ಸಾರಾಂಶ
ದಾವಣಗೆರೆ ತಾಲೂಕಿನ ಕಾರಿಗನೂರಿನ ಅಡ್ಡ ರಸ್ತೆಯ ಆಂಜನೇಯ ನಗರದ 200ಕ್ಕೂ ಹೆಚ್ಚು ಜನರಿಗೆ ವಿತರಣೆಯಾದ ಹಕ್ಕುಪತ್ರಗಳ ಖಾಲಿ ನಿವೇಶನಗಳಿಗೆ ಇ-ಸ್ವತ್ತು ಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ಬುಧವಾರ ಪ್ರತಿಭಟಿಸಲಾಯಿತು.
- ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ನಿವಾಸಿಗಳ ಪ್ರತಿಭಟನೆ
- - - - ಕೈದಾಳೆ, ಗಿರಿಯಾಪುರ, ಲೋಕಿಕೆರೆ ಭಾಗಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸೌಕರ್ಯ ಕಲ್ಪಿಸಲು ಒತ್ತಾಯ - ಹೊನ್ನಮರಡಿ- ಗಿರಿಯಾಪುರ ರಸ್ತೆ ಸಂಪೂರ್ಣ ಹಾಳಾಗಿ ರೈತರು ಹೊಲ-ಗದ್ದೆಗಳಿಗೆ ತೆರಳಲು ಕಷ್ಟವಾಗಿದೆ- - - ಕನ್ನಡಪ್ರಭ ವಾರ್ತೆ ದಾವಣಗೆರೆ
ತಾಲೂಕಿನ ಕಾರಿಗನೂರಿನ ಅಡ್ಡ ರಸ್ತೆಯ ಆಂಜನೇಯ ನಗರದ 200ಕ್ಕೂ ಹೆಚ್ಚು ಜನರಿಗೆ ವಿತರಣೆಯಾದ ಹಕ್ಕುಪತ್ರಗಳ ಖಾಲಿ ನಿವೇಶನಗಳಿಗೆ ಇ-ಸ್ವತ್ತು ಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ಬುಧವಾರ ಪ್ರತಿಭಟಿಸಲಾಯಿತು.ನಗರದ ಶ್ರೀ ಜಯದೇವ ವೃತ್ತ ಬಳಿಯಿಂದ ಆಂಜನೇಯ ನಗರದ ನಿವಾಸಿಗಳು, ರೈತರು ಘೋಷಣೆ ಕೂಗುತ್ತ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದರು. ಬಳಿಕ ತಹಸೀಲ್ದಾರ್ ಡಾ.ಅಶ್ವತ್ಥ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಿದರು.
ನೇತೃತ್ವ ವಹಿಸಿದ್ದ ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿ, ಹೂವಿನಮಡು ಗ್ರಾಮದಲ್ಲಿ ಇನ್ನೂ ನೂರಾರು ಜನರು ವಸತಿರಹಿತ ರೈತರಿದ್ದಾರೆ. ಅಂಥವರಿಗೆ ನಿವೇಶನಗಳನ್ನು ರಚಿಸಿ, ವಿತರಣೆ ಮಾಡಬೇಕು. ಹೊನ್ನಮರಡಿ- ಗಿರಿಯಾಪುರ ರಸ್ತೆ ಸಂಪೂರ್ಣ ಹಾಳಾಗಿದೆ. ಶೀಘ್ರವಾಗಿ ಇದನ್ನೂ ದುರಸ್ತಿಪಡಿಸಿ ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸಬೇಕು. ಈ ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ರೈತರು ಹೊಲ-ಗದ್ದೆಗಳಿಗೆ ಹೋಗಿ ಬರುವುದು ಕಷ್ಟವಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಲಿ ಎಂದು ಒತ್ತಾಯಿಸಿದರು.ದಾವಣಗೆರೆಯಿಂದ ಕೈದಾಳೆ, ಗಿರಿಯಾಪುರ, ಲೋಕಿಕೆರೆ ಮಾರ್ಗವಾಗಿ ನೂತನ ಕೆಎಸ್ಆರ್‌ಟಿಸಿ ಬಸ್ ಸಂಪರ್ಕ ಕಲ್ಪಿಸಬೇಕು. ಇದರಿಂದ ಈ ಭಾಗದ ವಿದ್ಯಾರ್ಥಿಗಳು, ಹಿರಿಯ ನಾಗರೀಕರು, ವಿಕಲಚೇತನರು, ಗರ್ಭಿಣಿ, ಬಾಣಂತಿಯರು, ರೈತರು, ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ ಎಂದು ಎಚ್ಚರಿಸಿದರು.
ರೈತ ಸಂಘ- ಹಸಿರು ಸೇನೆಯ ಹುಚ್ಚವನಹಳ್ಳಿ ಪ್ರಕಾಶ, ಪಾಮೇನಹಳ್ಳಿ ಗೌಡರ ಶೇಖರಪ್ಪ, ಕುರ್ಕಿ ಹನುಮಂತ, ಶಿವಪುರದ ಕೃಷ್ಣಮೂರ್ತಿ, ರೈತ ಸಂಘದ ತಾಲೂಕು ಅಧ್ಯಕ್ಷ ಹೂವಿನಮಡು ನಾಗರಾಜ, ಹಸಿರು ಸೇನೆ ಅಧ್ಯಕ್ಷ ಎಚ್.ವಿ.ಶಿವಕುಮಾರ, ಪ್ರಧಾನ ಕಾರ್ಯದರ್ಶಿ ಹುಚ್ಚವಹಳ್ಳಿ ಪ್ರಕಾಶ, ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಗುಮ್ಮನೂರು ರುದ್ರೇಶ ಇತರರು ಇದ್ದರು.- - -
-21ಕೆಡಿವಿಜಿ8, 9:ದಾವಣಗೆರೆಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.