ರಾಮನಗರ: ಪ್ರಸಕ್ತ ಸಾಲಿನ ದ್ವಿತೀಯ ಪಿಯು ಫಲಿತಾಂಶ ಗುರುವಾರ ಪ್ರಕಟವಾಗಿದ್ದು ಬೆಂಗಳೂರು ದಕ್ಷಿಣ ಜಿಲ್ಲೆಯು ಶೇ. 87.90 ರಷ್ಟು ಫಲಿತಾಂಶದೊಂದಿಗೆ ರಾಜ್ಯದಲ್ಲಿ 13ನೇ ಸ್ಥಾನ ಅಲಂಕರಿಸಿದೆ.
2025ರಲ್ಲಿ ಶೇ.69.71ರಷ್ಟು ಫಲಿತಾಂಶದೊಂದಿಗೆ 19ನೇ ಸ್ಥಾನದಲ್ಲಿದ್ದ ಜಿಲ್ಲೆಯು, 2026ನೇ ಸಾಲಿನಲ್ಲಿ ಶೇ.87.9ರಷ್ಟು ಫಲಿತಾಂಶದೊಂದಿಗೆ 13ನೇ ಸ್ಥಾನಕ್ಕೆ ಏರಿಕೆ ಕಂಡಿದೆ. 2025ನೇ ಸಾಲಿಗೆ (ಶೇ.69.71) ಹೋಲಿಸಿದರೆ 2026ರಲ್ಲಿ (ಶೇ.87.90) ಶೇಕಡ 18.19ರಷ್ಟು ಹೆಚ್ಚುವರಿ ಫಲಿತಾಂಶ ಪಡೆದುಕೊಂಡಿದೆ.ಹೊಸದಾಗಿ ಪರೀಕ್ಷೆ ಬರೆದ 7288 ವಿದ್ಯಾರ್ಥಿಗಳ ಪೈಕಿ 6406 (ಶೇ 87.9) ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಖಾಸಗಿ ಅಭ್ಯರ್ಥಿಗಳು ಶೇ 42.41 ಹಾಗೂ ಪುನರಾವರ್ತಿತ ಅಭ್ಯರ್ಥಿಗಳು ಶೇ. 26.21 ರಷ್ಟು ತೇರ್ಗಡೆಯಾಗಿದ್ದಾರೆ.
ಬಾಲಕಿಯರೇ ಮೇಲುಗೈ:ಪ್ರತಿ ಬಾರಿಯಂತೆ ಈ ಬಾರಿಯೂ ಜಿಲ್ಲೆಯಲ್ಲಿ ಉತ್ತೀರ್ಣರಾಗಿರುವವರ ಪೈಕಿ ಬಾಲಕಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪರೀಕ್ಷೆ ಬರೆದ 4,925 ಬಾಲಕಿಯರ ಪೈಕಿ 4160 (ಶೇ.84.47) ಹಾಗೂ 3,284 ಬಾಲಕರ ಪೈಕಿ 2,513 (ಶೇ.76.52) ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಇದರಲ್ಲಿ 5423 ಮಂದಿ ಆಂಗ್ಲ ಭಾಷೆಯಲ್ಲಿ ಪರೀಕ್ಷೆ ಬರೆದಿದ್ದು 4611 ಉತ್ತೀರ್ಣರಾಗಿ ಶೇ.85.03 ಫಲಿತಾಂಶ ದಾಖಲು ಮಾಡಿದ್ದಾರೆ. 2786 ಮಂದಿ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆದಿದ್ದು 2062 ಮಂದಿ ಮಾತ್ರ ಉತೀರ್ಣರಾಗಿ ಶೇ.74.01 ಫಲಿತಾಂಶ ದಾಖಲು ಮಾಡಿದ್ದಾರೆ.
ವಿಜ್ಞಾನ ವಿದ್ಯಾರ್ಥಿಗಳು ಮುಂದು :
ಪ್ರತಿ ವರ್ಷ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸುತ್ತಿದ್ದರು. ಆದರೆ, ಈ ಬಾರಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಯಲ್ಲಿ ಒಟ್ಟು 3660 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 3,110 ಮಂದಿ ಪಾಸಾಗುವ ಮೂಲಕ ಶೇ.84.97ರಷ್ಟು ಫಲಿತಾಂಶ ದಾಖಲು ಮಾಡಿದೆ. ಆ ಮೂಲಕ ವಾಣಿಜ್ಯ ವಿಭಾಗ ಮೊದಲ ಸ್ಥಾನ ಪಡೆದುಕೊಂಡಿದೆ.
ಇದರಲ್ಲಿ 1,553 ಮಂದಿ ಬಾಲಕರ ಪೈಕಿ 1,222 ಮಂದಿ ಉತ್ತೀರ್ಣರಾಗುವ ಮೂಲಕ ಶೇ.78.69ರಷ್ಟು ಫಲಿತಾಂಶ ದಾಖಲಿಸಿದರೆ, 2,107 ಬಾಲಕಿಯರು ಪರೀಕ್ಷೆ ಬರೆದಿದ್ದು 1,888 ಮಂದಿ ಉತ್ತೀರ್ಣರಾಗಿ ಶೇ.89.61ಫಲಿತಾಂಶ ದಾಖಲು ಮಾಡಿದ್ದಾರೆ.ವಿಜ್ಞಾನ ವಿಭಾಗದಲ್ಲಿ ಜಿಲ್ಲೆಯಲ್ಲಿ ಒಟ್ಟು 2,780 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 2,353 ಮಂದಿ ಪಾಸಾಗುವ ಮೂಲಕ ಶೇ.84.64 ರಷ್ಟು ಫಲಿತಾಂಶ ದಾಖಲು ಮಾಡಿದ್ದಾರೆ. ಈ ಮೂಲಕ ವಿಜ್ಞಾನ ವಿಭಾಗ ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಇದರಲ್ಲಿ 1036 ಬಾಲಕರ ಪೈಕಿ 874 ಮಂದಿ ಉತ್ತೀರ್ಣರಾಗುವ ಮೂಲಕ ಶೇ.84.36 ರಷ್ಟು ಫಲಿತಾಂಶ ದಾಖಲು ಮಾಡಿದ್ದಾರೆ. 1,744 ಬಾಲಕಿಯರಲ್ಲಿ 1,479 ಮಂದಿ ಉತ್ತೀರ್ಣರಾಗಿ ಶೇ.84.81 ಫಲಿತಾಂಶ ದಾಖಲು ಮಾಡಿದ್ದಾರೆ.ಕಲಾ ವಿಭಾಗದಲ್ಲಿ 1769 ಮಂದಿ ಪರೀಕ್ಷೆ ತೆಗೆದುಕೊಂಡಿದ್ದು ಇದರಲ್ಲಿ 1,210 ಮಂದಿಯಷ್ಟೇ ಉತ್ತೀರ್ಣರಾಗಿದ್ದಾರೆ. ಆ ಮೂಲಕ ಶೇ.68.04ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ಇದರಲ್ಲಿ 695 ಮಂದಿ ಬಾಲಕರು ಪರೀಕ್ಷೆ ತೆಗೆದುಕೊಂಡಿದ್ದು 417 ಮಂದಿ ಮಾತ್ರ (ಶೇ.60)ಉತ್ತೀರ್ಣರಾಗಿದ್ದಾರೆ. 1074 ಬಾಲಕಿಯರು ಪರೀಕ್ಷೆ ತೆಗೆದುಕೊಂಡಿದ್ದು 793 ಮಂದಿ ಮಾತ್ರ (ಶೇ.73.84) ಉತ್ತೀರ್ಣರಾಗದ್ದಾರೆ. ಕಲಾವಿಭಾಗ ಈ ಬಾರಿಯೂ ಫಲಿತಾಂಶದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.
ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳ ಮೇಲುಗೈ :ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗಿಂತ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದ 5,423 ವಿದ್ಯಾರ್ಥಿಗಳಲ್ಲಿ 4,611 (ಶೇ.85.03) ಹಾಗೂ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ 2,786 ವಿದ್ಯಾರ್ಥಿಗಳಲ್ಲಿ 2062 (ಶೇ.74.01) ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ನಗರ ವಿದ್ಯಾರ್ಥಿಗಳೇ ಮೇಲುಗೈ :ನಗರ ಪ್ರದೇಶದ 2484 ವಿದ್ಯಾರ್ಥಿಗಳ ಪೈಕಿ 2234 (ಶೇ.89.94) ಉತ್ತೀರ್ಣರಾಗಿದ್ದರೆ, ಗ್ರಾಮೀಣ ಪ್ರದೇಶದ 4804 ವಿದ್ಯಾರ್ಥಿಗಳ ಪೈಕಿ 4172 (ಶೇ.86.84) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕೋಟ್ ...ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಗೆ ಶೇ.87.90ರಷ್ಟು ಫಲಿತಾಂಶ ಪಡೆದುಕೊಂಡಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಯ ಫಲಿತಾಂಶದಲ್ಲಿ ಏರಿಕೆ ಕಂಡಿರುವುದು ತೃಪ್ತಿ ತಂದಿದೆ.
- ಎಂ.ಮರಿಸ್ವಾಮಿ, ಉಪ ನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆ, ಬೆಂ.ದಕ್ಷಿಣ ಜಿಲ್ಲೆಶೂನ್ಯ ಸಂಪಾದನೆ ಇಲ್ಲ :
ಇನ್ನು ಜಿಲ್ಲೆಯ ಪದವಿಪೂರ್ವ ಕಾಲೇಜುಗಳ ಪೈಕಿ ಯಾವೊಂದು ಕಾಲೇಜು ಸಹ ಶೂನ್ಯ ಫಲಿತಾಂಶ ಪಡೆದುಕೊಂಡಿಲ್ಲ.ದ್ವಿತೀಯ ಪಿಯು ವಿಷಯವಾರು ಫಲಿತಾಂಶ
ವಿಷಯಹಾಜರಾದವರುಉತ್ತೀರ್ಣರಾದವರುಶೇಕಡಾಫಲಿತಾಂಶವಿಜ್ಞಾನ2,7802,35384.64
ವಾಣಿಜ್ಯ3,6603,11084.97ಕಲಾ1769121068.04
