ಶಿಕ್ಷಣಕ್ಕಿಂತ ವಿವೇಕ ಮುಖ್ಯ: ಚಟ್ನಳ್ಳಿ

| Published : Feb 04 2025, 12:32 AM IST

ಸಾರಾಂಶ

ಸಮೀಪದ ನಾಗೇನಹಳ್ಳಿ ಗ್ರಾಮದಲ್ಲಿ ತಾಲ್ಲೂಕು ಸಿರಿಗನ್ನಡ ವೇದಿಕೆ ವತಿಯಿಂದ ಏರ್ಪಾಡಾಗಿದ್ದ ನುಡಿ ನಿತ್ಯೋತ್ಸವ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಶಿಕ್ಷಣಕ್ಕಿಂತ ವಿವೇಕ ಮುಖ್ಯ ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು.

ಸಾಹಿತಿ ಮಹೇಶ್‌ ಅಭಿಪ್ರಾಯ । ನಾಗೇನಹಳ್ಳಿಯಲ್ಲಿ ನುಡಿ ನಿತ್ಯೋತ್ಸವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ತರೀಕೆರೆ

ಶಿಕ್ಷಣಕ್ಕಿಂತ ವಿವೇಕ ಮುಖ್ಯ ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು.

ಸಮೀಪದ ನಾಗೇನಹಳ್ಳಿ ಗ್ರಾಮದಲ್ಲಿ ತಾಲ್ಲೂಕು ಸಿರಿಗನ್ನಡ ವೇದಿಕೆ ವತಿಯಿಂದ ಏರ್ಪಾಡಾಗಿದ್ದ ನುಡಿ ನಿತ್ಯೋತ್ಸವ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಮನೆಯಲ್ಲಿ ಸಂಸ್ಕಾರ ಪ್ರಾರಂಭಗೊಂಡು ಎಲ್ಲಾ ಕಡೆ ಮೊಳಗಿದಾಗ ನಾಡು ಸುಭಿಕ್ಷೆಯಾಗುತ್ತದೆ, ತಂದೆ ತಾಯಿಯರು ಮಾತೃಭಾಷೆಯ ಬಗ್ಗೆ ಮಕ್ಕಳಲ್ಲಿ ಪ್ರೇಮ ತುಂಬಿದಾಗ ಕನ್ನಡಕ್ಕೆ ಆಪತ್ತು ಬರುವುದಿಲ್ಲ. ಮನೆಯೆ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎನ್ನುವ ಹಾಗೆ ಮನೆಯಿಂದಲೆ ಕನ್ನಡ ಬಾಷಾ ಜಾಗೃತಿ ಆರಂಭವಾಗಬೇಕು ಎಂದು ಹೇಳಿದರು.

ಕಡೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ ವಿರುಪಾಕ್ಷಪ್ಪ ಮಾತನಾಡಿ. ವಚನ ಸಾಹಿತ್ಯ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದೆ, ಮಾನವ ಬದುಕಿಗೆ ಸಂದೇಶ ನೀಡಿದ ಸಾಹಿತ್ಯವಾಗಿದೆ ಎಂದರು.

ಸಾಹಿತಿ ಹೊಸೂರು ಪುಟ್ಟರಾಜು ಮಾತನಾಡಿ, ಅರಿವು ಮತ್ತು ಜ್ಞಾನದ ಸಂಕೇತವೇ ವಚನ ಸಾಹಿತ್ಯ. ಅನುಭಾವಿಗಳ ವಚನ ಮಂಟಪ ಜಗತ್ತಿಗೆ ಮಾದರಿ. ಅಲ್ಲಿ ಸತ್ಯ, ನಿಷ್ಠೆ, ಪ್ರಾಮಾಣಿಕತ ಮನೆ ಮಾತಾಗಿತ್ತು ಎಂದು ತಿಳಿಸಿದರು.

ಸಿರಿ ಕನ್ನಡ ವೇದಿಕೆ ಜಿಲ್ಲಾಧ್ಯಕ್ಷ ಎಂ.ಆರ್.ಪ್ರಕಾಶ್ ಮಾತನಾಡಿ, ಜಿಲ್ಲಾದ್ಯಾಂತ ವರ್ಷಪೂರ್ತಿ ಕನ್ನಡ ನಾಡು ನುಡಿ ಸಂಸ್ಕೃತಿ ಅನಾವರಣ ಗೊಳಿಸುವ ಕೆಲಸವನ್ನು ವೇದಿಕೆ ಹಮ್ಮಿಕೊಂಡು ಬರುತ್ತಿದೆ, .ಮುಂದಿನ ದಿನಗಳಲ್ಲಿ ಎಲ್ಲಾ ಕಲಾವಿದರು, ಸಾಹಿತಿಗಳು ಸಮಾಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಅಜ್ಜಂಪುರ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿಪಿ.ರಾಜಪ್ಪ ಅವರು ಭುವನೇಶ್ವರಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಜಾಗತಿಕ ಲಿಂಗಾಯಿತ ಮಹಾಸಭಾ ಜಿಲ್ಲಾ ಧ್ಯಕ್ಷ ಗಂಗಾಧರ ಶಿವಪುರ, .ಕದಳಿ ವೇದಿಕೆ ಅಧ್ಯಕ್ಷೆ ಮಮತಾ. ಚಂದ್ರಪ್ರಕಾಶ್ ವಿಜಯಕುಮಾರಿ. ತಾಲೂಕು ಸಿರಿಗನ್ಡಡ ವೇದಿಕೆ ಅಧ್ಯಕ್ಷ ನಾಗೇನಹಳ್ಳಿ ತಿಮ್ಮಯ್ಯ, ಟಿ.ಸಿ.ಶಿವಕುಮಾರ ಸ್ವಾಮಿ, ಎನ್.ಜಿ.ಚಂದ್ರಶೇಖರ್. ಪ್ರಾಚಾರ್ಯ ಸದಾಶಿವಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ, ಪ್ರಕಾಶ್‌ ತಿಮ್ಮಜ್ಜ. ಗಣೇಶ್, ಮೋಹನ್ ಕುಮಾರ್. ಜನಪಥ ಕಲಾವಿದ ಶಂಕರಪ್ಪ, ನಾಗರಾಜ್, ಮತ್ತಿತರರು ಭಾಗಿವಹಿಸಿದ್ದರು.