ಪುರಸಭೆ ಕಛೇರಿಯಲ್ಲಿ ನಡೆದ ಬಜೆಟ್ ಧ್ವಿತೀಯ ಪೂರ್ವಭಾವಿ ಆಯ-ವ್ಯಯ ಸಭೆಕನ್ನಡಪ್ರಭ ವಾರ್ತೆ,ಬೀರೂರು.ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿರುವುರಿಂದಾಗಿ ವಾಹನ ದಟ್ಟಣೆಯು ಹೆಚ್ಚಾದ ಪರಿಣಾಮ ವಾಹನಗಳ ಪಾರ್ಕಿಂಗ್ ಸಮಸ್ಯೆಯಾಗುತ್ತಿದ್ದು ಪುರಸಭೆ ಈ ವಿಷಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.ಮಂಗಳವಾರ ಪುರಸಭೆ ಮುಖ್ಯಾಧಿಕಾರಿ ಕಚೇರಿಯಲ್ಲಿ ಬಜೆಟ್ 2ನೇ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ‍್ಯದರ್ಶಿ ಬಿ.ಟಿ.ಚಂದ್ರಶೇಖರ್ ಪಟ್ಟಣದ ಬಿ.ಎಚ್.ರಸ್ತೆ , ಅಜ್ಜಂಪುರ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಲು ಪಾರ್ಕಿಗ್ ವ್ಯವಸ್ಥೆ ಇಲ್ಲದ ಕಾರಣ ನಾಡಕಚೇರಿ, ಪುರಸಭೆ, ಮಹಾತ್ಮ ಗಾಂಧಿ ವೃತ್ತ ಮತ್ತು ಕೆಎಸ್.ಆರ್.ಟಿಸಿ ಬಸ್ ನಿಲ್ದಾಣ, ಸಾರ್ವಜನಿಕ ಆಸ್ಪತ್ರೆ ಮುಂಭಾಗ ನಿಲುಗಡೆ ಮಾಡುತ್ತಿರುವ ಪರಿಣಾಮ ಸಂಚಾರ ದಟ್ಟನೆಯಿಂದ ಕಚೇರಿಗೆ ತೆರಳಲು, ಮತ್ತಿತರ ಕೆಲಸಗಳಿಗೆ ತೊಂದರೆಯಾಗುತ್ತಿದೆ. ಪುರಸಭೆ ಅಧಿಕಾರಿಗಳು ಪಾರ್ಕಿಂಗ್ ಜಾಗ ಗುರುತು ಮಾಡಿದರೆ ಅಡ್ಡಾದಿಡ್ಡಿ , ನೊ ಪಾರ್ಕಿಗ್ ನಲ್ಲಿ ನಿಲ್ಲಿಸಿದ ವಾಹನಗಳಿಗೆ ದಂಡ ಹಾಕಲು ಅನುವಾಗುತ್ತದೆ. ಎಂದು ಮನವಿ ಮಾಡಿದರು.ಪುರಸಭೆ ಆಶ್ರಯ ಸಮಿತಿ ಸದಸ್ಯ ಎನ್. ಮುಬಾರಕ್ ಮಾತನಾಡಿ, ಪಟ್ಟಣದಲ್ಲಿ ಸಂತೆಗಾಗಿ ವಿಶಾಲ ಮೈದಾನವಿದ್ದರೂ ಶನಿವಾರ ಸಂತೆವೇಳೆ ವರ್ತಕರು ಬಿ.ಎಚ್.ರಸ್ತೆ ಪಕ್ಕದಲ್ಲೇ ಅಂಗಡಿ ಹಾಕುತ್ತಾರೆ ಇದರಿಂದ ಪಕ್ಕದ ಪ್ರೌಢಶಾಲೆ ಮಕ್ಕಳಿಗೆ ಒಡಾಡಲು ತೊಂದರೆಯಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಯಾಗಿರುವುದರಿಂದ ಅನಾಹುತಗಳಾದರೆ ಯಾರು ಹೊಣೆ, ಪುರಸಭೆ ಮುಖ್ಯಾಧಿಕಾರಿ ಮತ್ತು ಆರೋಗ್ಯ ನಿರೀಕ್ಷಕರು ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಅನಿವಾರ್ಯ ಎಂದರು.ರೈಲ್ವೆ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ಮಾರ್ಗ ಸೂಚಿ ಫಲಕ ಕಾಣದೆ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಕಲ್ಲತ್ತಿಗಿರಿ ಮತ್ತು ಕೆಮ್ಮಣ್ಣು ಗುಂಡಿಗೆ ತೆರಳುವ ಪ್ರಯಾಣಿಕರೂ ಪರದಾಡುವ ಸ್ಥಿತಿ ಇದ್ದು ಶೀಘ್ರ ನಾಮ ಫಲಕ ಅಳವಡಿಸಿ ಎಂದರು.ಮುಖ್ಯಾಧಿಕಾರಿ ಜಿ.ಪ್ರಕಾಶ್, ಶೀಘ್ರದಲ್ಲೇ ವಾಹನಗಳ ಪಾರ್ಕಿಂಗ್‌ಗೆ ಸ್ಥಳ ನಿಗದಿ ಪಡಿಸಿ ಪೊಲೀಸ್ ಇಲಾಖೆಗೆ ನೀಡಲಾಗುವುದು. ಮುಂದಿನ ಆಯ-ವ್ಯಯದಲ್ಲಿ ಮಹಾತ್ಮ ಗಾಂಧಿ ವೃತ್ತ, ಅಜ್ಜಂಪುರ , ಲಿಂಗದಹಳ್ಳಿ ರಸ್ತೆ ಹಾಗೂ ಇಂದಿರಾ ಕ್ಯಾಂಟೀನ್ ಹತ್ತಿರ ನಾಮಫಲಕ ಅಳವಡಿಸಲು ಶಾಸಕರು ಮತ್ತು ಎಸಿ ಸಲಹೆ ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಸಭೆಯಲ್ಲಿ ಪುರಸಭೆ ಪರಿಸರ ಅಭಿಯಂತರ ನೂರುದ್ದೀನ್, ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷö್ಮಣ್, ಮಾಜಿ ಸದಸ್ಯರಾದ ಜಿಮ್ ರಾಜು, ರುದ್ರಪ್ಪ, ಬಸಣ್ಣ, ಕೆ.ಹೆಚ್.ಜಗದೀಶ್, ಸೇರಿದಂತೆ ಪುರಸಭಾ ಸಿಬ್ಬಂದಿ ಇದ್ದರು.10ಬೀರೂರು 1ಬೀರೂರು ಪುರಸಭೆ ಕಚೇರಿಯಲ್ಲಿ ಮಂಗಳವಾರ ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ಅಧ್ಯಕ್ಷತೆಯಲ್ಲಿ ಬಜೆಟ್ ಧ್ವಿತೀಯ ಪೂರ್ವಭಾವಿ ಸಭೆ ನಡೆಯಿತು. ಬಿ.ಟಿ.ಚಂದ್ರಶೇಖರ್, ಎನ್.ಮುಬಾರಕ್ ಮತ್ತಿತರಿದ್ದರು.
ವಾಹನ ಪಾರ್ಕಿಂಗ್ ಸ್ಥಳ ನಿಗದಿಗೆ ಸಾರ್ವಜನಿಕರ ಒತ್ತಾಯ
ಬೀರೂರು.ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿರುವುರಿಂದಾಗಿ ವಾಹನ ದಟ್ಟಣೆಯು ಹೆಚ್ಚಾದ ಪರಿಣಾಮ ವಾಹನಗಳ ಪಾರ್ಕಿಂಗ್ ಸಮಸ್ಯೆಯಾಗುತ್ತಿದ್ದು ಪುರಸಭೆ ಈ ವಿಷಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.