ಸಾರಾಂಶ
ಹಾರೋಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ಜನಸ್ಪಂದನಾ ಸಭೆಯಲ್ಲಿ ಜನರ ವಿವಿಧ ಅಹವಾಲು ಸ್ವೀಕರಿಸಿದರು. ವಿದ್ಯಾಥಿಗಳು ರಾಮನಗರಕ್ಕೆ ತೆರಳಲು ಬಸ್ಸಿನ ವ್ಯವಸ್ಥೆ, ಸ್ಮಶಾನ ನಿರ್ಮಾಣ ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಸಾರ್ವಜನಿಕರು ಶಾಸಕರಿಗೆ ಮನವಿ ಸಲ್ಲಿಸಿದರು.
-ಸ್ಥಳದಲ್ಲೇ ಪರಿಹಾರ
-ಸಾರ್ವಜನಿಕರಿಂದ ಅಹವಾಲು ಸ್ವೀಕಾರಹಾರೋಹಳ್ಳಿ: ಹಾರೋಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ಜನಸ್ಪಂದನಾ ಸಭೆಯಲ್ಲಿ ಜನರ ವಿವಿಧ ಅಹವಾಲು ಸ್ವೀಕರಿಸಿದರು.
ಖಾತೆಗಳು ವಿಳಂಬವಾಗುತ್ತಿವೆ, ಮುತ್ತುರಾಯನಪುರ ಹಾಲು ಉತ್ಪಾದಕ ಸಹಕಾರ ಸಂಘದ ಕಟ್ಟಡಕ್ಕೆ ಜಾಗ, ಪಟ್ಟಣದ ಉರ್ದು ಶಾಲೆ ಸುತ್ತ ಕಾಂಪೌಂಡ್ ನಿಮಾಣ, ವಿದ್ಯಾಥಿಗಳು ರಾಮನಗರಕ್ಕೆ ತೆರಳಲು ಬಸ್ಸಿನ ವ್ಯವಸ್ಥೆ, ಸ್ಮಶಾನ ನಿರ್ಮಾಣ ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಸಾರ್ವಜನಿಕರು ಶಾಸಕರಿಗೆ ಮನವಿ ಸಲ್ಲಿಸಿದರು.ಒಂದಷ್ಟು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿದ ಶಾಸಕ ಇಕ್ಬಾಲ್ ಹುಸೇನ್ ಮುಂದಿನ ಗುರುವಾರವೂ ಜನಸ್ಪಂದನಾ ಸಭೆಯನ್ನು ಹಮ್ಮಿಕೊಳ್ಳಲಿದ್ದು, ಅಲ್ಲಿಯವರೆಗೆ ಬಗೆಹರಿಸಬಹುದಾದ ಸಮಸ್ಯೆಗಳನ್ನು ಶಿಘ್ರವಾಗಿ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ವೇಳೆ ಮಾತನಾಡಿದ ಇಕ್ಬಾಲ್ ಹುಸೇನ್, ಈಗ ತಾನೆ ಚುನಾವಣೆ ಮುಗಿದು ಅಭಿವೃದ್ದಿ ಕೆಲಸಗಳಿಗೆ ಆಧ್ಯತೆ ನೀಡುತ್ತಿದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಯಾವೆಲ್ಲಾ ಕೆಲಸಗಳು ಬಾಕಿ ಇವೆ ಎಂಬುದನ್ನು ಪಟ್ಟಿ ಮಾಡಿಕೊಟ್ಟರೆ ಅನುದಾನ ಒದಗಿಸುವ ಕೆಲಸ ಮಾಡಲಾಗುವುದು, ವಸತಿ ಯೋಜನೆಯಡಿ ಈಗಾಗಲೇ 3000 ಮನೆಗಳನ್ನು ನೀಡಲಾಗಿದ್ದು, ಅವಶ್ಯಕತೆ ಬಿದ್ದರೆ ಇನ್ನಷ್ಟು ಮನೆಗಳಿಗೆ ಅನುದಾನ ಒದಗಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.ಹಾರೋಹಳ್ಳಿ ಈಗಷ್ಟೇ ತಾಲ್ಲೂಕ್ಕಾಗಿದೆ ಮುಂದೆ ತಾಲೂಕು ಕಚೇರಿ ಸೇರಿದಂತೆ ಎಲ್ಲವೂ ಹೊಸದಾಗಿ ನಿಮಾಣಗೊಳ್ಳಬೇಕಿದೆ, ಅದೆಲ್ಲವನ್ನೂ ಮೊದಲು ಪೂರ್ಣಗೊಳಿಸಬೇಕಾಗಿದೆ ಎಂದು ಹೇಳಿದರು.
ತಹಸೀಲ್ದಾರ್ ವಿಜಿಯಣ್ಣ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಟರಾಜು, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.