ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಸಮಾಜದಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರದ ಜೊತೆಗೆ ಉತ್ತಮ ಶಿಕ್ಷಣ ನೀಡುವುದು ಅನಿವಾರ್ಯವಾಗಿದೆ ಎಂದು ಭಾರತೀಯ ಜೈನ ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ನಂದಕಿಶೋರ್ ಸಖಲಾ ಹೇಳಿದರು.ನಗರದ ಧರ್ಮನಾಥ ಭವನದಲ್ಲಿ ಸೋಮವಾರ ಭಾರತೀಯ ಜೈನ ಸಮುದಾಯದ ನ್ಯಾಷನಲ್ ಲೀಡರ್‌ಶಿಪ್ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಸುಧಾರಣೆ, ರಾಷ್ಟ್ರ ನಿರ್ಮಾಣಕ್ಕೆ ಸಮಾಜದಲ್ಲಿ ಕೆಲಸ ಮಾಡುವುದು ಸುಲಭವಲ್ಲ. ಸಮಾಜ ಸ್ಥಿತಿ ಬದಲಾಗಿದೆ. ಸಾಮಾಜಿಕ, ಕೌಟುಂಬಿಕ ಸ್ಥಿತಿ ಬದಲಾಗಿದೆ. 40 ವರ್ಷದ ಅವಧಿಯಲ್ಲಿ ಸಮಾಜ ಸ್ಥಿತಿ ಬಹಳಷ್ಟು ಬದಲಾಗಿದೆ. ಆದ್ದರಿಂದ ಸಮಾಜದ ಜೊತೆ ಗೂಡಿ ಸಮಾಜದ ಕಷ್ಟ ಏನು ಎಂಬುವುದರ ಕುರಿತು ಚರ್ಚೆ ಮಾಡಬೇಕಿದೆ ಎಂದರು.ಜನರೇಷನ್ ಬದಲಾಗಿದೆ. ಕುಟುಂಬದಲ್ಲಿ ಮಕ್ಕಳು ತುಂಬಾ ಮೋಜು, ಮಸ್ತಿ ಮಾಡುತ್ತದೆ. ಊಟ ಮಾಡುವ ಸಮಯದಲ್ಲಿ ಮಕ್ಕಳ ಕೈಯಲ್ಲಿ ಮೊಬೈಲ್ ಬಳಸುವುದರಿಂದ ಭವಿಷ್ಯದಲ್ಲಿ ಮಕ್ಕಳ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಹಾಗೂ ಸಮಸ್ಯೆ ಎದುರಾಗಲಿದೆ. ಆದರೆ, ನಾವು ಕೂಡ ಬದಲಾಗಬೇಕಿದೆ. ಮಕ್ಕಳಿಗೆ ಯಾವ ರೀತಿ ಶಿಕ್ಷಣ ನೀಡಬೇಕು ಎಂಬುವುದು ಚಿಂತಿಗೀಡುಮಾಡಿದೆ. ಆಕ್ರಮಣ ಮಾಡಲಾಗುತ್ತಿದೆ. ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.ಕುಟುಂಬದ ವ್ಯವಸ್ಥೆಯನ್ನು ಭದ್ರಪಡಿಸಬೇಕಿದೆ. ಸಮಯ ಅತ್ಯಂತ ಕಠಿಣವಾಗಿದೆ. ನಮ್ಮ ಹೆಣ್ಣು ಮಕ್ಕಳು ಮನೆಯಲ್ಲಿದ್ದರು ಸುರಕ್ಷಿತವಾಗಿರಬೇಕಿದೆ. ಹೊರಗೆ ಹೋಗುವುದನ್ನು ತಡೆಯುವುದು ನಮ್ಮ ಕೈಯಲ್ಲಿಲ್ಲ. ಹೆಣ್ಣುಮಕ್ಕಳಿಗೆ ಬೆಳೆಸುವ ಜವಾಬ್ದಾರಿ ಕುಟುಂಬದ ಮೇಲಿದೆ. ಸರಿಯಾಗುವುದು? ಯಾವುದು ಸರಿಯಿಲ್ಲ? ಎಂಬುವುದನ್ನು ತಿಳಿಸಬೇಕಿದೆ. ಹೆಣ್ಣುಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಜೀವನದಲ್ಲಿ ಇಂತಹದ್ದೇ ತೀರ್ಮಾನ ಕೈಗೊಳ್ಳಬೇಕೆನ್ನುವ ಮನೋಭಾವ ಬೆಳೆಸುವಂತಾಗಿಬೇಕಿದೆ ಎಂದರು.ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಜೈನ ಧರ್ಮದ 2 ಪಂಗಡಗಳ ಆಚರಣೆಗಳು ಬೇರೆ ಬೇರೆಯಾದರೂ ಸಹಿತ ಜೈನ ಧರ್ಮದವರೆಲ್ಲರೂ ಒಗ್ಗಟ್ಟಾಗಿರಬೇಕು. ಆಗ ಮಾತ್ರ ಜೈನ ಧರ್ಮ ಉಳಿಯುತ್ತದೆ ಹಾಗೂ ಜೈನ ಧರ್ಮ ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರಗೊಳಿಸಲು ಶ್ರಮಿಸಬೇಕು ಎಂದರು.
ರಾಜ್ಯ ಅಧ್ಯಕ್ಷ ಕಿಶೋರ್ ರೂನ್ವಾಲ್ ಮಾತನಾಡಿ, ಜೈನಧರ್ಮ ಮಾಡಿರುವಂತ ಕಾರ್ಯ ವೈಖರಿಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸಬೇಕು. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರತಿ ಹಳ್ಳಿಗಳಲ್ಲಿಯೂ ನಾನಾ ಕಾರ್ಯಕ್ರಮ ನಡೆಸುವ ಮೂಲಕ ಜೈನ ಧರ್ಮದ ಮಹತ್ವ ಹಾಗೂ ಪ್ರಾಮುಖ್ಯತೆ ತಿಳಿಸಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಶಾಸಕ ಅಭಯ ಪಾಟೀಲ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಂಕಜ್ ಚೋಪ್ರಾ, ರಾಷ್ಟ್ರೀಯ ಉಪಾಧ್ಯಕ್ಷ ಗೌತಮ್ ಬಾಫ್ನಾ, ರಾಷ್ಟ್ರೀಯ ಕಾರ್ಯದರ್ಶಿ ದಿನೇಶ್ ಪಾಲ್ರೇಚಾ, ದಕ್ಷಿಣ ರಾಷ್ಟ್ರೀಯ ಮುಖ್ಯ ವಿಸ್ತರಕ್ ಓಂಪ್ರಕಾಶ್ ಲುನಾವತ್, ರಾಷ್ಟ್ರೀಯ ಮುಖ್ಯ ಸಂವಹಾದಕ ಶ್ರೀಪಾಲ್ ಖೇಮಲಾಪುರೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಗುಲೇಚಾ, ರಾಜ್ಯ ಉಪಾಧ್ಯಕ್ಷ ಹಿರಚಂದ್ ಕಲ್ಮನಿ, ಬೆಳಗಾವಿ ಪ್ರದೇಶ ರಾಜ್ಯ ವೀಕ್ಷಕ ಅರುಣ ಯಲಗುದ್ರಿ ಸೇರಿದಂತೆ ಇತರರು ಪಾಲ್ಗೊಂಡಿದರು.ಇಂದಿನ ದಿನಲ್ಲಿ ಸತ್ಯ ಹೇಳುವುದು ಕಠಿಣ. ವೈಜ್ಞಾನಿಕ ರೀತಿಯಲ್ಲಿ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕಿದೆ. 40 ವರ್ಷದಿಂದ ಹಲವಾರು ಪ್ರಯೋಗ ಮಾಡಿದ್ದೇವೆ. ಶಿಕ್ಷಣದ ಮೂಲಕ ಬದಲಾವಣೆ ಮಾಡಬೇಕಿದೆ. ಜೀವನ ಸಂಗಾತಿ ಆಯ್ಕೆ ಪದ್ಧತಿ ಬದಲಾಗಿದೆ. ಆದರೆ, ಇಂದಿನ ಸ್ಥಿತಿ ಹಾಗಿಲ್ಲ. ವಿವಾಹ ಮಾಡಲು ಒಪ್ಪುತ್ತಿಲ್ಲ. ಪರಿಸ್ಥಿತಿ ಗಂಭೀರವಾಗಿದೆ. ನಮ್ಮ ಹೆಣ್ಣುಮಕ್ಕಳು ಮದುವೆಯೇ ಆಗದಂತಹ ಸ್ಥಿತಿಯಿದೆ.-ನಂದಕಿಶೋರ್ ಸಖಲಾ,
ಭಾರತೀಯ ಜೈನ ಸಂಘಟನೆ ರಾಷ್ಟ್ರೀಯ ಅಧ್ಯಕ್ಷರು.