ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಬಗ್ಗೆ ಮಾತನಾಡುವ ಜತೆಗೆ ತಮ್ಮ ಕರ್ತವ್ಯಗಳನ್ನೂ ಸಮರ್ಪಕವಾಗ ನಿರ್ವಹಿಸಬೇಕು. ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಸಮಾಜ, ದೇಶದ ಆಸ್ತಿಯಾಗಿ ರೂಪಿಸಬೇಕು ಎಂದು ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕ ಡಾ.ಬಿ.ಆರ್.ರವಿಕಾಂತೇಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಬಗ್ಗೆ ಮಾತನಾಡುವ ಜತೆಗೆ ತಮ್ಮ ಕರ್ತವ್ಯಗಳನ್ನೂ ಸಮರ್ಪಕವಾಗ ನಿರ್ವಹಿಸಬೇಕು. ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಸಮಾಜ, ದೇಶದ ಆಸ್ತಿಯಾಗಿ ರೂಪಿಸಬೇಕು ಎಂದು ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕ ಡಾ.ಬಿ.ಆರ್.ರವಿಕಾಂತೇಗೌಡ ಹೇಳಿದರು.ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಪ್ರಸ್ತುತ ದಲಿತ ಚಳವಳಿ ಹಾಗೂ ಭಾರತೀಯ ಸಂವಿಧಾನ ಅನುಷ್ಠಾನ ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ನನಗೆ, ನನ್ನ ತಂದೆಯವರಿಗೆ ಇಂದು ಇಷ್ಟೆಲ್ಲಾ ಯಶಸ್ಸು, ಗೌರವಯುತ ಸ್ಥಾನಮಾನ ಸಿಗಲು ಡಾ.ಅಂಬೇಡ್ಕರ್ ಕಾರಣ ಎಂದರು.
ಅಂಬೇಡ್ಕರ್ ಕೊಟ್ಟಂತಹ ಸಂವಿಧಾನದ ಮಹತ್ವ ಮತ್ತು ಅದರ ಸಾಮಾಜಿಕ ನ್ಯಾಯದ ಆಶಯಗಳು, ಸಂವಿಧಾನವನ್ನು ರಕ್ಷಿಸುವ ಜವಾಬ್ಧಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ ಎಂದು ತಿಳಿಸಿದರು.ಸಾಮಾಜಿಕ ಹೋರಾಟಗಾರ, ಚಿತ್ರನಟ ಚೇತನ್ ಅಹಿಂಸಾ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಆಶಯದಂತೆ ಜಾತಿ ರಹಿತ, ವರ್ಣ ರಹಿತ ಸಮ ಸಮಾಜ ನಿರ್ಮಿಸುವ ಕಡೆಗೆ ನಾವೆಲ್ಲರೂ ಹೋಗಬೇಕಾಗಿದೆ. ಶಿಕ್ಷಣ, ಸಂಘಟನೆ, ಹೋರಾಟವೆಂಬ ಮೂರು ದಿವ್ಯ ಮಂತ್ರಿಗಳನ್ನು ಅಂಬೇಡ್ಕರ್ ನೀಡಿದ್ದಾರೆ. ಕೇವಲ ಸಂಘಟನೆಯಾದರಷ್ಟೇ ಸಾಲದು, ಹೋರಾಟ ಮಾಡಿದರಷ್ಟೇ ಸಾಲದು, ಮೊದಲು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಕಡೆಗೆ ಗಮನ ಹರಿಸಬೇಕು ಎಂದರು.
ಡಿಎಸ್ಸೆಸ್ ಜಿಲ್ಲಾ ಸಂಚಾಲಕ ರಾಘವೇಂದ್ರ ಡಿ.ಕಡೇಮನಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ ಮಾತನಾಡಿದರು. ಹಿರಿಯ ವಿಚಾರವಾದಿ ಡಾ.ಎಚ್.ವಿಶ್ವನಾಥ, ಸತ್ಯ ಭದ್ರಾವತಿ ಇಂದಿನ ದಲಿತ ಚಳವಳಿಯ ಸವಾಲುಗಳು ಮತ್ತು ಸಂವಿಧಾನದ ಅನುಷ್ಟಾನದ ಅಗತ್ಯತೆಯನ್ನು ವಿವರಿಸಿದರು. ಆಲೂರು ನಿಂಗರಾಜ, ಎಸ್.ಟಿ.ವೀರೇಶ, ಎಚ್.ಮಲ್ಲೇಶ, ಚಿನ್ನಯ್ಯ, ಡಾ.ಸಿ.ಎಂ.ರವಿಕುಮಾರ, ಗುರುರಾಜ ಸೊರಬ, ಪ್ರಭಣ್ಣ ಹೂವಿನಮಡು, ಮುಸ್ತಫಾ ಇತರರು ಇದ್ದರು.ಸಮಿತಿ ಮುಖಂಡರಾದ ಟಿ.ರವಿಕುಮಾರ, ಕೆಟಿಜೆ ನಗರ ಎಂ.ರವಿ, ಪ್ರಭಾಕರ ಪಾಂಡೋಮಟ್ಟಿ, ರಾಂಪುರ ರಮೇಶ, ಮಾಯಕೊಂಡ ಗುಮ್ಮನೂರು ಮಂಜುನಾಥ, ಎಚ್.ಮಲ್ಲಿಕಾರ್ಜುನ ವಂದಾಲಿ, ಬಿ.ಕಲ್ಪನಹಳ್ಳಿ, ಕೆಂಚಮ್ಮನಹಳ್ಳಿ ರುದ್ರೇಶಷ ಮಾರಿಕೊಪ್ಪ ಮಂಜುನಾಥ, ಎಂ.ಕೃಷ್ಣಪ್ಪ ಹರಿಹರ, ಮೂರ್ತಿ ತಿಪ್ಪಗೊಂಡನಹಳ್ಳಿ, ಸುನಿಲ್ ಬಾತಿ, ಚಿಕ್ಕನಹಳ್ಳಿ ನಿಂಗರಾಜ, ಚಿಕ್ಕ ತೊಗಲೇರಿ ಶಿವಕುಮಾರ, ವಿದ್ಯಾರ್ಥಿಗಳು, ಸಂಘಟನೆ ಸದಸ್ಯರು ಇದ್ದರು. ಕುಮಾರಿ ಎಚ್.ಎನ್.ಚಂದನ ಆಲೂರು, ಟಿ.ರವಿಕುಮಾರ, ಆರ್.ಪ್ರಭಾಕರ ಪಾಂಡೋಮಟ್ಟಿ ಕಾರ್ಯಕ್ರಮ ನಡೆಸಿಕೊಟ್ಟರು.