ಹೆಣ್ಣು ಅಬಲೆ ಅಲ್ಲ ಸಬಲೆ

| Published : Sep 01 2024, 01:46 AM IST

ಸಾರಾಂಶ

ಹೆಣ್ಣು ಅಬಲೆ ಅಲ್ಲ ಸಬಲೆ ಆಗಬೇಕು. ಒಳ್ಳೆಯ ಸಂಸ್ಕಾರಯುತಳಾಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರುಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಂಕಲ್ಪಸೌಧ ಸಭಾಂಗಣದಲ್ಲಿ ಮೈಸೂರು ತಾಲೂಕಿನ ಕಳಸ್ತವಾಡಿ ವಲಯದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ಮತ್ತು ಧಾರ್ಮಿಕ ಸಭೆ ನಡೆಯಿತು.ಶಾಸಕ ಜಿ.ಟಿ. ದೇವೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೆಣ್ಣು ಅಬಲೆ ಅಲ್ಲ ಸಬಲೆ ಆಗಬೇಕು. ಒಳ್ಳೆಯ ಸಂಸ್ಕಾರಯುತಳಾಗಬೇಕು. ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕಾರ, ಸಂಸ್ಕೃತಿ ನೀಡಬೇಕು. ತಾಯಿ ಮನೆಯಲ್ಲಿ ಸಂತೋಷದಲ್ಲಿ ಇದ್ದರೆ ಎಲ್ಲವೂ ಉತ್ತಮವಾಗಿರುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯನ್ನು ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಹುಟ್ಟು ಹಾಕಿರುವುದರಿಂದ ಹೆಣ್ಣು ಮಕ್ಕಳು ಸ್ವತಂತ್ರವಾಗಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ ಎಂದರು.ನೆಮ್ಮದಿಯೇ ಆರೋಗ್ಯಕ್ಕೆ ಮೂಲ. ಸಂತೋಷ ಧೈರ್ಯದ ಜೊತೆಗೆ ದೇವರ ಮೇಲಿನ ಭಕ್ತಿ ಇರಬೇಕು. ಭೂಮಿಗೆ ಬರುವಾಗ ಒಬ್ಬರೇ ಹೋಗುವಾಗ ಒಬ್ಬರೇ ಆದರೆ ಇದರ ಮಧ್ಯದಲ್ಲಿ ನಾವು ಸ್ವರ್ಗ ಕಾಣುತ್ತೇವೆ. ದೇವರು ಮನುಷ್ಯನಿಗೆ ಎಲ್ಲವನ್ನೂ ಕೊಟ್ಟಿರುತ್ತಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಧರ್ಮಾಧಿಕಾರಿಗಳು ಎಲ್ಲರಿಗೂ ಒಳ್ಳೆಯ ಅವಕಾಶ ನೀಡಿದ್ದಾರೆ. ಸರ್ಕಾರದ ಸೌಲಭ್ಯಗಳನ್ನು ಇದರ ಜೊತೆಯಲ್ಲಿ ಒದಗಿಸಲಾಗುತ್ತಿದೆ. ಹಾಗೂ ಅಭಿವೃದ್ಧಿಗೆ ಪೂರಕವಾಗಿ ಸಾಲ ಸೌಲಭ್ಯವನ್ನು ಸರಿಯಾಗಿ ನೀಡಲಾಗಿದೆ. ತಾವೆಲ್ಲರೂ ಉತ್ತಮವಾಗಿ ಬಳಕೆ ಮಾಡಿಕೊಂಡು ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿ ಸಹಕಾರಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಮುಖ್ಯ ಅತಿಥಿಯಾಗಿದ್ದ ವಿದ್ಯಾವಿಕಾಸ ಸಂಸ್ಥೆ ಕಾರ್ಯದರ್ಶಿ ವಿ. ಕವೀಶ್ ಗೌಡ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮ ಎಂದರೆ ಬಹಳ ಅದ್ಭುತವಾಗಿರುತ್ತದೆ. ತಾಯಿಯಾದವಳು ತ್ಯಾಗದ ಫಲವಾಗಿ ಮಕ್ಕಳ ಸಂಸ್ಕಾರ, ಸಂಸ್ಕೃತಿ ಮತ್ತು ಜವಾಬ್ದಾರಿ ಪಡೆಯುತ್ತಾರೆ. ಹಾಗೆಯೇ ಯೋಜನೆಯ ಉದ್ದೇಶವು ಉತ್ತಮ ಸಮಾಜ ನಿರ್ಮಾಣ ಮಾಡುವ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದೆ ಎಂದರು. ಪ್ರಾದೇಶಿಕ ನಿರ್ದೇಶಕ ಬಿ. ಜಯರಾಮ್ ನೆಲ್ಲಿತ್ತಾಯ ಅವರು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಲಕ್ಷ್ಮೀಪೂಜೆಯ ಉದ್ದೇಶ ಮತ್ತು ಮಹತ್ವದ ಬಗ್ಗೆ ಮಾಹಿತಿ ನೀಡಿದರು.ಉಪನ್ಯಾಸಕಿ ಡಾ.ಪಿ.ಎಚ್. ವಿಜಯಲಕ್ಷ್ಮಿ ಅವರು ಧರ್ಮದಿಂದ ಕೆಲಸ ಮಾಡುವ ಮೂಲಕ ಸಾಧನೆ ಮಾಡಬೇಕು. ಧರ್ಮಕ್ಷೇತ್ರ ಆಗಬೇಕೇ ಹೊರತು ಕುರುಕ್ಷೇತ್ರ ಆಗಬಾರದು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಸಾರ್ವಜನಿಕ ಕಾರ್ಯಕ್ರಮಗಳನ್ನು ಮಾಡಿ ಸಮಾಜದ ಹಿತರಕ್ಷಣೆ ಮಾಡುತ್ತಿದ್ದಾರೆ ಎಂದರು.ಆಶಾ ಪುರುಷೋತ್ತಮ್, ಬಿ. ಜಯರಾಮ್ ನೆಲ್ಲಿತ್ತಾಯ, ವಿ. ವಿಜಯ್ ಕುಮಾರ್ ನಾಗನಾಳ, ಸಿ. ದೇವಿಕಾ, ಸಿ. ಮಂಜುಗೌಡ, ಸಿ. ಮಾದೇಶ್, ಟಿ. ನಾರಾಯಣ್, ಬಸವರಾಜು, ಜ್ಯೋತಿ, ಸುಜಾತಾ, ಪಿ. ಶಶಿರೇಖಾ, ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಪೂಜಾ ಸಮಿತಿ ಸದಸ್ಯರು ಇದ್ದರು.ಯೋಜನಾಧಿಕಾರಿ ಶಶಿರೇಖಾ ಸ್ವಾಗತಿಸಿದರು. ವಲಯದ ಮೇಲ್ವಿಚಾರಕಿ ಸುನೀತಾ ವಂದಿಸಿದರು.