ಸಾರಾಂಶ
ಪೌರ ಕಾರ್ಮಿಕರು ಹಾಗೂ ನೀರುಗಂಟಿಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಅವರಿಗೆ ಸರಿಯಾಗಿ ವೇತನ ನೀಡದಿರುವ ಬಗ್ಗೆ ಪೌರ ಕಾರ್ಮಿಕರು ಗುತ್ತಿಗೆದಾರರ ವಿರುದ್ಧ ದೂರಿದ್ದಾರೆ. ಪುರಸಭೆ ಮುಖ್ಯಾಧಿಕಾರಿಗಳು ಗುತ್ತಿಗೆದಾರರ ವಿರುದ್ಧ ಕ್ರಮ ವಹಿಸಬೇಕು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ವಿಳಂಬದ ಬಗ್ಗೆ ಪುರಸಭೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಪುರಸಭೆ ಸಭಾಂಗಣದಲ್ಲಿ ಪ್ರಭಾರ ಅಧ್ಯಕ್ಷ ಎಂ.ಎಲ್.ದಿನೇಶ್ ನೇತೃತ್ವದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆ ನಡೆಯಿತು.ಕುಡಿಯುವ ನೀರು ರಸ್ತೆ ಚರಂಡಿ ಹಾಗೂ ಒಳ ಚರಂಡಿಗಳ ಅಭಿವೃದ್ಧಿ ಕಾಮಗಾರಿಗಳ ವಿಳಂಭವಾಗಿದ್ದು, ತ್ವರಿತವಾಗಿ ಕಾಮಗಾರಿ ನಡೆಸುವ ಕುರಿತು ಸದಸ್ಯರು ಚರ್ಚೆ ನಡೆಸಿ ಒತ್ತಾಯಿಸಿದರು.
ಪೌರ ಕಾರ್ಮಿಕರು ಹಾಗೂ ನೀರುಗಂಟಿಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಅವರಿಗೆ ಸರಿಯಾಗಿ ವೇತನ ನೀಡದಿರುವ ಬಗ್ಗೆ ಪೌರ ಕಾರ್ಮಿಕರು ಗುತ್ತಿಗೆದಾರರ ವಿರುದ್ಧ ದೂರಿದ್ದಾರೆ. ಪುರಸಭೆ ಮುಖ್ಯಾಧಿಕಾರಿಗಳು ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಪುರಸಭಾ ಸದಸ್ಯ ಎಸ್. ಪ್ರಕಾಶ್ ಒತ್ತಾಯಿಸಿದರು.ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಕೆಲವು ವಾರ್ಡ್‌ಗಳಲ್ಲಿ ಜಾಗದ ಸಮಸ್ಯೆ ಇದ್ದು, ತಮ್ಮ ವಾರ್ಡ್ ನಲ್ಲಿ ಜಾಗವಿದ್ದರೆ ಅಲ್ಲಿನ ಸದಸ್ಯರ ಜೊತೆಗೂಡಿ ಅದನ್ನು ಗುರುತಿಸಿ ಅಂಗನವಾಡಿ ನಿರ್ಮಾಣಕ್ಕೆ ಜಾಗ ನೀಡಲು ಮುಂದಾಗಬೇಕು. ಜೊತೆಗೆ ಪಟ್ಟಣ ಹಾಗೂ ಗಂಜಾಂನ ಸ್ಮಶಾನ ಅಭಿವೃದ್ಧಿಗೆ ಈಗಾಗಲೇ ಹಣ ಬಿಡುಗಡೆಯಾಗಿದ್ದರೂ ಕಾಮಗಾರಿಗಳು ವಿಳಂಭವಾಗಿ ನಡೆಯುತ್ತಿರುವುದರಿಂದ ಅವುಗಳನ್ನು ತ್ವರಿತವಾಗಿ ನಡೆಸುವಂತೆ ತಾಕೀತು ಮಾಡಿದರು.
ಚಂದಗಾಲು ಬಳಿಯ ಕಾವೇರಿ ನದಿಯಿಂದ ಗಂಜಾಂನ ನೀರು ಸರಬರಾಜು ಆಗುವ ಘಟಕಕ್ಕೆ ಮೈಸೂರು ಕೊಳಚೆ ನೀರು ಮಿಶ್ರಣವಾಗುತ್ತಿರುವ ಬಗ್ಗೆ ಈ ಹಿಂದೆ ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ಪರಿಶೀಲಿಸಿದ್ದು, ನೀರು ನದಿಯಲ್ಲಿ ಕೊಳಚೆ ಸೇರದಂತೆ ನದಿಗೆ ಬಂಡು ಕಟ್ಟೆ ಕಟ್ಟಿದರೂ ಪ್ರಯೋಜನವಾಗದ ಹಿನ್ನೆಲೆ, ಇದೀಗ ಶಾಸಕರು ಒಂದು ಕೋಟಿ ಅನುದಾನವನ್ನು ತಂದು ಕಾಮಗಾರಿಯನ್ನು ತ್ವರಿತವಾಗಿ ನಡೆಸಲು ಅನುಮತಿ ದೊರೆತಿರುವುದಾಗಿ ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು.ಈ ಸಭೆಯು ಆಡಳಿತ ಮಂಡಳಿಯ ಐದು ವರ್ಷಗಳ ಅವಧಿಯ ಕೊನೆ ಸಭೆ ಇದಾಗಿತ್ತು. ನಂತರದಲ್ಲಿ ಅಧ್ಯಕ್ಷರು ಸದಸ್ಯರನ್ನು ಪುರಸಭೆ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಯಿಂದ ಅಭಿನಂದಿಸಿ ಗೌರವಿಸಲಾಯಿತು.
;Resize=(128,128))
;Resize=(128,128))
;Resize=(128,128))
;Resize=(128,128))