ಗ್ರಾಮೀಣ ಜನರಿಗೆ ಸುರಕ್ಷಿತ, ಗುಣಮಟ್ಟದ ನೀರು ಪೂರೈಸಿ

| Published : Mar 04 2025, 12:31 AM IST

ಗ್ರಾಮೀಣ ಜನರಿಗೆ ಸುರಕ್ಷಿತ, ಗುಣಮಟ್ಟದ ನೀರು ಪೂರೈಸಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಜನರಿಗೆ 2030 ಒಳಗೆ ಸುರಕ್ಷಿತವಾದ ಮತ್ತು ಗುಣಮಟ್ಟದ ನೀರನ್ನು ಪೂರೈಕೆ ಮಾಡಬೇಕು.

ಕಾರವಾರ: ನಗರದ ಜಿಪಂ ಸಭಾಂಗಣದಲ್ಲಿ ಜಲಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಗಳನ್ನು ಉತ್ತಮ ಅನುಷ್ಠಾನಕ್ಕಾಗಿ ಡಬ್ಲ್ಯೂಎಎಸ್‌ಎಚ್‌ ಕಾರ್ಯಾಚರಣೆ ಮತ್ತು ನಿರ್ವಹಣೆ ಕುರಿತು ಒಂದು ದಿನದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ ನಡೆಯಿತು.

ಜಿಪಂ ಉಪಕಾರ್ಯದರ್ಶಿ ನಾಗೇಶ ರಾಯ್ಕರ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಜನರಿಗೆ 2030 ಒಳಗೆ ಸುರಕ್ಷಿತವಾದ ಮತ್ತು ಗುಣಮಟ್ಟದ ನೀರನ್ನು ಪೂರೈಕೆ ಮಾಡಬೇಕು. ನೀರನ್ನು ಮಿತವಾಗಿ ಬಳಸುವುದು ಅತಿ ಮುಖ್ಯವಾಗಿದೆ. ಎಎಒ ಮತ್ತು ಎಸ್‌ಬಿಎಂ ಯೋಜನೆಗಳನ್ನು ಗ್ರಾಮ ಮಟ್ಟದಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡುವ ಜವಾಬ್ದಾರಿ ಗ್ರಾಪಂ ಮಟ್ಟದ ಅಧಿಕಾರಿಗಳು, ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಉಪಕಾರ್ಯದರ್ಶಿ ಜಾಫರ್‌ ಶರೀಫ್ ಸುತಾರ ರಾಜ್ಯ ಕಚೇರಿಯಿಂದ ವೀಡಿಯೋ ಸಂವಾದದ ಮೂಲಕ ಕಾರ್ಯಾಗಾರದಲ್ಲಿ ಜಲಜೀವನ ಮಿಷನ್ ಯೋಜನೆಯ ಸಮರ್ಪಕವಾದ ಅನುಷ್ಠಾನ ಕುರಿತು ಮಾಹಿತಿ ನೀಡಿದರು.

ಜಿಪಂ ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ, ಸಹಾಯಕ ಕಾರ್ಯದರ್ಶಿ ಸುನೀಲ ನಾಯ್ಕ ಮುಂತಾದವರು ಇದ್ದರು.ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ನಾಗೇಶ ರಾಯ್ಕರ ಮಾತನಾಡಿದರು.