈತರಿಗೆ ಕೂಡ ಪರಿಹಾರ ಕೊಡಿಸಲು ಮುಂದಾಗಬೇಕೆಂದು ಆಗ್ರಹಿಸಿದರು.

ಕೇಂದ್ರ ಕಳಸಾ ಬಂಡೂರಿ ನಾಲಾ ಯೋಜನೆ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿ, ಸರ್ಕಾರ ಮಲಪ್ರಭಾ ಕಾಲುವೆ ನೀರಿನ ಕರ ಕಟ್ಟದ್ದರಿಂದ ತಾಲೂಕಿನ ನೂರಾರು ರೈತರ ಜಮೀನಗಳ ಕಬ್ಬಾ ಕಾಲಂನಲ್ಲಿ ಸರ್ಕಾರವೆಂದು ಎಂದು ನಮೂದಿಸಿದೆ, ಇದರಿಂದ ರೈತರಿಗೆ ಹಲವಾರು ವರ್ಷಗಳಿಂದ ಸರ್ಕಾರ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆಗಾಗಿ ಸರ್ಕಾರ ರೈತರ ಕಬ್ಜಾ ಕಾಲಂನಲ್ಲಿರುವ ಸರ್ಕಾರವನ್ನು ತೆಗೆದು ಹಾಕಬೇಕೆಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಚನ್ನಪ್ಪ ಕೀಲಿಕೈ, ಹೊಸಗೌಡ್ರ, ಪರಶಪ್ಪ ಐನಾಪೂರ, ಪ್ರವೀಣ ಮ್ಯಾಗೇರಿ, ಗುರಶಾಂತಪ್ಪ ನರಸಾಪೂರ, ಶಂಭು ಶಾಲಜೋಗಿ, ಶಿವರಡ್ಡಿ ಮೇಟಿ, ರಮೇಶ ಮೊರಬದ ಸೇರಿದಂತೆ ಮುಂತಾದವರು ಇದ್ದರು.