ಸಾರಾಂಶ
ನೆರೆ ಮನೆಯವರ ಮಾನಸಿಕ ಕಿರುಕುಳಕ್ಕೆ ಬೇಸತ್ತ ಯುವತಿ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ತಾಲೂಕಿನ ಚನ್ನಮಲ್ಲೀಪುರ ಗ್ರಾಮದಲ್ಲಿ ನಡೆದಿದೆ.
ಗುಂಡ್ಲುಪೇಟೆ: ನೆರೆ ಮನೆಯವರ ಮಾನಸಿಕ ಕಿರುಕುಳಕ್ಕೆ ಬೇಸತ್ತ ಯುವತಿ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ತಾಲೂಕಿನ ಚನ್ನಮಲ್ಲೀಪುರ ಗ್ರಾಮದಲ್ಲಿ ನಡೆದಿದೆ.
ಚನ್ನಮಲ್ಲೀಪುರ ಗ್ರಾಮದ ಗಾಯತ್ರಿಯ ಪುತ್ರಿ ಕವನ (24) ಸಾವನ್ನಪ್ಪಿದ ಯುವತಿ. ಈಕೆ ಮಾತ್ರೆ ನುಂಗಿ ನಿತ್ರಾಣಗೊಳ್ಳುವುದಕ್ಕೆ ಮುಂಚೆ ಬಿಳಿ ಹಾಳೆಯಲ್ಲಿ ಹಾಗೂ ಬಾಗಿಲ ಹಿಂಭಾಗದಲ್ಲಿ ನನ್ನ ಸಾವಿಗೆ ಕಾರಣ ಕಾವೇರಿ, ಕೀರ್ತಿ, ಕವಿತ, ವೃಷಬೇಂದ್ರ ಎಂದು ಡೆತ್ ನೋಟ್ ಬರೆದಿಟ್ಟಿದ್ದಾಳೆ. ಈ ಸಂಬಂಧ ಗುಂಡ್ಲುಪೇಟೆ ಠಾಣೆಗೆ ಮೃತ ಕವನಳ ತಾಯಿ ಗಾಯತ್ರಿ ನನ್ನ ಮಗಳ ಸಾವಿಗೆ ವೃಷಬೇಂದ್ರ, ವೃಷಬೇಂದ್ರ ಪತ್ನಿ ಕವಿತ, ವೃಷಬೇಂದ್ರನ ಮಕ್ಕಳಾದ ಕಾವೇರಿ, ಕೀರ್ತಿ ಕಾರಣರಾಗಿದ್ದಾರೆ ಎಂದು ದೂರು ನೀಡಿದ್ದಾರೆ.ಗಾಯತ್ರಿ ದೂರಿನ ಮೇರೆಗೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತ (ಬಿಎನ್‌ಎಸ್)ಯಡಿ ಯು/ಎಸ್ 108,3(5) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ಏನಿದು ಘಟನೆ?:
ಜ.25ರಂದು ಗಾಯತ್ರಿ ಕೂಲಿಗೆ ಹೋಗಿದ್ದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಕವನ ಮನೆಯ ಎರಡು ಬಾಗಿಲಿಗೆ ಚಿಲಕ ಹಾಕಿ ಮಾತ್ರೆ ನುಂಗಿ ನಿತ್ರಾಣಲಾಗಿದ್ದಳು. ಕವನಳ ಸಹೋದರಿ ಕಾವ್ಯಗೆ ಕವನ ಜ.25ರ ಬೆಳಗ್ಗೆ ಮೊಬೈಲ್ ನಲ್ಲಿ ವಿಡಿಯೋ ಕಾಲ್ ಮಾಡಿ ನನಗೆ ಅವಮಾನವಾಗಿದೆ ಮಾತ್ರೆ ನುಂಗಿ ಕೊಂಡಿದ್ದೀನೆ ಎಂದು ಹೇಳಿದ್ದಾಳೆ ಎನ್ನಲಾಗಿದೆ.ಕೆಲಸಕ್ಕೆ ಹೋಗಿದ್ದ ಕಾವ್ಯಳ ತಾಯಿ ಗಾಯತ್ರಿಗೆ ಮೊಬೈಲ್ ಮೂಲಕ ಸಂಪರ್ಕಿಸಿ ಕವನ ಮಾತ್ರೆ ನುಂಗಿದ್ದೀನಿ ಎಂದಿದ್ದಾಳೆ. ಬೇಗ ಮನೆಗೆ ಹೋಗು ಎಂದಾಗ ಕವನ ನಿತ್ರಾಣಗೊಂಡ ರೀತಿಯಲ್ಲಿ ಕಂಡಿದ್ದಾಳೆ. ಆಗ ಆಸ್ಪತ್ರೆಗೆ ಸೇರಿಸಿದ್ದಾರೆ.
ಕಾರಣವೇನು?:ವೃಷಬೇಂದ್ರನ ಮಗಳಾದ ಕಾವೇರಿಗೆ ಮದುವೆಯಾಗಿತ್ತು. ಕಾವೇರಿಗೆ ಚನ್ನಮಲ್ಲೀಪುರದ ನಂದೀಶ್ ಜೊತೆ ಸ್ನೇಹವಿತ್ತು. ಮದುವೆಯಾದರೂ ನಂದೀಶ್ ಮೊಬೈಲ್‌ನಲ್ಲಿ ಚಾಟ್ ಮಾಡುತ್ತಿದ್ದರು. ಕವನಳಿಗೆ ಮೆಸೇಜ್ ತೋರಿಸಿ ವೃಷಬೇಂದ್ರ ಆತನ ಪತ್ನಿ, ಪುತ್ರಿಯರು ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.