ಗುಣಮಟ್ಟದ ಮೇಲೆ ವಿವೇಕಯುತ ಹೂಡಿಕೆ ಅಗತ್ಯ

| Published : Sep 20 2025, 01:00 AM IST

ಗುಣಮಟ್ಟದ ಮೇಲೆ ವಿವೇಕಯುತ ಹೂಡಿಕೆ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕಟ್ಟಡ ನಿರ್ಮಾಣಕ್ಕೆ ಬಳಸುವ ವಸ್ತುಗಳ ಗುಣಮಟ್ಟವು ಬಾಳಿಕೆ, ದಕ್ಷತೆ ಮೇಲೆ ಪ್ರಭಾವ ಬೀರುತ್ತದೆ. ನಿರ್ಮಾಣ ಸಾಮಗ್ರಿಗಳನ್ನು ಆಯ್ಕೆ ಮಾಡುವುದು ಕೇವಲ ಆಯ್ಕೆಯಲ್ಲ, ಬದಲಾಗಿ ಗಣನೀಯ ದೀರ್ಘಕಾಲೀನ ಪ್ರಯೋಜನಗಳನ್ನು ನೀಡುವ ವಿವೇಕಯುತ ಹೂಡಿಕೆಯಾಗಿದೆ ಎಂದು ಮಾಜಿ ಉಪ ಮಖಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ಶಿವಮೊಗ್ಗ: ಕಟ್ಟಡ ನಿರ್ಮಾಣಕ್ಕೆ ಬಳಸುವ ವಸ್ತುಗಳ ಗುಣಮಟ್ಟವು ಬಾಳಿಕೆ, ದಕ್ಷತೆ ಮೇಲೆ ಪ್ರಭಾವ ಬೀರುತ್ತದೆ. ನಿರ್ಮಾಣ ಸಾಮಗ್ರಿಗಳನ್ನು ಆಯ್ಕೆ ಮಾಡುವುದು ಕೇವಲ ಆಯ್ಕೆಯಲ್ಲ, ಬದಲಾಗಿ ಗಣನೀಯ ದೀರ್ಘಕಾಲೀನ ಪ್ರಯೋಜನಗಳನ್ನು ನೀಡುವ ವಿವೇಕಯುತ ಹೂಡಿಕೆಯಾಗಿದೆ ಎಂದು ಮಾಜಿ ಉಪ ಮಖಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ಅಸೋಸಿಯೇಷನ್ ಆಫ್ ಎಂಜಿನಿಯರ್ಸ್‌ ಅಂಡ್ ಆರ್ಕಿಟೆಕ್ಟ್ಸ್(ಎಸಿಇಎ) ಮತ್ತು ಯುಎಸ್ ಕಮ್ಯೂನಿಕೇಷನ್‌ನ ಸಹಯೋಗದಲ್ಲಿ ಸೆ.21ರವರೆಗೆ ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಹಮ್ಮಿಕೊಂಡಿರುವ ಕಟ್ಟಡ ಸಾಮಾಗ್ರಿಗಳು, ಒಳ- ಹೊರ ವಿನ್ಯಾಸ, ಪೀಠೋಪಕರಣಗಳು, ಗೃಹಸಾಲ ಸೇರಿದಂತೆ ಹಲವಾರು ಸಾಮಾಗ್ರಿಗಳ ಎಸಿಇಎ-ಕಾನ್ ವಸ್ತು ಪ್ರದರ್ಶನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಉನ್ನತ ಗುಣಮಟ್ಟದ ಕಟ್ಟಡ ಸಾಮಗ್ರಿಗಳನ್ನು ಹೆಚ್ಚಾಗಿ ಸುಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ಉತ್ಪಾದಿಸಲಾಗುತ್ತದೆ. ಉತ್ಪಾದನಾ ಪ್ರಕ್ರಿಯೆ ಮತ್ತು ಕಟ್ಟಡದ ಬಾಳಿಕೆ ಎರಡರಲ್ಲೂ ತ್ಯಾಜ್ಯ ಮತ್ತು ಶಕ್ತಿಯ ಬಳಕೆಯನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಲಾಗುತ್ತದೆ. ಪ್ರೀಮಿಯಂ ಗುಣಮಟ್ಟದ ಕಟ್ಟಡ ಸಾಮಗ್ರಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಪರಿಸರ ಸುಸ್ಥಿರತೆಗೂ ಆದ್ಯತೆ ನೀಡಬೇಕು ಎಂದರು.

ವೇದಿಕೆಯಲ್ಲಿ ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೆಶ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ಅಸೋಸಿಯೇಷನ್ ಆಫ್ ಎಂಜಿನಿಯರ್ಸ್‌ ಅಂಡ್ ಆರ್ಕಿಟೆಕ್ಟ್ಸ್ ಅಧ್ಯಕ್ಷ ರುದ್ರಪ್ಪ.ಜಿ, ಕಾರ್ಯದರ್ಶಿ ವೀರೇಂದ್ರ ಕುಮಾರ್, ಖಜಾಂಚಿ ಎಸ್.ಶರತ್, ಯುಎಸ್ ಕಮ್ಯೂನಿಕೇಷನ್‌ನ ಉಮಾಪತಿ ಉಪಸ್ಥಿತರಿದ್ದರು.

ಎಚ್‌.ಬಿ.ಚೇತನ ಪ್ರಾರ್ಥಿಸಿದರು. ವಿಜಯ್ ಗುಪ್ತ ಸ್ವಾಗತಿಸಿದರು. ಎಂ.ಆರ್.ರಾಜೇಂದ್ರ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಿಯಾ ಚೇತನ್ ನಿರೂಪಿಸಿದರು. ವೀರೇಂದ್ರ ವಂದಿಸಿದರು.