ಜಾತಿಗಣತಿ ಸಮೀಕ್ಷೆಯಲ್ಲಿ ಪೂರಕವಾದ ಮಾಹಿತಿ ನೀಡಿ

| Published : Sep 28 2025, 02:00 AM IST

ಜಾತಿಗಣತಿ ಸಮೀಕ್ಷೆಯಲ್ಲಿ ಪೂರಕವಾದ ಮಾಹಿತಿ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಶಿಷ್ಟ ಜಾತಿ ಬಲಗೈ ಸಮುದಾಯದವರು ಜಾತಿ ಸಮೀಕ್ಷೆಯಲ್ಲಿ ಧರ್ಮ ಕಾಲಂನಲ್ಲಿ ಬೌದ್ಧ, ಜಾತಿ ಕಾಲಂ ನಲ್ಲಿ ಪರಿಶಿಷ್ಟ ಜಾತಿ ಹಾಗೂ ಉಪ ಜಾತಿ ಕಾಲಂ ನಲ್ಲಿ ಹೊಲಯ ಎಂದು ಸ್ಪಷ್ಟವಾಗಿ ನಮೂದಿಸಬೇಕು ಎಂದು ಕರ್ನಾಟಕ ಬಲಗೈ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಅಯ್ಯನಪುರ ಶಿವಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಪರಿಶಿಷ್ಟ ಜಾತಿ ಬಲಗೈ ಸಮುದಾಯದವರು ಜಾತಿ ಸಮೀಕ್ಷೆಯಲ್ಲಿ ಧರ್ಮ ಕಾಲಂನಲ್ಲಿ ಬೌದ್ಧ, ಜಾತಿ ಕಾಲಂ ನಲ್ಲಿ ಪರಿಶಿಷ್ಟ ಜಾತಿ ಹಾಗೂ ಉಪ ಜಾತಿ ಕಾಲಂ ನಲ್ಲಿ ಹೊಲಯ ಎಂದು ಸ್ಪಷ್ಟವಾಗಿ ನಮೂದಿಸಬೇಕು ಎಂದು ಕರ್ನಾಟಕ ಬಲಗೈ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಅಯ್ಯನಪುರ ಶಿವಕುಮಾರ್ ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಒಳ ಮೀಸಲಾತಿ ನೀಡುವ ಸಂಬಂಧ ಸಮೀಕ್ಷೆಯಲ್ಲಿ ಭಾಗವಹಿಸಿ, ನಿಖರವಾದ ಮಾಹಿತಿ ನೀಡಿದ್ದೀರಿ. ಜಾತಿ ಸಮೀಕ್ಷೆಯಲ್ಲಿ ಸಮೀಕ್ಷೆದಾರರಿಗೆ ಪೂರಕವಾದ ಮಾಹಿತಿ ನೀಡಬೇಕು. ಜಾತಿ, ಧರ್ಮವನ್ನು ಸ್ಪಷ್ಟವಾಗಿ ನಮೂಸಿದರೆ ಮುಂದಿನ ದಿನಗಳಲ್ಲಿ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ, ಸೌಲಭ್ಯ ದೊರೆಯಲು ಸಹಕಾರಿಯಾಗುತ್ತದೆದೆ ಎಂದು.

೮. ಧರ್ಮ ಕಾಲಂನಲ್ಲಿ ಬೌದ್ಧ, ೯ ಜಾತಿ ಕಾಲಂನಲ್ಲಿ ಪರಿಶಿಷ್ಟ ಜಾತಿ ಹಾಗೂ ೧೦ ಉಪ ಜಾತಿ ಕಾಲಂನಲ್ಲಿ ಹೊಲಯ (೦೪೪೧) ಎಂದು ನಮೂದಿಸಬೇಕು. ೬೦ ಪ್ರಶ್ನೆಗಳಿಗೆ ನಿಖರ ಉತ್ತರ ನೀಡಬೇಕು. ಆನ್‌ಲೈನ್‌ನಲ್ಲಿ ಭರ್ತಿಯಾಗುವುದರಿಂದ ಯಾವುದೇ ಮೋಸವಾಗುವುದಿಲ್ಲ ಎಂದರು.

ಬೌದ್ಧ ಧರ್ಮ ಬರೆಸಿದರೆ ಮೀಸಲಾತಿ ಹೋಗಲ್ಲ:

ತಾಪಂ ಮಾಜಿ ಅಧ್ಯಕ್ಷ ಆರ್. ಮಹದೇವ್ ಮಾತನಾಡಿ, ಕೆಲವರು ತಪ್ಪು ಕಲ್ಪನೆಗಳನ್ನು ನಮ್ಮ ಜನರಿಗೆ ತುಂಬುತ್ತಿದ್ದಾರೆ. ಧರ್ಮ ಕಾಲಂನಲ್ಲಿ ಬೌದ್ಧ ಬರೆದರೆ ಪರಿಶಿಷ್ಟ ಜಾತಿ ಮೀಸಲಾತಿ ಪಟ್ಟಿಯಿಂದ ಹೊರಕ್ಕೆ ಸೇರಿಸುತ್ತಾರೆ. ಮೀಸಲಾತಿ ಸೌಲಭ್ಯ ದೊರೆಯುವುದಿಲ್ಲ ಎಂದು ಮನವಾದಿಗಳು ಪಿತೂರಿ ಮಾಡುತ್ತಿದ್ದಾರೆ. ಧರ್ಮ ಕಾಲಂನಲ್ಲಿ ಬೌದ್ಧ ಇದ್ದು, ಪರಿಶಿಷ್ಟ ಜಾತಿಗೆ ಸೇರ್ಪಡೆಯಾಗಿದ್ದರೆ ಅಂಥವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲೇಬೇಕು. ಇದಕ್ಕೆ ಸ್ಪಷ್ಟವಾಗಿ ಸಮಾಜ ಕಲ್ಯಾಣ ಇಲಾಖೆಯ ಸುತ್ತೋಲೆಯನ್ನು ಹೊರಡಿಸಿದೆ ಎಂದು ಸರ್ಕಾರದ ಆದೇಶವನ್ನು ಪ್ರದರ್ಶನ ಮಾಡಿದರು.

ಸೆ. ೩೦ ರಂದು ಜಿಲ್ಲಾ ಮಟ್ಟದ ಕಾರ್ಯಾಗಾರ:

ಜಾತಿ ಗಣತಿಯಲ್ಲಿ ಸರಿಯಾಗಿ ಧರ್ಮ, ಜಾತಿ ಹಾಗೂ ಉಪ ಜಾತಿಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಬಲಗೈ ಜಾತಿಗಳ ಒಕ್ಕುಟದಿಂದ ಸೆ. ೩೦ರ ಮಂಗಳವಾರ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ನಗರದ ಡಾ. ಬಿ.ಆರ್. ಅಂಭೇಡ್ಕರ್ ಭವನದಲ್ಲಿ ಆಯೋಜನೆ ಮಾಡಲಾಗಿದೆ.

ಬೆಳಗ್ಗೆ ೧೧ ಗಂಟಗೆ ನಡೆಯುವ ಕಾರ್ಯಾಗಾರದ ಸಾನ್ನಿಧ್ಯವನ್ನು ಮೈಸೂರಿನ ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶಸ್ವಾಮೀಜಿ ವಹಿಸಲಿದ್ದರು, ಜಿಲ್ಲೆಯಲ್ಲಿ ಶಾಸಕರಾದ ಎ.ಆರ್. ಕೃಷ್ಣಮುರ್ತಿ, ಮಾಜಿ ಸಚಿವ ಎನ್. ಮಹೇಶ್, ಮಾಜಿ ಶಾಸಕ ರಾದ ಎಸ್. ಬಾಲರಾಜು, ಜಿ.ಎನ್. ನಂಜುಂಡಸ್ವಾಮಿ ಸೇರಿದಂತೆ ಅನೇಕ ಪ್ರಮುಖರು, ದಲಿತ ಮುಖಂಡರು, ಸಂಘಟನೆಗಳ ಪ್ರಮುಖರು ಭಾಗವಹಿಸಲಿದ್ದಾರೆ. ಜಿಲ್ಲೆಯ ಗಡಿ ಗಟ್ಟೆ ಯಜಮಾನರು, ಮುಖಂಡರು ಹಾಗೂ ಅಂಬೇಡ್ಕರ್ ಸಂಘಗಳ ಪದಾಧಿಕಾರಿಗಳು ಭಾಗವಹಿಸಬೇಕೆಂದು ಅಯ್ಯನಪುರ ಶಿವಕುಮಾರ್ ತಿಳಿಸಿದರು.

ಅರುಣ್‌ಕುಮಾರ್‌ಗೆ ಘೇರಾವ್ ಮಾಡುವ ಎಚ್ಚರಿಕೆ : ಮನುವಾದಿಗಳು ಮಾತಿನಿಂದಂತೆ ಜಿಲ್ಲೆಯಲ್ಲಿ ಬಂತು ಬಾಯಿಗೆ ಬಂದಂತೆ ಮಾತನಾಡುವ ವಕೀಲ ಅರುಣ್‌ಕುಮಾರ್, ಭಾಸ್ಕರ್ ಸುಳ್ಳು ಹೇಳಿ, ಬೌದ್ಧ ಧರ್ಮ ನೇಪಾಳದ್ದು ಎಂದು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದರ ವಿರುದ್ದ ಬಲಗೈ ಸಮುದಾಯವರು ಅವರನ್ನು ಘೇರಾವ್ ಮಾಡಬೇಕಾಗುತ್ತದೆ ಎಂದು ಗ್ಯಾರಂಟಿ ಯೋಜನೆಯ ಸಮಿತಿ ತಾಲೂಕು ಅಧ್ಯಕ್ಷ ನಲ್ಲೂರು ಸೋಮೇಶ್ವರ ಎಚ್ಚರಿಕೆ ನೀಡಿದರು.

ಹೆಬ್ಬಸೂರು ರಂಗಸ್ವಾಮಿ, ಸಿದ್ದಯ್ಯನಪುರ ಗೋವಿಂದರಾಜು, ವೆಂಕಟಯ್ಯನಛತ್ರ ಸೋಮಣ್ಣ, ನಗರಸಭಾ ಸದಸ್ಯ ಆರ್.ಪಿ. ನಂಜುಂಡಸ್ವಾಮಿ, ನಲ್ಲೂರು ಮಹದೇವಸ್ವಾಮಿ ಇದ್ದರು.