ಸಾರಾಂಶ
ರೋಣ ತಾಲೂಕಿನಲ್ಲಿಯೇ ಅತೀ ದೊಡ್ಡ ಗ್ರಾಮ ಹೊಳೆಆಲೂರ ಆಗಿದ್ದು, ವಾಣಿಜ್ಯೋದ್ಯಮಕ್ಕೆ ಹೆಸರುವಾಸಿಯಾಗಿದೆ. ನಿತ್ಯವೂ ನೂರಾರು ಜನತೆ, ರೈತರು, ವ್ಯಾಪಾರಸ್ಥರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಹೊಳೆಆಲೂರ ಗ್ರಾಮಕ್ಕೆ ಬಸ್ ಮೂಲಕ ಬಂದು ಹೋಗುತ್ತಾರೆ
ರೋಣ: ತಾಲೂಕಿನ ಹೊಳೆಆಲೂರ ಗ್ರಾಮದ ಬಸ್ ನಿಲ್ದಾಣವು ಮೂಲಕ ಸೌಕರ್ಯದಿಂದ ವಂಚಿತವಾಗಿದ್ದು, ಇದರಿಂದ ಪ್ರಯಾಣಿಕರಿಗ ತೀವ್ರ ತೊಂದರೆಯಾಗುತ್ತಿದ್ದು. ಕೂಡಲೇ ಸಾರಿಗೆ ಅಧಿಕಾರಿಗಳು ಮೂಲ ಸೌಕರ್ಯ ಕಲ್ಪಿಸಲು ಮುಂದಾಗಬೇಕು ಎಂದು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.
ಈ ವೇಳೆ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರೋಣ ತಾಲೂಕಾಧ್ಯಕ್ಷ ಎಂ.ಎಚ್.ನದಾಫ ಮಾತನಾಡಿ, ರೋಣ ತಾಲೂಕಿನಲ್ಲಿಯೇ ಅತೀ ದೊಡ್ಡ ಗ್ರಾಮ ಹೊಳೆಆಲೂರ ಆಗಿದ್ದು, ವಾಣಿಜ್ಯೋದ್ಯಮಕ್ಕೆ ಹೆಸರುವಾಸಿಯಾಗಿದೆ. ನಿತ್ಯವೂ ನೂರಾರು ಜನತೆ, ರೈತರು, ವ್ಯಾಪಾರಸ್ಥರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಹೊಳೆಆಲೂರ ಗ್ರಾಮಕ್ಕೆ ಬಸ್ ಮೂಲಕ ಬಂದು ಹೋಗುತ್ತಾರೆ.ಆದರೆ ಹೊಳೆ-ಆಲೂರಿನ ಬಸ್ ನಿಲ್ದಾಣ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ, ಕುಡಿವ ನೀರಿನ ವ್ಯವಸ್ಥೆಯಿಲ್ಲ, ನಾಮಫಲಕವಿಲ್ಲ, ವೇಳಾಪಟ್ಟಿ ಅಳವಡಿಸಿಲ್ಲ. ರಾತ್ರಿ ವೇಳೆ ವಿದ್ಯುತ್ ಬೆಳಕಿನ ವ್ಯವಸ್ಥೆಯಿಲ್ಲ. ರಾತ್ರಿ ಬಸ್ ನಿಲ್ದಾಣದಲ್ಲಿ ಕುಡುಕರ ಹಾವಳಿ, ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಈ ಕುರಿತು ಸಾಕಷ್ಟು ಬಾರಿ ಸಾರಿಗೆ ಘಟಕದ ವ್ಯವಸ್ಥಾಪಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೆ ನಿಲ್ದಾಣದಲ್ಲಿ ತುರ್ತಾಗಿ ನೀರಿನ ವ್ಯವಸ್ಥೆ, ವಿದ್ಯುತ್ ದೀಪ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸಾರಿಗೆ ಘಟಕದ ಟ್ರಾಫಿಕ್ ಇನ್ಸ್ಪೆಕ್ಟರ ಸರ್ಫರಾಜ ಮನವಿ ಸ್ವೀಕರಿಸಿ, ಹೊಳೆಆಲೂರ ಬಸ್ ನಿಲ್ದಾಣದಲ್ಲಿ ಕುಡಿವ ನೀರು, ವಿದ್ಯುತ್ ದೀಪ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವದು ಎಂದು ಭರವಸೆ ನೀಡಿದರು.
ಈ ವೇಳೆ ವಿದ್ಯಾರ್ಥಿ ಘಟಕ ಉಪಾಧ್ಯಕ್ಷ ಸಂಕೇತ ದಾನರೆಡ್ಡಿ, ಹೊಳೆ-ಆಲೂರು ವಿದ್ಯಾರ್ಥಿ ಘಟಕ ಉಪಾಧ್ಯಕ್ಷ ಕಾರ್ತಿಕ ಬಡಿಗೇರ , ರಫೀಕ್ ಒಲಿ, ಎ.ಎಂ.ಸೊಬಗಿನ, ಎಸ್.ಎ ಗದಗ, ವಿ.ಎಚ್. ಜಲವಾದಿ ಸೇರಿದಂತೆ ಅನೇಕರಿದ್ದರು.