ಸಾರಾಂಶ
ದಾವಣಗೆರೆ: ಬಡ, ಮಧ್ಯಮ ವರ್ಗ, ಗ್ರಾಮೀಣ ಪ್ರತಿಭೆಗಳೇ ಕ್ರೀಡಾ ಸಾಧನೆ ಮಾಡುತ್ತಿದ್ದು, ಇಂತಹವರಿಗೆ ಹೊರ ರಾಜ್ಯಗಳಲ್ಲಿ ಆಯೋಜನೆಗೊಳ್ಳುವ ಕ್ರೀಡಾ ಸ್ಪರ್ಧೆ, ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ರೈಲ್ವೇ ಇಲಾಖೆಯು ಕ್ರೀಡಾಪಟುಗಳಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಿ, ಪ್ರೋತ್ಸಾಹಿಸಬೇಕು ಎಂದು ದೂಡಾ ಅಧ್ಯಕ್ಷ, ಕ್ರೀಡಾಪಟುಗಳ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಕೆ.ಶೆಟ್ಟಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ವುಶು ಸಂಸ್ಥೆಯಿಂದ (ಕ್ರೀಡಾ ವುಶು) ಹಮ್ಮಿಕೊಂಡ ಅಸ್ಮಿತಾ ಖೇಲೋ ಇಂಡಿಯಾ ರಾಜ್ಯಮಟ್ಟದ ಪ್ರಥಮ ಮಹಿಳಾ ವುಶು ಲೀಗ್ 2025-26 ಉದ್ಘಾಟಿಸಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಕ್ರೀಡಾಪಟುಗಳಿಗೆ ಹೊರ ರಾಜ್ಯಗಳಲ್ಲಿ ನಡೆಯುವ ಕ್ರೀಡಾ ಸ್ಪರ್ಧೆ, ಕ್ರೀಡಾಕೂಟಗಳಲ್ಲಿ ಭಾಗಿಯಾಗಲು ಅನುವಾಗುವಂತೆ ಉಚಿತ ಅಥವಾ ರಿಯಾಯಿತಿ ಪ್ರಯಾಣ ಸೇವೆಯನ್ನು ರೈಲ್ವೆ ಇಲಾಖೆ ಒದಗಿಸಬೇಕು ಎಂದರು.ಪ್ರಸ್ತುತ ದಿನಗಳಲ್ಲಿ ಕ್ರೀಡಾಭ್ಯಾಸ ಮಾಡುವುದೇ ಕಷ್ಟ. ಅಂತಹದ್ದರಲ್ಲಿ ಹೊರ ರಾಜ್ಯಗಳಿಗೆ ಸ್ಪರ್ಧೆಗೆ ಕ್ರೀಡಾಪಟುಗಳು ಹೋಗಬೇಕಾಗುತ್ತದೆ. ಹೀಗೆ ಹೋಗಿ ಬರುವು
ದು ಆರ್ಥಿಕವಾಗಿ ಹಿಂದುಳಿದ ಕ್ರೀಡಾಪಟುಗಳಿಗೆ ಕಷ್ಟವಾಗಿ, ಅನೇಕರು ಸ್ಪರ್ಧೆಯಿಂದಲೇ ಹಿಂದುಳಿಯುವ ಸಾಧ್ಯತೆ ಹೆಚ್ಚು. ಆದ್ದರಿಂದ ಕೇಂದ್ರ ಸರ್ಕಾರ, ರೈಲ್ವೆ ಇಲಾಖೆಯು ಉಚಿತ ಅಥವಾ ರಿಯಾಯಿತಿಯಲ್ಲಿ ರೈಲ್ವೆ ಪ್ರಯಾಣ ಸೇವೆ ನೀಡಿ, ಪ್ರೋತ್ಸಾಹಿಸಬೇಕು ಎಂದು ಆಗ್ರಹಿಸಿದರು.ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣ ಹೆಚ್ಚುತ್ತಿದ್ದು, ಇವುಗಳನ್ನು ತಡೆಗಟ್ಟಲು ವಿದ್ಯಾರ್ಥಿನಿಯರು ಶಿಕ್ಷಣದ ಜೊತೆಗೆ ಆತ್ಮರಕ್ಷಗೆಗಾಗಿ ಕರಾಟೆ, ವುಶುವಂತಹ ಕ್ರೀಡೆಗಳನ್ನು ಅಭ್ಯಾಸ ಮಾಡುವುದು ಉತ್ತಮ. ಸ್ವಯಂ ರಕ್ಷಣೆಗೆ ಬೇಕಾದ ಆತ್ಮರಕ್ಷಣಾ ಕಲೆಗಳನ್ನು ಕಲಿಯುವುದು ಇಂದು ಅಗತ್ಯವಾಗಿದೆ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎ.ಶ್ರೀಹರ್ಷ, ಚಿತ್ರದುರ್ಗದ ಬಂಜಾರ ಮಹಾಸಂಸ್ಥಾನದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವುಶು ಸಂಸ್ಥೆಯ ಬಾಗಲಕೋಟೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಡಿ.ಮೊಕಾಶಿ, ಅಧ್ಯಕ್ಷ ಕೆ.ಗೋಪಾಲ, ಟಿ.ಎಂ.ಪತ್ರೇಶ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎನ್.ಪಿ.ಮಂಜುಳಾ, ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ, ಕೆ.ಜಿ.ಪ್ರಿಯದರ್ಶಿನಿ ಇತರರು ಇದ್ದರು.ಬೆಂಗಳೂರು, ಮೈಸೂರಿನಂತಹ ಊರುಗಳಿಗಷ್ಟೇ ಸೀಮಿತವಾಗಿದ್ದ ಕ್ರೀಡೆಗಳನ್ನು ದಾವಣಗೆರೆಗೂ ತಂದ ಶ್ರೇಯ ಸಚಿವ ಎಸ್ಸೆಸ್ ಮಲ್ಲಿಕಾರ್ಜುನರಿಗೆ ಸಲ್ಲುತ್ತದೆ. ಹಿಂದೆ ಕ್ರೀಡಾ ಸಚಿವರಿದ್ದ ವೇಳೆ ಖೋ ಖೋ, ಕಬಡ್ಡಿ, ಕುಸ್ತಿ, ಈಜು ಸೇರಿದಂತೆ 14 ನುರಿತ ಕೋಚ್‌ಗಳನ್ನು ಇಲ್ಲಿಗೆ ನೇಮಿಸಿ, ಇಲ್ಲಿನ ಮಕ್ಕಳು, ವಿದ್ಯಾರ್ಥಿ, ಯುವ ಜನರು ಕ್ರೀಡಾ
ತರಬೇತಿ ಪಡೆಯಲು ಅನುವು ಮಾಡಿಕೊಟ್ಟಿದ್ದರು. ಇಲ್ಲಿ ತರಬೇತಿ ಪಡೆದ ಮಕ್ಕಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.ದಿನೇಶ ಕೆ.ಶೆಟ್ಟಿ, ಜಿಲ್ಲಾಧ್ಯಕ್ಷ, ಕ್ರೀಡಾಪಟುಗಳ ಸಂಘ.