ಸಾರಾಂಶ
ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು ಎನ್ನುವುದು ನಮ್ಮೆಲ್ಲರ ಬೇಡಿಕೆಯಾಗಿದೆ. ಕಾಮಗಾರಿಯ ನೀಲ ನಕ್ಷೆಯ ಪ್ರತಿ ನೀಡಿ ಕಾಮಗಾರಿ ಕೈಗೊಳ್ಳಬೇಕು, ಇಲ್ಲವಾದಲ್ಲಿ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ದೂದಪೀರಾ ದರ್ಗಾದ ಹತ್ತಿರ ಸಾರ್ವಜನಿಕರು ರಸ್ತೆ ಕಾಮಗಾರಿ ತಡೆದು ಪ್ರತಿಭಟನೆ ನಡೆಸಿದರು.
ಲಕ್ಷ್ಮೇಶ್ವರ: ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು ಎನ್ನುವುದು ನಮ್ಮೆಲ್ಲರ ಬೇಡಿಕೆಯಾಗಿದೆ. ಕಾಮಗಾರಿಯ ನೀಲ ನಕ್ಷೆಯ ಪ್ರತಿ ನೀಡಿ ಕಾಮಗಾರಿ ಕೈಗೊಳ್ಳಬೇಕು, ಇಲ್ಲವಾದಲ್ಲಿ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ದೂದಪೀರಾ ದರ್ಗಾದ ಹತ್ತಿರ ಸಾರ್ವಜನಿಕರು ರಸ್ತೆ ಕಾಮಗಾರಿ ತಡೆದು ಪ್ರತಿಭಟನೆ ನಡೆಸಿದರು.
ಈ ವೇಳೆ ನಾಗರಾಜ ಚಿಂಚಲಿ ಹಾಗೂ ಮಂಜುನಾಥ ಮಾಗಡಿ ಮಾತನಾಡಿ, ಪಟ್ಟಣದಲ್ಲಿನ ಹಲವು ರಸ್ತೆಗಳು ಹದಗೆಟ್ಟು ಹೋಗಿದ್ದು ಬ್ರಹ್ಮದೇವರ ವೃತ್ತದಿಂದ ಕೆಂಚಾಲಪೂರ ಓಣಿಯವರೆಗೆ ಸುಮಾರು 2 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದು. ಕೆಆರ್‌ಐಡಿಎಲ್ ಸಂಸ್ಥೆಯ ಗುತ್ತಿಗೆದಾರರು ಸರಿಯಾದ ಹಾಗೂ ಗುಣಮಟ್ಟದ ಕಾಮಗಾರಿ ಮಾಡಬೇಕು ಎನ್ನುವುದು ನಮ್ಮೆಲ್ಲರ ಬೇಡಿಕೆಯಾಗಿದೆ. ಅಲ್ಲದೆ ಕಾಮಗಾರಿಯ ಎಸ್ಟಿಮೇಟ್ ಪ್ರತಿಯಲ್ಲಿ ಯಾವ ಪ್ರಮಾಣದಲ್ಲಿ ರಸ್ತೆ ನಿರ್ಮಿಸಬೇಕು ಎನ್ನುವ ಮಾಹಿತಿ ಇದ್ದು ಅದನ್ನು ನೀಡಿ ಕಾಮಗಾರಿ ಆರಂಭಿಸಬೇಕು, ಯಾಕೆಂದರೆ ಗುತ್ತಿಗೆದಾರರು ಯಾವ ವಸ್ತುಗಳನ್ನು ಯಾವ ಪ್ರಮಾಣದಲ್ಲಿ ಬಳಸಬೇಕು ಎನ್ನುವ ಮಾಹಿತಿಯ ಪ್ರತಿ ನೀಡಿ ಕೆಲಸ ಆರಂಭಿಸಬೇಕು, ಇಲ್ಲವಾದಲ್ಲಿ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ಜೆಸಿಬಿ ವಾಹನದ ಎದುರು ಅವರು ಕಾಮಗಾರಿಗೆ ತಡೆದು ಪ್ರತಿಭಟನೆ ನಡೆಸಿದರು.ಈ ವೇಳೆ ಸುಭಾನಸಾಬ್ ಹೊಂಬಳ, ಗಣೇಶ ನೂಲ್ವಿ, ರಾಜು ಲಿಂಬಿಕಾಯಿ, ಈರಣ್ಣ ಹುಲಕೋಟಿ, ಸೋಮು ಕರೆಯತ್ತಿನ, ಲಕ್ಷ್ಮವ್ವ ಕರೆಯತ್ತಿನ, ಶೇಖವ್ವ ನೂಲ್ವಿ, ಲಕ್ಷ್ಮವ್ವ ಬೇವಿನಮರದ, ಲಕ್ಷ್ಮವ್ವ ಕೊಂಗಿ, ಗಿರಿಜವ್ವ ಹರಪನಹಳ್ಳಿ, ರತ್ನವ್ವ ನೂಲ್ವಿ, ಗಿರಿಜವ್ವ ಹುಲಕೋಟಿ, ಚನ್ನವ್ವ ನಾಗಲೋಟಿ, ನೀಲವ್ವ ಹುಲಕೋಟಿ, ಶೈಲಾ ಪಾಣಿಗಟ್ಟಿ ಅನೇಕರು ಇದ್ದರು.