ಸಾರಾಂಶ
ಬಾಡಿಗೆ ಕಟ್ಟಡದಲ್ಲಿ ವಸತಿ ಶಾಲೆ ನಡೆಯುತ್ತಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಕ್ಕಳು ಕಳೆದ ವರ್ಷ ಶೇ.100, ಈ ವರ್ಷ ಶೇ.97 ಫಲಿತಾಂಶ ಪಡೆದಿದ್ದಾರೆ. ಶಾಲೆಗೆ ಕಟ್ಟಡ ಅವಶ್ಯಕತೆ ಇದ್ದ ಕಾರಣ 22.5ಕೋಟಿ ರು. ವೆಚ್ಚದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಮಕ್ಕಳು ಈ ಕಟ್ಟಡದಲ್ಲಿ ವಿದ್ಯಾಭ್ಯಾಸ ನಡೆಸಬಹುದು.
ಕನ್ನಡಪ್ರಭ ವಾರ್ತೆ ಮಂಡ್ಯ
ಮಕ್ಕಳಿಗೆ ಸರ್ಕಾರದಿಂದ ಸೌಲಭ್ಯ ಒದಗಿಸಿ ಉನ್ನತ ವಿದ್ಯಾಭ್ಯಾಸ ದೊರಕಿಸಿಕೊಟ್ಟರೆ ಉದ್ಯೋಗ ಗಿಟ್ಟಿಸಿಕೊಳ್ಳುವ ಜತೆಗೆ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕಿನ ಬಂಕನಹಳ್ಳಿಯಲ್ಲಿ 22.5 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಬಾಡಿಗೆ ಕಟ್ಟಡದಲ್ಲಿ ವಸತಿ ಶಾಲೆ ನಡೆಯುತ್ತಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಕ್ಕಳು ಕಳೆದ ವರ್ಷ ಶೇ.100, ಈ ವರ್ಷ ಶೇ.97 ಫಲಿತಾಂಶ ಪಡೆದಿದ್ದಾರೆ. ಶಾಲೆಗೆ ಕಟ್ಟಡ ಅವಶ್ಯಕತೆ ಇದ್ದ ಕಾರಣ 22.5ಕೋಟಿ ರು. ವೆಚ್ಚದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಮಕ್ಕಳು ಈ ಕಟ್ಟಡದಲ್ಲಿ ವಿದ್ಯಾಭ್ಯಾಸ ನಡೆಸಬಹುದು. ಗುತ್ತಿಗೆದಾರರು ಆದಷ್ಟು ತ್ವರಿತವಾಗಿ ಗುಣಮಟ್ಟದ ಕಾಮಗಾರಿ ನಡೆಸಿ ಮುಗಿಸಬೇಕು. ಶಾಲೆ ಕಟ್ಟಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿವೆ. ಮುಂದಿನ ದಿನಗಳಲ್ಲಿ ಸಂಪರ್ಕ ರಸ್ತೆ ಅಭಿವೃದ್ಧಿ ಪಡಿಸುತ್ತೇನೆ ಎಂದರು.ಕಾಂಗ್ರೆಸ್ ಮುಖಂಡ, ಪ್ರಥಮ ದರ್ಜೆ ಗುತ್ತಿಗೆದಾರ ರವಿ ಬೋಜೇಗೌಡ ಮಾತನಾಡಿ, ಗ್ಯಾರಂಟಿ ಯೋಜನೆಗಳ ನಡುವೆಯೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ನಿರಂತರ ಹೋರಾಟ ನಡೆಸಿ ಮೇಲುಕೋಟೆ ಕ್ಷೇತ್ರಕ್ಕೆ ಸಾಕಷ್ಟು ಅನುದಾನಗಳನ್ನು ತಂದು ಅಭಿವೃದ್ಧಿ ಪಡಿಸುತ್ತಿದ್ದಾರೆ ಎಂದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಪ್ರತಿಭಾ, ಉಪಾಧ್ಯಕ್ಷ ರಾಜೇಶ, ಸದಸ್ಯರಾದ ಬಿ.ಜಿ.ದಕ್ಷಿಣಮೂರ್ತಿ, ಎಚ್.ಎಸ್.ಸುಮಾ, ಮಹೇಶಿ, ಶಿವಕುಮಾರ, ನಾಗರಾಜು, ಪೂರ್ಣಿಮಾ, ಸಿ.ಟಿ.ಸಂಗೀತಾ, ಉಮೇಶ್, ಮೋಹನಕುಮಾರ್, ಎಂ.ಎಚ್.ಶಿವಣ್ಣ, ಮಾಜಿ ಅಧ್ಯಕ್ಷ ಸೋಮ, ಪಿಡಿಒ ಸಿ.ಎಸ್.ಪ್ರದೀಪ್, ರೆವಿನ್ಯೂ ಇನ್ಸ್‌ಪೆಕ್ಟರ್ ನಾಗರಾಜು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಕಾವ್ಯಶ್ರೀ, ಕೇಂದ್ರಕಚೇರಿಯ ಇಇ ಪಂಪಾಪತಿ, ಎಇಇ ಲಿಂಗರಾಜು, ಎಇ ಗುರು ಸಿದ್ದೇಶ್ವರ, ಅಂಬೇಡ್ಕರ್ ವಸತಿ ಶಾಲೆ ಪ್ರಾಂಶುಪಾಲೆ ಕೆ.ಜೆ.ಸೌಮ್ಯ, ಟೆಂಡರ್ ದಾರ ದರ್ಶನ್, ರೈತಸಂಘದ ಮುಖಂಡರಾದ ಮಲ್ಲನಾಯಕನಕಟ್ಟೆ ಶಿವಲಿಂಗಯ್ಯ, ಬೇವುಕಲ್ಲು ಮಹದೇವಪ್ಪ, ಹೊಳಲು ಚಂದನ, ಬಿ.ಎನ್.ಹರ್ಷ, ಹಟ್ನ ರಮೇಶ, ಹಾಡ್ಯ ಸಂದೀಪ್ ಗೌಡ, ವಿಜಯಕುಮಾರ್, ಶಾಮಿಯಾನ ಚಂದ್ರಣ್ಣ, ಬೇವುಕಲ್ಲು ರಾಜೇಶ್, ದಸಂಸ ಮುಖಂಡ ಎಂ.ವಿ.ಕೃಷ್ಣ, ತಾಪಂ ಮಾಜಿ ಅಧ್ಯಕ್ಷರಾದ ಬೀರಪ್ಪ, ಅಣ್ಣಯ್ಯ ಗ್ರಾಮದ ಯಜಮಾನರು ಪುಟ್ಟಮಾದಪ್ಪ ಹಾಗೂ ಯುವಕರು ಹಾಜರಿದ್ದರು.