ಗೃಹಲಕ್ಷ್ಮೀ ಫಲಾನುಭವಿಗಳು ನಿಧನರಾದ ನಂತರ ಹಣ ಜಮೆಯಾದರೆ ಅಂತಹವರನ್ನು ಗುರುತಿಸಿ, ಮರಳಿ ಸರ್ಕಾರಕ್ಕೆ ಹಣ ನೀಡುವಂತೆ ತಿಳಿವಳಿಕೆ ನೀಡಬೇಕು.

ಧಾರವಾಡ:

ಶಾಲಾ-ಕಾಲೇಜುಗಳಿಗೆ ಹೋಗಲು ಸಕಾಲಕ್ಕೆ ಬಸ್‌ ಬಾರದೆ ಗ್ರಾಮೀಣ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದು, ಬಸ್ ತಡೆದು ಹೋರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಧಾರವಾಡ ತಾಲೂಕಾಧ್ಯಕ್ಷ ಅರವಿಂದ ಏಗನಗೌಡರ ಹೇಳಿದರು.

ಇಲ್ಲಿಯ ತಾಲೂಕು ಪಂಚಾಯಿತಿಯಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ಜರುಗಿಸಿದ ಅವರು, ಗೃಹಲಕ್ಷ್ಮೀ ಫಲಾನುಭವಿಗಳು ನಿಧನರಾದ ನಂತರ ಹಣ ಜಮೆಯಾದರೆ ಅಂತಹವರನ್ನು ಗುರುತಿಸಿ, ಮರಳಿ ಸರ್ಕಾರಕ್ಕೆ ಹಣ ನೀಡುವಂತೆ ತಿಳಿವಳಿಕೆ ನೀಡಬೇಕು. ಐಟಿ, ಜಿಎಸ್‌ಟಿಯ ಹಿನ್ನೆಲೆಯಲ್ಲಿ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳಿಗೆ ಬದಲಾಯಿಸುತ್ತಿರುವ ಸಂದರ್ಭದಲ್ಲಿ ಅರ್ಹರಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ಸೂಚಿಸಿದರು.ಪಡಿತರ ನ್ಯಾಯಬೆಲೆ ಅಂಗಡಿಗಳಲ್ಲಿ ಸರಿಯಾಗಿ ಪಡಿತರ ವಿತರಣೆ ಮಾಡುತ್ತಿಲ್ಲ, ಅಂಗನವಾಡಿ ಕೇಂದ್ರಗಳಲ್ಲಿ ಬಾಣಂತಿಯರಿಗೆ ಪೌಷ್ಟಿಕ ಆಹಾರ ಸರಿಯಾಗಿ ವಿತರಿಸುತ್ತಿಲ್ಲ ಎಂದು ದೂರುಗಳು ಬರುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಕ್ರಮವಹಿಸಬೇಕು ಎಂದರು.

ಈ ವೇಳೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಚಂದ್ರಶೇಖರ ಕದಂ, ಪರಮೇಶ್ವರ ಕರಿಕಟ್ಟಿ, ಮಂಜುನಾಥ ಉಡಿಕೇರಿ, ಮಿಲಿಂದ ಇಚಂಗಿ, ರಾಜೇಶ ಚವ್ಹಾಣ, ಸಿದ್ದಪ್ಪ ಅಗಸಿಮನಿ, ಕಲಾವತಿ ಭೀಮಕ್ಕನವರ, ರೇಣುಕಾ ಕಳ್ಳಿಮನಿ, ಮೈಲಾರಗೌಡ ಪಾಟೀಲ, ಕಾರ್ತಿಕ ಗೋಕಾಕ, ಪರಮೇಶ್ವರ ಕಾಳೆ, ತಾಪಂ ಅಧಿಕಾರಿ ಗಂಗಾಧರ ಇದ್ದರು.